ಬಂಟ್ವಾಳ: ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆ. ಮಳೆಹಾನಿ ಬಗ್ಗೆ ಮುಂಜಾಗ್ರತೆ ವಹಿಸಲು ಶಾಸಕರ ಸೂಚನೆ.

Coastal Bulletin
ಬಂಟ್ವಾಳ: ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆ. ಮಳೆಹಾನಿ ಬಗ್ಗೆ ಮುಂಜಾಗ್ರತೆ ವಹಿಸಲು ಶಾಸಕರ ಸೂಚನೆ.

ಬಂಟ್ವಾಳ:ಮಳೆಗಾಲದಲ್ಲಿ ನೆರೆ ಮತ್ತು ಮಳೆಹಾನಿಯಿಂದ ಪ್ರಾಣ ಹಾನಿಯಾಗದಂತೆ ಅಧಿಕಾರಿಗಳು ಮುನ್ನೆಚ್ಚರಿಕೆ ವಹಿಸುವುದರ ಜೊತೆಗೆ ಪ್ರತ್ಯೇಕ ತಂಡ ರಚಿಸಿ ಸದಾ ಜಾಗೃತವಾಗಿರಬೇಕು ಎಂದು ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು ಹೇಳಿದ್ದಾರೆ.

ಇಲ್ಲಿನ ಬಿ.ಸಿ.ರೋಡು ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ನಡೆದ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಅವರು ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು.

ಶಾಲಾ ಮಕ್ಕಳಿಗೆ ಬೆಳಿಗ್ಗೆ ಮತ್ತು ಸಂಜೆ ವೇಳೆ ಬಸ್ ಕೊರತೆ ಉಂಟಾಗಿರುವ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಕೆ.ಎಸ್.ಆರ್.ಟಿ.ಸಿ ನಿಗಮ ಅಧಿಕಾರಿಗಳಿಗೆ ಸೂಚನೆ ನೀಡಿದರು.

ರಸ್ತೆ ಬದಿ ಅಪಾಯಕಾರಿ ಮರ ತೆರವುಗೊಳಿಸಲು ವಲಯ ಅರಣ್ಯಾಧಿಕಾರಿ ಪ್ರಪುಲ್ ರೈ ಅವರಿಗೆ ಸೂಚಿಸಿದರು. ಶಾಲಾ ಆವರಣ ಬಳಿ ಅಂಗನವಾಡಿ ಕೇಂದ್ರಗಳಿಗೆ ಅವಕಾಶ, ಕೃಷಿಕರು

ಮತ್ತು ತೋಟಗಾರಿಕೆಗೆ ಸೂಕ್ತ ಮಾಹಿತಿ ಮತ್ತು ಸಕರ್ಾರಿ ಸೌಲಭ್ಯ ಒದಗಿಸುವುದು. ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿ ಸಂಗ್ರಹ ಮತ್ತು ಸಾಂಕ್ರಾಮಿಕ ರೋಗ ತಡೆಗಟ್ಟುವುದು, ಪ್ರಾಕೃತಿಕ ವಿಕೋಪದಡಿ ಅರ್ಹ ಫಲಾನುಭವಿಗಳ ಆಯ್ಕೆ, ಶಾಲಾ ಕಾಳೇಜು ಬಳಿ ಗಾಂಜಾ ಮಾರಾಟಕ್ಕೆ ತಡೆ, ರಸ್ತೆ ಬದಿ ತ್ಯಾಜ್ಯ ಎಸೆಯುವವರ ವಿರುದ್ಧ ನಿದರ್ಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಅವರು ತಿಳಿಸಿದರು.

 ತಹಶಿಲ್ದಾರ್ ಡಿ.ಅರ್ಚನಾ ಭಟ್, ತಾಲ್ಲೂಕು ಪಂಚಾಯಿತಿ ಇಒ ಮಹೇಶ್ ಹೊಳ್ಳ, ಪುರಸಭೆ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ ಮತ್ತಿತರರು ಇದ್ದರು.

Leave a Comment