ಬಂಟ್ವಾಳ :ಸೇವಾ ಭಾರತಿ ಬಂಟ್ವಾಳ ತಾಲೂಕು ಮತ್ತು ಸೇವಾ ಜಾಗರಣ ತುಂಬೆ ವತಿಯಿಂದ ಕೀರ್ತಿಶೇಷ ಕೊಡ್ಮಾಣ್ ಕಾಂತಪ್ಪ ಶೆಟ್ಟಿ ಸಂಸ್ಮರಣಾರ್ಥ ಶ್ರೀ ಶಾರದಾ ಸಭಾ ಭವನ ತುಂಬೆಯಲ್ಲಿ ರಕ್ತದಾನ ಶಿಬಿರ ನಡೆಯಿತು.
ಶಿಬಿರದಲ್ಲಿ ಮುಖ್ಯ ಅಭ್ಯಾಗತರಾಗಿ ಶ್ರೀರಾಮ ವಿದ್ಯಾ ಸಂಸ್ಥೆ ಫರಂಗಿಪೇಟೆಯ ಮುಖ್ಯೋಪಾಧ್ಯಾಯ ಕೆ.ಆರ್ ದೇವದಾಸ್ ಕೊಡ್ಮಾಣ್ ಮಾತನಾಡಿ ಶುಭ ಹಾರೈಸಿದರು. ಮುಖ್ಯ ಅಥಿತಿಗಳಾದ ಸಹೃದಯಿ ಚಾರಿಟೇಬಲ್ ಟ್ರಸ್ಟ್ ಮಂಗಳೂರು ಇದರ ಪ್ರಮುಖರಾದ ಯುವರಾಜ್ ಎಂ.ಕೆ ಹಾಗೂ ಶೇಖರ ಪೂಜಾರಿ, ನಿವೃತ್ತ ಅಧಿಕಾರಿ, ನೀರು ಸರಬರಾಜು ಇಲಾಖೆ ಭಾಗವಹಿಸಿದರು.ಕಾರ್ಯಕ್ರಮದಲ್ಲಿ ಹಿಂದೂ ಮುಖಂಡರಾದ ರಾಧಾಕೃಷ್ಣ ಅಡ್ಯಾಂತಯ, ರತ್ನಾಕರ್ ಕಲ್ಲಡ್ಕ
ಮತ್ತು ನರಸಿಂಹ ಮಾಣಿ ಮತ್ತು ಸೇವಾ ಜಾಗರಣ ಪ್ರಮುಖರಾದ ವಿಜಯ್ ಕುಮಾರ್ ಕಜೆಕಂಡ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ 60 ರಕ್ತದಾನಿಗಳು ರಕ್ತದಾನ ಮಾಡಿದರು. ಇದರ ಜೊತೆಗೆ ಪರಿಸರದಲ್ಲಿ ಅಸೌಖ್ಯದಿಂದಿರುವ ಸುಮಾರು 10 ಮಂದಿಗೆ ಸೇವಾ ಜಾಗರಣ ವತಿಯಿಂದ ಆರ್ಥಿಕವಾಗಿ ಧನ ಸಹಾಯ ನೀಡಲಾಯಿತು. ಸುಶಾನ್ ಬೊಳ್ಳಾರಿ ಸ್ವಾಗತಿಸಿ, ಜಗದೀಶ್ ಕಡೆಗೋಳಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.









