ಮಾಣಿಲ: ಜೂ.30ರಿಂದ ವರಮಹಾಲಕ್ಷ್ಮಿ ವೃತಾಚರಣೆ, ಬೆಳ್ಳಿಹಬ್ಬ ಸಮಾರೋಪ ಕಾರ್ಯಕ್ರಮ

Coastal Bulletin
ಮಾಣಿಲ: ಜೂ.30ರಿಂದ ವರಮಹಾಲಕ್ಷ್ಮಿ ವೃತಾಚರಣೆ, ಬೆಳ್ಳಿಹಬ್ಬ ಸಮಾರೋಪ ಕಾರ್ಯಕ್ರಮ

ಬಂಟ್ವಾಳ:ಮಾಣಿಲ ಶ್ರೀ ಮಹಾಲಕ್ಷ್ಮಿ ಕ್ಷೇತ್ರದಲ್ಲಿ ಜೂ.30ರಿಂದ ಆ.16ರ ತನಕ 48 ದಿನಗಳ ವರಮಹಾಲಕ್ಷ್ಮಿ ವೃತಾಚರಣೆ ಮತ್ತು ಬೆಳ್ಳಿಹಬ್ಬ ಸಮಾರೋಪ ಕಾರ್ಯಕ್ರಮ ಸಂಭ್ರಮ ಸಡಗರದಿಂದ ನಡೆಯಲಿದ್ದು, ಪ್ರತಿದಿನ ಭಕ್ತರಿಂದ ಭಜನಾ ಸಂಕೀರ್ತನೆ ಮತ್ತು ವಿವಿಧ ಗ್ರಾಮಗಳಿಂದ ಹೊರೆಕಾಣಿಕೆ ಸಮರ್ಪಣೆಯಾಗಲಿದೆ ಎಂದು ಮಾಣಿಲ ಶ್ರೀಧಾಮ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದರು.

ಇಲ್ಲಿನ ಬಿ.ಸಿ.ರೋಡು ಶ್ರೀ ರಕ್ತೇಶ್ವರಿ ದೇವಸ್ಥಾನದಲ್ಲಿ ಶನಿವಾರ ನಡೆದ ಪೂರ್ವಭಾವಿ ಸಮಾಲೋಚನಾ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.

ಕೇಂದ್ರ ಸಮಿತಿ ಅಧ್ಯಕ್ಷ, ವಿಧಾನಪರಿಷತ್ ಮಾಜಿ ಸದಸ್ಯ ಮೋನಪ್ಪ ಭಂಡಾರಿ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ತಂತ್ರಿ ಪ್ರಸಾದ್ ಪಾಂಗಣ್ಣಾಯ, ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಕಲಾವಿದ ಅಶೋಕ್ ಶೆಟ್ಟಿ ಸರಪಾಡಿ, ಬೂಡಾ ಅಧ್ಯಕ್ಷ ಬೇಬಿ ಕುಂದರ್,

ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಎಂ.ತುಂಗಪ್ಪ ಬಂಗೇರ, ಬಿಜೆಪಿ ಮುಖಂಡ ರಾಮದಾಸ್ ಬಂಟ್ವಾಳ್ ವಿವಿಧ ಸಲಹೆ ನೀಡಿದರು. ಪ್ರಮುಖರಾದ ವೀರೇಂದ್ರ ಕುಮಾರ್ ಜೈನ್ ಕಕ್ಯಪದವು, ಕೃಷ್ಣರಾಜ ಜೈನ್ ಪಂಜಿಕಲ್ಲು, ಮಚ್ಚೇಂದ್ರನಾಥ ಸಾಲ್ಯಾನ್, ನಾರಾಯಣ ಪೆನರ್ೆ, ಜನಾರ್ದನ ಬೊಂಡಾಲ ಮತ್ತಿತರರು ಇದ್ದರು. ಟಿ.ತಾರನಾಥ ಕೊಟ್ಟಾರಿ ಪ್ರಾಸ್ತಾವಿಕ ಮಾತನಾಡಿದರು. ಎಚ್ಕೆ ನಯನಾಡು ಸ್ವಾಗತಿಸಿ, ದೇವಪ್ಪ ಕುಲಾಲ್ ಪಂಜಿಕಲ್ಲು ವಂದಿಸಿದರು.

Leave a Comment