ಬಂಟ್ವಾಳ :ಸೆ.15ರಂದು ಪ್ರಜಾಪ್ರಭುತ್ವ ಉಳಿವಿಗಾಗಿ ಹಮ್ಮಿಕೊಂಡಿದ್ದ ಅಂತರಾಷ್ಟೀಯ ಪ್ರಜಾಪ್ರಭುತ್ವ ದಿನ ಹಾಗೂ ಮಾನವ ಸರಪಳಿಯ ಪ್ರಯುಕ್ತ ರಾಷ್ಟ್ರೀಯ ಹೆದ್ದಾರಿ ಪಕ್ಕ ಸಸಿ ನೆಡುವ ಕಾರ್ಯಕ್ರಮ ತುಂಬೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಡೆಯಿತು. ತುಂಬೆ ಗ್ರಾ ಪಂ ಅಧ್ಯಕ್ಷೆ ಜಯಂತಿ ಕೇಶವ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾ ಪಂ ಉಪಾಧ್ಯಕ್ಷ ಗಣೇಶ್ ಸಾಲಿಯಾನ್ ,ಮಾಜಿ ಜಿ ಪಂ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ಫಾದರ್ ಮುಲ್ಲಾರ್ ಸಂಸ್ಥೆಯ ಅಡಳಿತಾಧಿಕಾರಿ ರೇ ಫಾ/ ಸಿಲ್ವೆಸ್ಟರ್ ವಿನ್ಸೆಂಟ್ ಲೋಬೊ, ನಿಕಟ ಪೂರ್ವ ಅಧ್ಯಕ್ಷ ಪ್ರವೀಣ್ ಬಿ ತುಂಬೆ ,ಗ್ರಾ ಪಂ ಸದಸ್ಯರಾದ ಮಹಮ್ಮದ್ ಝಹೂರ್ ,ಅಬ್ದುಲ್ ಅಝೀಜ್, ಇಬಾಹಿಂ ವಳವೂರು,ಶಶಿಕಲಾ ಮನೋಹರ್,ನೋಡಲ್ ಅಧಿಕಾರಿ ಪ್ರದೀಪ್ ಡಿಸೋಜಾ, ಪಂಚಾಯತ್ ಅಭಿವೃದ್ದಿ ಅಧಿಕಾರಿ ಶಿವುಲಾಲ್ ಚವ್ಹಾನ್,ದ್ವಿತೀಯ ದರ್ಜೆ ಲೆಕ್ಕ ಸಹಾಯಕಿ ಚಂದ್ರಕಲಾ ,ಪಂಚಾಯತ್ ಸಿಬ್ಬಂದಿ ವರ್ಗ ಹಾಗೂ ಮಾನವ ಸರಪಳಿಯಲ್ಲಿ ಬಿ ಎ ಪದವಿ ಪೂರ್ವ ಶಿಕ್ಷಣ ಸಂಸ್ಥೆಯ ಪ್ರಾಚಾರ್ಯರಾದ ವಿ ಸುಬ್ರಮಣ್ಯ ಭಟ್, ಕುನಿಲ್ ಸಂಸ್ಥೆಯ
ಮುಖ್ಯ ಶಿಕ್ಷಕಿ ಸಲೀನಾ ಎಂ ಬಿ, ತುಂಬೆ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕಿ ಶಕುಂತಲಾ ಹಾಗೂ ಎಲ್ಲಾ ವಿದ್ಯಾರ್ಥಿಗಳು, ಶಿಕ್ಷಕ ವರ್ಗ, ಆಡಳಿತ ಮಂಡಳಿ ಭಾಗವಹಿಸಿ ಸಹಕರಿಸಿದರು.
ಪ್ರಮುಖರಾದ ಮೋನಪ್ಪ ಮಜಿ ,ಮುಸ್ತಾಫ ಅರೇಕಲ,ಬಿ ಎ ಐಟಿಐ ಪ್ರಾಂಶುಪಾಲ ನವೀನ್, ಕಲಾ ಪೋಷಕ ಸದಾಶಿವ ಡಿ ತುಂಬೆ, ಪ್ರಕಾಶ್ ಬಿ ಶೆಟ್ಟಿ, ಜಗದೀಶ ಗಟ್ಟಿ,ದೇವಾದಾಸ್ ಪರ್ಲಕ್ಕೆ,ಪ್ರಶಾಂತ್ ಕೊಟ್ಟಾರಿ ತುಂಬೆ,ಇರ್ಪಾನ್ ತುಂಬೆ, ಮನೋಹರ ಪರ್ಲಕ್ಕೆ, ಚಂದ್ರಹಾಸ ಕಡೆಗೋಳಿ, ದಿನೇಶ್‌ಪರ್ಲಕ್ಕೆ ,ರಂಜಿತ್ ಮಜಿ, ತುಂಬೆ ಬಿ ಎ ಶಾಲಾ ಮ್ಯಾನೇಜರ್ ಅಬ್ದುಲ್ ಕಬೀರ್, ಪಿ ಟಿ ಎ ಅಧ್ಯಕ್ಷ ನಿಸಾರ್ ಅಹಮದ್ ಮತ್ತಿತರರು ಉಪಸ್ಥಿತರಿದರು.
















