ಅಪ್ಪ ಮಗನನ್ನು ಕಳೆದುಕೊಂಡು ದಿಕ್ಕು ತೋಚದೆ ಕಂಗಾಲಾದ ಕುಟುಂಬ. ಸಹೃದಯಿ ದಾನಿಗಳ ನೆರವಿನ ನೀರಿಕ್ಷೆಯಲ್ಲಿ ಅರುಣ್ ಕುಲಾಲ್ ಬೋರುಗುಡ್ಡೆ ಸಂಸಾರ.

Coastal Bulletin
ಅಪ್ಪ ಮಗನನ್ನು ಕಳೆದುಕೊಂಡು ದಿಕ್ಕು ತೋಚದೆ ಕಂಗಾಲಾದ ಕುಟುಂಬ. ಸಹೃದಯಿ ದಾನಿಗಳ ನೆರವಿನ ನೀರಿಕ್ಷೆಯಲ್ಲಿ ಅರುಣ್ ಕುಲಾಲ್ ಬೋರುಗುಡ್ಡೆ ಸಂಸಾರ.

ಬಂಟ್ವಾಳ :ಪುತ್ತೂರಿನ ಕಬಕದಲ್ಲಿ 2025 ಮೇ 11ರಂದು ಮಧ್ಯಾಹ್ನ ಕೆ.ಎಸ್.ಆರ್.ಟಿ.ಸಿ. ಬಸ್ ಚಾಲಕನ ಓವರ್ ಟೇಕ್ ಮತ್ತು ಅಜಾಗರೂಕತೆಯ ಚಾಲನೆಗೆ ಉಸಿರು ಚೆಲ್ಲಿದ ಬಂಟ್ವಾಳ ತಾಲೂಕು ನರಿಕೊಂಬು ಗ್ರಾಮದ ನಾಯಿಲ ನಿವಾಸಿ ಗ್ರಾಮ ಪಂಚಾಯತ್ ಸದಸ್ಯ, ಸಾಮಾಜಿಕ ಕಾರ್ಯಕರ್ತ ಅರುಣ್ ಕುಲಾಲ್ ಬೋರುಗುಡ್ಡೆ ಹಾಗೂ ಅವರ ಮಗ ಧ್ಯಾನ್ ಇವರ ಅಕಾಲಿಕ ಮರಣದಿಂದ ಕುಟುಂಬ ಇದೀಗ ದಿಕ್ಕೇ ತೋಚದಂತಾಗಿ ಕಂಗಾಲಾಗಿದೆ. ಕಾರ್ಪೆಂಟರ್ ಕೆಲಸ ಮಾಡುತ್ತಾ ಬದುಕುತ್ತಿದ್ದ ಆ ಕುಟುಂಬದ ಎರಡು ದೀಪಗಳು ಆರಿ ಹೋಗಿವೆ. ವಿವರಿಸಲಾಗದಷ್ಟು ಅತಂತ್ರ ಮತ್ತು ಹತಾಶೆಯಿಂದ ಅವರ ವೃದ್ಧ ತಾಯಿಯ ಜೊತೆಗೆ ಮಡದಿ ಮತ್ತು ಇನ್ನೊಬ್ಬ ಮಗ ದಿನ ಕಳೆಯುತ್ತಿದ್ದಾರೆ. ಮನೆಗೆ ಆಸರೆ ಇಲ್ಲವಾಗಿದೆ.

ಕಡುಬಡತನದ ಸಂಸಾರಕ್ಕೆ ಮಾನವೀಯತೆಯ ಸ್ಪಂದನೆ ಅಗತ್ಯ ಇದೆ. ಒಂದು ತುತ್ತಿನ ಅನ್ನಕ್ಕೂ ಪರದಾಡುವ ಸ್ಥಿತಿಯಲ್ಲಿರುವ ಕುಟುಂಬ ದಾನಿಗಳ ನೆರವಿನ ನಿರೀಕ್ಷೆಯಲ್ಲಿದೆ.

ಆರ್ಥಿಕ

ಸಹಾಯ ನೀಡುವ ಸಹೃದಯಿ ಬಂಧುಗಳು ಅರುಣ್ ಅವರ ಪತ್ನಿ ಜಯಮಾಲಿನಿ ಅವರ

ಕೆನರಾ ಬ್ಯಾಂಕ್ ಅಕೌಂಟ್ ಸಂಖ್ಯೆ

01352200094854

IFSC Code:0010135

ಸಹಾಯ ಮಾಡಬೇಕಾಗಿ ವಿನಂತಿಸಲಾಗಿದೆ

Leave a Comment