ತುಂಬೆ: ಗೋ ಹತ್ಯೆ, ವಿಧ್ವಂಸಕ ಕೃತ್ಯ: ಭಾ ಜ ಪಾ, ನಿಯೋಗದಿಂದ ಪೊಲೀಸ್ ಠಾಣಾಧಿಕಾರಿಗೆ ಮನವಿ.

Coastal Bulletin
ತುಂಬೆ: ಗೋ ಹತ್ಯೆ, ವಿಧ್ವಂಸಕ ಕೃತ್ಯ: ಭಾ ಜ ಪಾ, ನಿಯೋಗದಿಂದ ಪೊಲೀಸ್ ಠಾಣಾಧಿಕಾರಿಗೆ ಮನವಿ.

ಬಂಟ್ವಾಳ: ತುಂಬೆ ಗ್ರಾಮದ ವಳವೂರು ನಡಿಬೆಟ್ಟು ನಿವಾಸಿ ಕಾರ್ತಿಕ್ ಎಂಬವರು ಮೇಯಲು ಬಿಟ್ಟ ದನವನ್ನು ಯಾರೋ ಕಿಡಿಗೇಡಿಗಳು ಸ್ಥಳದಲ್ಲೇ ಕೊಂದು ಪರಾರಿಯಾದ ಘಟನೆಗೆ ಸಂಬಂಧಿಸಿದಂತೆ ಈ ವಿದ್ವಂಸಕ ಕೃತ್ಯವನ್ನು ಮಾಡಿದ ಆರೋಪಿಗಳನ್ನು ಪತ್ತೆ ಹಚ್ಚಿ ಸೂಕ್ತ ತನಿಖೆಯನ್ನು ನಡೆಸಿ ಆದಷ್ಟು ಬೇಗ ಬಂದಿಸಬೇಕೆಂದು ಭಾರತೀಯ ಜನತಾ ಪಾರ್ಟಿ, ಮಂಗಳೂರು ಮಂಡಲದ ಅಧ್ಯಕ್ಷರಾದ ಜಗದೀಶ್ ಆಳ್ವ ಕುವೆತ್ತಬೈಲು ಇವರ ನೇತೃತ್ವದ ನಿಯೋಗ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿಗೆ ಮನವಿ ಸಲ್ಲಿಸಿತು.

ಈ ಸಂದರ್ಭದಲ್ಲಿ ಮಂಡಲದ ಉಪಾಧ್ಯಕ್ಷರಾದ ಮನೋಜ್ ಆಚಾರ್ಯ ನಾಣ್ಯ ಮಂಡಲದ ಹಿಂದುಳಿದ ಮೋರ್ಚಾದ ಅಧ್ಯಕ್ಷರಾದ ಗಣೇಶ್ ಸುವರ್ಣ ತುಂಬೆ, ಪುದು ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ಸುಕೇಶ್ ಶೆಟ್ಟಿ ತೇವು, ಪ್ರಧಾನ ಕಾರ್ಯದರ್ಶಿಯಾದ ರೂಪೇಶ್ ಜ್ಯೋತಿಗುಡ್ಡೆ, ಮಂಗಳೂರು ಮಂಡಲದ ರೈತ ಮೋರ್ಚಾದ ಅಧ್ಯಕ್ಷರಾದ ಪದ್ಮನಾಭ ಗಟ್ಟಿ, ಮಂಡಲದ ಉಪಾಧ್ಯಕ್ಷರಾದ ಹುಕ್ರಪ್ಪ ನಾಯ್ಕ, ಮಂಗಳೂರು ಮಂಡಲದ ಯುವ ಮೋರ್ಚಾದ ಅಧ್ಯಕ್ಷರಾದ ಮುರಳಿ ಕೊಣಾಜೆ ತುಂಬೆ ಶಕ್ತಿ ಕೇಂದ್ರದ ಅಧ್ಯಕ್ಷರಾದ ಸುಶಾನ್ ಆಚಾರ್ಯ, ತುಂಬೆ ಗ್ರಾಮ ಪಂಚಾಯತ್ ಸದಸ್ಯರಾದ ಕಿಶೋರ್ ರಾಮಲ್ ಕಟ್ಟೆ, ಮನೋಹರ್ ಪೆರ್ಲಕ್ಕೆ , ರಾಘವ ಬಂಗೇರ ಪೆರ್ಲಬೈಲು ಹಾಗೂ ಪ್ರಮುಖರು ಉಪಸ್ಥಿತರಿದ್ದರು.

ಘಟನೆಯ ಹಿನ್ನಲೆ :

ತುಂಬೆ ವಳವೂರು ನಡಿಬೆಟ್ಟು ನಿವಾಸಿ ಕಾರ್ತಿಕ್ ಎಂಬವರಿಗೆ ಸೇರಿದ ದನವನ್ನು ಯಾರೋ ಕಿಡಿಗೇಡಿಗಳು ಕಳವು ಮಾಡಿ

ಬಳಿಕ ವದೆ ಮಾಡಿರುವ ಘಟನೆ ಸ ಅಗಸ್ಟ್ 14ರಂದು ಸಂಜೆ ವೇಳೆ ನಡೆದಿತ್ತು.

ತುಂಬೆ ಭಾರತ್ ಅಗ್ರೋವೆಟ್ ಸಮೀಪದ ಮೈದಾನದಲ್ಲಿ ಮೇಯುತ್ತಿದ್ದು , ಅದನ್ನು ಮನೆಗೆ ಕರೆದುಕೊಂಡು ಹೋಗುವ ವೇಳೆ ಮೂರು ದನಗಳ ಪೈಕಿ ಸುಮಾರು 7 ವರ್ಷದ ಒಂದು ದನ‌ ಕಾಣೆಯಾಗಿತ್ತು.

ಸುಮಾರು 25 ಸಾವಿರ ರೂ ಮೌಲ್ಯದ ದನ ಇದಾಗಿದ್ದು, ಮೈದಾನದಲ್ಲಿ ಹುಡುಕಾಟ ನಡೆಸಿದಾಗ ಪತ್ತೆಯಾಗದ ಇದ್ದು ಬಳಿಕ ನೇತ್ರಾವತಿ ನದಿಗೆ ಸಂಪರ್ಕಿಸುವ ತೋಡು ಬದಿಯಲ್ಲಿ ಪೊದೆಗಳಿಂದ ಕೂಡಿದ ನಿರ್ಜನ ಪ್ರದೇಶದಲ್ಲಿ ದನವನ್ನು ಹತ್ಯೆ ಮಾಡಿ ಮಾಂಸ ಮಾಡಿದ ಕುರುಹುಗಳು ಪತ್ತೆಯಾಗಿವೆ. ಕಾಣೆಯಾದ ದನದ ಮೈಬಣ್ಣ ಹೋಲುವ ಚರ್ಮ ಸಹಿತ ಇತರೆ ಕಳೆಬರಹ ಅಲ್ಲಿ ಸಿಕ್ಕಿದ್ದು, ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಇದೀಗ ಆರೋಪಿಗಳಿಗಾಗಿ ಪೋಲೀಸ್ ತಂಡ ತೀವ್ರ ಕಾರ್ಯಚರಣೆ ನಡೆಸುತ್ತಿದ್ದಾರೆ.

Leave a Comment