ನಾಣ್ಯ : ಕುಲಾಲ ಸುಧಾರಕ ಸಂಘ (ರಿ), 32ನೇ ವಾರ್ಷಿಕ ಮಹಾಸಭೆ ಹಾಗೂ ವಾರ್ಷಿಕೋತ್ಸವ ಸಮಾರಂಭ. ಶ್ರೀ ಸತ್ಯನಾರಾಯಣ ಪೂಜೆ,ಸಾಂಸ್ಕೃತಿಕ,ಸಭಾ ಕಾರ್ಯಕ್ರಮ,ಪ್ರತಿಭಾ ಪುರಸ್ಕಾರ,ವಿದ್ಯಾರ್ಥಿ ಪ್ರೋತ್ಸಾಹ ಧನ ವಿತರಣೆ.

Coastal Bulletin
ನಾಣ್ಯ : ಕುಲಾಲ ಸುಧಾರಕ ಸಂಘ (ರಿ), 32ನೇ ವಾರ್ಷಿಕ ಮಹಾಸಭೆ ಹಾಗೂ ವಾರ್ಷಿಕೋತ್ಸವ ಸಮಾರಂಭ. ಶ್ರೀ ಸತ್ಯನಾರಾಯಣ ಪೂಜೆ,ಸಾಂಸ್ಕೃತಿಕ,ಸಭಾ ಕಾರ್ಯಕ್ರಮ,ಪ್ರತಿಭಾ ಪುರಸ್ಕಾರ,ವಿದ್ಯಾರ್ಥಿ ಪ್ರೋತ್ಸಾಹ ಧನ ವಿತರಣೆ.

ಬಂಟ್ವಾಳ :ಕುಲಾಲ ಸುಧಾರಕ ಸಂಘ (ರಿ.) ಫರಂಗಿಪೇಟೆ ನಾಣ್ಯ, ಮಾರಿಪಳ್ಳ, ಪುದು, ಇದರ 32ನೇ ವಾರ್ಷಿಕ ಮಹಾಸಭೆ ಹಾಗೂ ವಾರ್ಷಿಕೋತ್ಸವ ಸಂಭ್ರಮವು ಮೇ 18ರಂದು ಆದಿತ್ಯವಾರ ಕುಲಾಲ ಸಮುದಾಯ ಭವನ ನಾಣ್ಯ ದಲ್ಲಿ ನಡೆಯಲಿದೆ.

ಕಾರ್ಯಕ್ರಮದ ವಿವರ:

ಬೆಳಿಗ್ಗೆ ಗಂಟೆ 8.00ಕ್ಕೆ : ಗಣಹೋಮ, 9.30ರಿಂದ : ವಾರ್ಷಿಕ ಮಹಾಸಭೆ,ಬಳಿಕ ಶ್ರೀ ಸತ್ಯನಾರಾಯಣ ಪೂಜೆ ಮಧ್ಯಾಹ್ನ ಗಂಟೆ 12.00ರಿಂದ ಮಹಾಪೂಜೆ, ಪ್ರಸಾದ ವಿತರಣೆ, ಸಹಭೋಜನ ನಡೆಯಲಿದೆ

ಮಧ್ಯಾಹ್ನ ಗಂಟೆ 1.30ರಿಂದ ವಾರ್ಷಿಕೋತ್ಸವದ ಸಭಾ ಕಾರ್ಯಕ್ರಮ ನಡೆಯಲಿದ್ದು,ಅಧ್ಯಕ್ಷತೆಯನ್ನು  ಶ್ರೀಮತಿ ಕಮಲಾ ರಮೇಶ್, ಅಧ್ಯಕ್ಷರು, ಕುಲಾಲ ಸುಧಾರಕ ಸಂಘ (ರಿ.) ಫರಂಗಿಪೇಟೆ ಇವರು ವಹಿಸಲಿದ್ದು,ಮುಖ್ಯ ಅತಿಥಿಗಳಾಗಿ ಶ್ರೀ ಸದಾಶಿವ ಕುಲಾಲ್ ಅತ್ತಾವರ, ಅಧ್ಯಕ್ಷರು, ಶ್ರೀ ದೇವಿ ದೇವಸ್ಥಾನ, ಮಂಗಳೂರು, ಶ್ರೀ ಕೃಷ್ಣಪ್ಪ ಬಿ., ಅಧ್ಯಕ್ಷರು, ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘ

(ರಿ.) ಮಯ್ಯರಬೈಲು, ಬಿ.ಸಿ.ರೋಡ್,ಡಾ| ಬಾಲಕೃಷ್ಣ ಕುಮಾರ್, ಉಪನ್ಯಾಸಕರು, ಯೆನಪೋಯಾ ಆಯುರ್ವೇದಿಕ್ ಮೆಡಿಕಲ್ ಕಾಲೇಜು & ಆಸ್ಪತ್ರೆ, ಮಂಜನಾಡಿ, ದೇರಳಕಟ್ಟೆ, ಮಂಗಳೂರು ಉಪಸ್ಥಿತರಿರುವರು,

ಈ ಸಂದರ್ಭದಲ್ಲಿ ಡಾ| ಸೌಮ್ಯ M.Pharm., ಅಸಿಸ್ಟೆಂಟ್ ಪ್ರೊಫೆಸರ್, ಯೆನಪೋಯಾ ಫಾರ್ಮಸಿ ಕಾಲೇಜು & ರಿಸರ್ಚ್ ಸೆಂಟರ್, ಮಂಗಳೂರು ಇವರಿಗೆ ಗೌರವ ಅಭಿನಂದನೆ ಹಾಗೂ ಪ್ರತಿಭಾ ಪುರಸ್ಕಾರ,ವಿದ್ಯಾರ್ಥಿ ಪ್ರೋತ್ಸಾಹ ಧನ ವಿತರಣೆ ಕಾರ್ಯಕ್ರಮ ನಡೆಯಲಿದೆ.

ಮಧ್ಯಾಹ್ನ ಗಂಟೆ 3.00ರಿಂದ ಕುಲಾಲ ಸೇವಾದಳದ ಸದಸ್ಯರು ಮತ್ತು ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ಸಂಘದ ಪ್ರ. ಕಾರ್ಯದರ್ಶಿ ವಿಶ್ವನಾಥ ಕುಲಾಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Comment