ಬಂಟ್ವಾಳ :ಶ್ರೀ ಸಾಯಿ ಕಿಡ್ಸ್ ಜೋನ್ ವಿದ್ಯಾಸಂಸ್ಥೆ ವಿವೇಕ ನಗರ ಬಿ ಸಿ ರೋಡ್ ಇದರ ಅಶ್ರಯದಲ್ಲಿ ವನಮಹೋತ್ಸವ ಕಾರ್ಯಕ್ರಮವು ಸಂಸ್ಥೆಯ ಆವರಣದಲ್ಲಿ ನಡೆಯಿತು.
ಬಂಟ್ವಾಳ ನ್ಯೂಸ್ ಇದರ ಸಂಪಾದಕ ಹಾಗೂ ವಿಜಯ ಕರ್ನಾಟಕ ದೈನಿಕದ ಹಿರಿಯ ವರದಿಗಾರ ಹರೀಶ್ ಮಾಂಬಾಡಿ ಇವರು ಶಾಲಾ ವಠಾರದಲ್ಲಿ ಗಿಡಗಳನ್ನು ನೆಟ್ಟು ವಿವಿಧ ತಳಿಯ ಗಿಡಗಳನ್ನು ಪೋಷಕರಿಗೆ ವಿತರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಪರಿಸರವೇ ಮನುಷ್ಯನ ಉಸಿರು .ಮರಗಳು ಪರಿಸರದ ಜೀವಾಳ.ಪರಿಸರದ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯ ಎಂದು ಹೇಳಿದರು.
ಸಭೆಯಲ್ಲಿ ಶಾಲಾ ರಕ್ಷಕ
ಶಿಕ್ಷಕ ಸಂಘದ ಅಧ್ಯಕ್ಷ ಜ್ಞಾನೇಶ ರಾವ್, ಉಪಾಧ್ಯಕ್ಷ ಸುಪ್ರಿತ,ಕೋಶಾಧ್ಯಕ್ಷ ದೇವೇಂದ್ರಪ್ಪ ಡಿ .ಶಾಲಾ ಸಂಚಾಲಕ ಐತಪ್ಪ ಪೂಜಾರಿ .ಆಡಳಿತ ಮಂಡಳಿ ಸದಸ್ಯ ರಾಜೇಶ್ ಅಮೀನ್ ಉಪಸ್ಥಿತರಿದ್ದರು.
ವಿದ್ಯಾರ್ಥಿನಿ, ರಿಷ ಟಿ ಕುಲಾಲ್ ಪರಿಸರದ ಬಗ್ಗೆ ಮಾತನಾಡಿದರು.ವಿದ್ಯಾರ್ಥಿಗಳಾದ ಅಭಿರಾಮ್ ಭಂಡಾರ್ಕರ್ ಸ್ವಾಗತಿಸಿ, ಕೃತಿಕ್ಷ ವಂದಿಸಿ, ಗಗನ್ ದೀಪು ಕಾರ್ಯಕ್ರಮ ನಿರೂಪಿಸಿದರು.ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.









