ಬಂಟ್ವಾಳ: ಶ್ರೀರಾಮ ಪ್ರಥಮದರ್ಜೆ ಮಹಾವಿದ್ಯಾಲಯ, ಕಲ್ಲಡ್ಕ ಇಲ್ಲಿ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ, ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಮಂಗಳೂರು ಹಾಗೂ ಶ್ರೀರಾಮ ಪದವಿ ಕಾಲೇಜು ಕಲ್ಲಡ್ಕ ಇದರ ಸಂಯುಕ್ತ ಆಶ್ರಯದಲ್ಲಿ ಬೃಹತ್ ಉದ್ಯೋಗ ಮೇಳ ಡಿ.17 ಶನಿವಾರ ಬೆಳಗ್ಗೆ 10.00ಕ್ಕೆ ಉದ್ಘಾಟನೆಗೊಳ್ಳಲಿದೆ.
ಕಾರ್ಯಕ್ರಮವನ್ನು ಬಂಟ್ವಾಳ ತಾಲೂಕು ವಿಧಾನಸಭಾ ಕ್ಷೇತದ್ರ ಶಾಸಕ ಶ್ರೀ ರಾಜೇಶ್ ನಾಯಕ್ ಉಳಿಪ್ಪಾಡಿಗುತ್ತು ಉದ್ಘಾಟಿಸಲಿದ್ದಾರೆ. ಮಾನ್ಯ ಉನ್ನತ ಶಿಕ್ಷಣ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ವಿಜ್ಞಾನ ಮತ್ತು ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಸಚಿವ ಕರ್ನಾಟಕ ಸರಕಾರ ಡಾ| ಅಶ್ವತ್ಥ ನಾರಾಯಣ, ಮಾನ್ಯ ಸಚಿವರು, ಇಂಧನ, ಕನ್ನಡ ಮತ್ತು ಸಂಸ್ಕೃತಿ, ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕರ್ನಾಟಕ ಸರಕಾರ ಶ್ರೀ ಸುನಿಲ್ ಕುಮಾರ್ ಘನ ಉಪಸ್ಥಿತರಿರುತ್ತಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀರಾಮ ವಿದ್ಯಾಕೇಂದ್ರದ ಅಧ್ಯಕ್ಷ ಶ್ರೀ ನಾರಾಯಣ ಸೋಮಾಯಾಜಿ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪೂರ್ವ ರಾಜ್ಯಪಾಲ, ಲಯನ್ಸ್ ಜಿಲ್ಲೆ 3170 ಲಯನ್ ಡಾ| ಗೀತ್ಪ್ರಕಾಶ್, ಆಗಮಿಸಲಿದ್ದಾರೆ. ಅತಿಥಿಗಳಾಗಿ ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕ ಇದರ ಸಂಚಾಲಕ ವಸಂತ ಮಾಧವ, ಬಾಳ್ತಿಲ ಗ್ರಾಮ ಪಂಚಾಯತ್ ಅಧ್ಯಕ್ಷರು ಭ. ಹಿರಣ್ಮಯಿ ಆಗಮಿಸಲಿದ್ದಾರೆ.
ಎಸ್ಎಸ್ಎಲ್ಸಿ, ಪಿಯುಸಿ, ಪದವಿ, ಸ್ನಾತಕೋತ್ತರ ಪದವಿ(ಎಂಎ, ಎಂಕಾಂ ಎಂಎಸ್ಸಿ), ಐಟಿಐ, ಡಿಪ್ಲೊಮಾ, ಬಿಇ, ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಉದ್ಯೋಗ ಪಡೆಯಲು
ಆಸಕ್ತರಿರುವ ಉದ್ಯೋಗಾಕಾಂಕ್ಷಿಗಳೂ(ಬಿಎಡ್) ಭಾಗವಹಿಸಬಹುದು.
ಗ್ಲೋ ಟಚ್ ಟೆಕ್ನಾಲಜೀಸ್ (ದಿಯಾ ಸಿಸ್ಟಮ್ಸ್), ರಿಲಾಯನ್ಸ್ ಇನ್ಫೊ ಕಾಮ್ ಲಿಮಿಟೆಡ್, ಮಾಂಡೋವಿ ಮೋಟಾರ್ಸ್ ಪ್ರೈ.ಲಿ, ಫ್ಲಾಂಟ್ ಟೆಕ್ ಇಂಡಸ್ಟ್ರಿಯಲ್ ಲಿ., ಅಪೋಲೋ ಫಾರ್ಮಸಿ, ಇನ್ವೆಂಜರ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್, ಬ್ರೈಟೆಕ್ಸ್ ಇಂಟರ್ ನ್ಯಾಷನಲ್ ಪ್ರೈವೇಟ್ ಲಿಮಿಟೆಡ್, ಅದ್ವೈತ್ ಹುಂಡೇ, (ಆಕ್ಸಿಸ್ ಬ್ಯಾಂಕ್), ಟಿ.ವಿ.ಎಸ್ ಸಾಯಿರಾಧಾ ಮೋಟಾರ್ಸ್, ಹೀರೋ ಪಿಟ್ ಸ್ಟಾಪ್ ಮೋಟಾರ್ಸ್, ಅರವಿಂದ್ ಮೋಟಾರ್ಸ್, ಐ.ಎಂ.ಸಿ.ಕೆ ಮೆಡ್ಫ್ಲಸ್, ಕೆ.ಎಸ್.ಆರ್.ಟಿ.ಸಿ., ಡೋಮಿನೆಂಟ್ ಗ್ರೂಪ್, ಕೆಫೆ ಕಾಫಿ ಡೇ, , ಐ.ಸಿ.ಎ.ಎಫ್, ಮತ್ತೂಟ್ ಪಿನಾನ್ಸ್, ಏ.ಜೆ.ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ, ಪ್ರಕಾಶ್ ರೀಟೇಲ್ ಪ್ರೈ.ಲಿ., ಶ್ರೀ ಸಾಯಿ ಎಂಟರ್ಪ್ರೈಸಸ್, ಹೋಂಡಾ ಸನ್ಬ್ರೈಟ್ ಗ್ರೂಪ್, ಕಾಂಚನಾ ಹುಂಡೈ, , ಎಸ್.ವಿ ರಿಕ್ರೂಟ್ ಟೆಕ್, ಈಶ್ ಮೋಟಾರ್ಸ್. ಗೋನ್ ಇನ್ಸಿಸ್ಟೂಷನ್ ಇಂಟರ್ನ್ಯಾಷನಲ್ ಎಜುಕೇಶನ್ ಪ್ರೈ.ಲಿ. ಕೊಚ್ಚಿನ್, ಕೇರಳ ಇತ್ಯಾದಿ ಕಂಪೆನಿಗಳು ಭಾಗವಹಿಸಲಿವೆ. ಹಾಗೂ ಯಾವುದೇ ನೋಂದಣಿ ಶುಲ್ಕ ಇರುವುದಿಲ್ಲ ಎಂದು ಕಾಲೇಜಿನ ಪ್ರಾಂಶುಪಾಲ ಕೃಷ್ಣಪ್ರಸಾದ ಕಾಯರ್ಕಟ್ಟೆ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.














