ಪಲ್ಲಮಜಲು: ಮಹಾಪವಮಾನ ಯಾಗ, ಆಕರ್ಷಕ ಹಸಿರುವಾಣಿ ಹೊರೆ ಕಾಣಿಕೆ ಮೆರವಣಿಗೆ.

Coastal Bulletin
ಪಲ್ಲಮಜಲು: ಮಹಾಪವಮಾನ ಯಾಗ, ಆಕರ್ಷಕ ಹಸಿರುವಾಣಿ ಹೊರೆ ಕಾಣಿಕೆ ಮೆರವಣಿಗೆ.

ಬಂಟ್ವಾಳ: ಪಲ್ಲಮಜಲು ಶ್ರೀ ರಾಮ ಭಕ್ತಾಂಜನೇಯ ಭಜನಾ ಮಂದಿರ, ಶ್ರೀ ಮಹಾಪವಮಾನ ಯಾಗ ಸಮಿತಿ ಅಶ್ರಯದಲ್ಲಿ ಮೇ 18ರಂದು ದೈವಜ್ಞ ಶ್ರೀ ಶಶಿಕುಮಾರ್ ಪಂಡಿತ್ ಆರ್ ಮಾರ್ಗದರ್ಶನದಲ್ಲಿ ವೇದಮೂರ್ತಿ ಶ್ರೀ ವಿನಾಯಕ ಕಾರಂತ ಪೌರೋಹಿತ್ಯದಲ್ಲಿ ನಡೆಯಲಿರುವ 108 ಪರಮಾನ ಪಾರಾ ಯಣ ಸಹಿತ ಮಹಾ ಪವಮಾನ ಯಾಗ, 108 ಲಕ್ಷ ಶ್ರೀರಾಮ ಜಪಯಜ್ಞ, ಶ್ರೀ ಆಂಜನೇಯ ದೇವರಿಗೆ ಸಹಸ್ರ ಕದಳಿ ಯಾಗ ಹಾಗೂ ವಿಷ್ಣು ಸಹಸ್ರನಾಮ ಪಾರಾಯಣಕ್ಕೆ ಹಸಿರುವಾಣಿ ಹೊರೆ ಕಾಣಿಕೆ ಮೆರವಣಿಗೆಗೆ ಮೇ 16ರಂದು ಶುಕ್ರವಾರ ಸಂಜೆ ಬಿ.ಸಿ.ರೋಡು ಕೈಕಂಬದ ಪೊಳಲಿ ದ್ವಾರದ ಬಳಿ ಪೊಳಲಿ ರಾಮಕೃಷ್ಣ ತಪೋವನದ ಸ್ವಾಮಿ ವಿವೇಕಾ ಚೈತನ್ಯಾನಂದಜಿ ತೆಂಗಿನಕಾಯಿ ಒಡೆಯುವ ಮೂಲಕ ಚಾಲನೆ ನೀಡಿದರು.

ಆಕರ್ಷಕ ನೃತ್ಯ ಭಜನೆ, ತಾಲೀಮು, ಚೆಂಡೆ, ವಾದ್ಯ, ಕೊಂಬು 20ಕ್ಕೂ ಹೆಚ್ಚು ವಾಹನಗಳಲ್ಲಿ ಹೊರೆಕಾಣಿಕೆಗಳು ಮೊಡಂಕಾಪು ರಸ್ತೆಯಾಗಿ ಪಲ್ಲಮಜಲು ಭಜನಾ ಮಂದಿರದಲ್ಲಿ ಸಂಪನ್ನಗೊಂಡಿತು.

ಈ ಸಂದರ್ಭದಲ್ಲಿ ಮಹಾಪವಮಾನ ಯಾಗ ಸಮಿತಿಯ ಅಧ್ಯಕ್ಷ ಸಂದೇಶ್ ಶೆಟ್ಟಿ ಅರೆಬೆಟ್ಟು, ಪ್ರಧಾನ ಕಾರ್ಯದರ್ಶಿ ರಾಮದಾಸ್ ಬಂಟ್ವಾಳ, ಶ್ರೀರಾಮ ಭಕ್ತಾಂಜನೇಯ ಭಜನಾ ಮಂದಿರ ಗೌರವಾಧ್ಯಕ್ಷ ಪಿ. ಸೇಸಪ್ಪ ದಾಸಯ್ಯ, ಅಧ್ಯಕ್ಷ ಗಣೇಶ್ ದಾಸ್ ಕಾಮೇರಿಕೋಡಿ, ಪ್ರಧಾನ ಕಾರ್ಯದರ್ಶಿ ಸತೀಶ್ ಪಲ್ಲಮಜಲು, ಕೋಶಾಧಿಕಾರಿ ಮನೋಜ್ ಕುಮಾರ್,ಸಂಚಾಲಕ ಸಂದೇಶ್ ದಾರಿಬಾಗಿಲು, ಉಪಾಧ್ಯಕ್ಷರಾದ ರಮೇಶ್ ಸುವರ್ಣ,ಸದಾಶಿವ ಪೂಜಾರಿ, ರಾಜೇಶ್ ಗೌಡ ಗೋಳಿನೆಲ, ವಿನೋದ ಭಾಸ್ಕರ, ಸ್ವಾಗತ ಸಮಿತಿ ಸಂಚಾಲಕ ದೇವಪ್ಪ ಪೂಜಾರಿ ಬಾಳಿಕೆ, ಹೊರೆಕಾಣಿಕೆ ಸಮಿತಿ ಸಂಚಾಲಕ ತಾರನಾಥ ಕೊಟ್ಟಾರಿ ತೇವು, ಊಟೋಪಚಾರ

ಸಮಿತಿ ಸಂಚಾಲಕ ಶೇಖರ ಶೆಟ್ಟಿ ಪೊಟ್ಟುಗುಡ್ಡೆ, ನಗರ ಅಲಂಕಾರ ಸಮಿತಿ ಸಂಚಾಲಕ ಭವನ್ ಪಲ್ಲಮಜಲು, ರಕ್ಷಣೆ ಸಮಿತಿ ಸಂಚಾಲಕ ರಮೇಶ್ ಪಲ್ಲಮಜಲು, ಜನ ಮತ್ತು ಸ್ವಚ್ಛತೆ ಸಮಿತಿ ಸಂಚಾಲಕ ದಿವಾಕರ ಕುಲಾಲ್ ಮಿತ್ತಪರಾರಿ, ಬಿ.ಸಿ.ರೋಡ್ ರಕ್ರೇಶ್ವರಿ ದೇವಸ್ಥಾನದ ಅಧ್ಯಕ್ಷ ವಿಶ್ವನಾಥ, ಉಗ್ರಾಣ ಸಮಿತಿ ಸಂಚಾ ಲಕ ಉಮೇಶ್ ಗಾಂದೋಡಿ, ಭಜನಾ ಮಂಡಳಿ ನಿರ್ವಹಣೆಯ ಚಂದ್ರಕಾಂತ ಸಾಲ್ಯಾನ್, ಶ್ರೀನಿವಾಸ ಭಂಡಾರಿ ಅಮ್ಮಾಡಿ, ಯತೀಶ್ ಕೂರಿಯಾಳ, ಆರ್ಥಿಕ ಸಮಿತಿಯ ಮಹಾಬಲ ಶೆಟ್ಟಿ ಪಲ್ಲಮಜಲು, ರವೀಂದ್ರ ಕಂಬಳಿ, ಪ್ರಭಾಕರ ಪ್ರಭು ಕರ್ಪೆ, ಶ್ರೀ ಮಹಾಪವಮಾನ ಯಾಗ ಮಾತೃ ಸಮಿತಿಯ ಅಧ್ಯಕ್ಷೆ ಸುಲೋಚನಾ ಜಿ.ಕೆ. ಭಟ್, ಸಂಚಾಲಕಿ ಜಯಶ್ರೀ ಕರ್ಕೇರ ಅಬ್ಬೆಟ್ಟು, ಕಾರ್ಯದರ್ಶಿ ಮಣಿಮಾಲ ಬಿ. ಶೆಟ್ಟಿ ಮತ್ತಿತರರಿದ್ದರು.

Leave a Comment