Coastal Bulletin

ಬಂಟ್ವಾಳ : ಮಾರಾಟ ಮಾಡಲು ಅವಕಾಶ ಇಲ್ಲದ ಸಿಮೆಂಟ್ ಚೀಲಗಳು ಬಿಜೆಪಿ ಮುಖಂಡನ ಮನೆಯಲ್ಲಿ ದಾಸ್ತಾನು ಇಡಲಾಗಿದ್ದು, ಅವರ ಮನೆ ಕಟ್ಟಲು ಸಿಮೆಂಟ್ ಬಳಕೆ ಮಾಡಲಾಗಿದೆ ಎಂದು ಆರೋಪಿಸಿ,ಇದರ ಬಗ್ಗೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ರಾಜೀವ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಗದೀಶ್ ಕೊಯಿಲ ಒತ್ತಾಯಿಸಿದರು.

ಅವರು ಬಿಸಿರೋಡಿನ ಪ್ರೆಸ್ ಕ್ಲಬ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಪಲ್ಲಮಜಲು ಮತ್ತು ಅರಳ ಎಂಬಲ್ಲಿ ಮಾರಾಟಕ್ಕೆ ಅವಕಾಶ ವಿಲ್ಲದ ಸಿಮೆಂಟ್ ಚೀಲಗಳು ದಾಸ್ತಾನು ಇಡಲಾಗಿದ್ದು, ಈ ಸಿಮೆಂಟ್ ಬಳಸಿ ಬಿಜೆಪಿ ಮುಖಂಡ ಮನೆ ನಿರ್ಮಾಣ ಮಾಡಿದ್ದಾರೆ ಎಂದು ಅರೋಪ ಮಾಡಿದ ಅವರು, ಸಿಮೆಂಟ್ ಕಳ್ಳರು ಯಾರು ? ಹಗರಣ ಮಾಡಿದ ವ್ಯಕ್ತಿಗಳು ಯಾರು ಎಂಬುದನ್ನು ಅಧಿಕಾರಿಗಳು ಪತ್ತೆ

ಹಚ್ಚಿ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಕಂದಾಯ ಇಲಾಖೆ ಮತ್ತು ಪಿಡಿಒ ಇಲಾಖೆಯವರು ಹೊಂದಾಣಿಕೆಯಿಂದ ಕೆಲಸ ಮಾಡವುದಿಲ್ಲ,ಸಮಗ್ರವಾದ ಮಾಹಿತಿಯನ್ನು ಅಧಿಕಾರಿಗಳು ನೀಡುತ್ತಿಲ್ಲ, ಹಾಗಾಗಿ ‌ಕೂಡಲೇ ಅಧಿಕಾರಿಗಳು ಸೂಕ್ತವಾದ ತನಿಖೆ ನಡೆಸಿ ಅರೋಪಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯ ಮಾಡಿದರು.

ಪತ್ರಿಕಾಗೋಷ್ಟಿಯಲ್ಲಿ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿಕುಂದರ್, ಪ್ರಮುಖರಾದ ಸುರೇಶ್ ಜೊರಾ, ಪದ್ಮನಾಭ ಸಾಮಂತ ಉಪಸ್ಥಿತರಿದ್ದರು.

Leave a Comment