ಬಂಟ್ವಾಳ:ಇಲ್ಲಿನ ರಾಯಿ ಸಮೀಪದ ದೈಲ ನಿವಾಸಿ, ಪ್ರಗತಿಪರ ಕೃಷಿಕ ದಿವಂಗತ ಪದ್ಮನಾಭ ಸಪಲ್ಯ ರಾಯಿ ಇವರ ಪತ್ನಿ ಕುಸುಮಾ ಪಿ.ಸಪಲ್ಯ(93) ಇವರು ಅಸೌಖ್ಯದಿಂದ ಶುಕ್ರವಾರ ಸಂಜೆ ಸ್ವಗೃಹದಲ್ಲಿ ನಿಧನರಾದರು.
ಮೃತರಿಗೆ ಮುಂಬೈ ಸಾಫಲ್ಯ (ಗಾಣಿಗ ) ಸೇವಾ ಸಂಘದ ಅಧ್ಯಕ್ಷ ಶ್ರೀನಿವಾಸ ಪಿ.ಸಪಲ್ಯ ಸಹಿತ ಇಬ್ಬರು ಪುತ್ರರು ಮತ್ತು ಇಬ್ಬರು ಪುತ್ರಿಯರು ಇದ್ದಾರೆ.ಮೃತರು ವಿವಿಧ
ಧಾರ್ಮಿಕ ಮತ್ತು ಶೈಕ್ಷಣಿಕ ಕ್ಷೇತ್ರಗಳಿಗೆ ಕೊಡುಗೈ ದಾನಿಯಾಗಿ ಗುರುತಿಸಿಕೊಂಡಿದ್ದರು.
ಮೃತರ ಅಂತ್ಯಕ್ರಿಯೆ ಶನಿವಾರ ಬೆಳಿಗ್ಗೆ 11 ಗಂಟೆಗೆ ಸ್ವಗೃಹ ಬಳಿ ನೆರವೇರಲಿದೆ ಎಂದು ಮೃತರ ಕುಟುಂಬಿಕರು ತಿಳಿಸಿದ್ದಾರೆ.















