Coastal Bulletin

ಬಂಟ್ವಾಳ: ಇಲ್ಲಿನ ಬಿ.ಸಿ.ರೋಡಿನಲ್ಲಿ ಸುವರ್ಣ ಮಹೋತ್ಸವ ಸಂಭ್ರಮದಲ್ಲಿರುವ ಲಯನ್ಸ್ ಕ್ಲಬ್ ವತಿಯಿಂದ ಹಂತ ಹಂತವಾಗಿ ನಿರ್ಮಾಣಗೊಂಡ ರೂ 35ಲಕ್ಷ ವೆಚ್ಚದ 'ಲಯನ್ಸ್ ಸಭಾ ಭವನ' ಇದೇ 15ರಂದು ಬೆಳಿಗ್ಗೆ ಗಂಟೆ 10.30ಕ್ಕೆ ಲೋಕಾರ್ಪಣೆಗೊಳ್ಳಲಿದೆ ಎಂದು ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷ ಶ್ರೀನಿವಾಸ ಪೂಜಾರಿ ಮೆಲ್ಕಾರ್ ಹೇಳಿದ್ದಾರೆ.

ಬಿ.ಸಿ.ರೋಡಿನಲ್ಲಿ ಶುಕ್ರವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಅಂದು ಬೆಳಿಗ್ಗೆ ಲಯನ್ಸ್ ಕ್ಲಬ್ ಅಂತರ್ ರಾಷ್ಟ್ರೀಯ ನಿರ್ದೇಶಕ ಕೆ.ವಂಶಿಧರ್ ಬಾಬು ಸಭಾಂಗಣ ಉದ್ಘಾಟಿಸುವರು. ಮಾಜಿ ನಿದರ್ದೇ ಶಕ ವಿ.ವಿ.ಕೃಷ್ಣ ರೆಡ್ಡಿ, ಮಾಜಿ ಗವರ್ನರ್ ವಸಂತ ಕುಮಾರ್ ಶೆಟ್ಟಿ, ಗವರ್ನರ್ ಎಸ್.ಸಂಜೇತ್ ಶೆಟ್ಟಿ ಮತ್ತಿತರ ಗಣ್ಯರು ಭಾಗವಹಿಸುವರು ಎಂದರು.

ಕ್ಲಬ್ಬಿನ ಅಧ್ಯಕ್ಷ ಉಮೇಶ್ ಆಚಾರ್ ಮಾತನಾಡಿ, ಸಭಾಂಗಣವು ಸಾರ್ವಜನಿಕರಿಗೆ ಕಡಿಮೆ ದರದಲ್ಲಿ

ದೊರೆಯಲಿದ್ದು,ಸುವರ್ಣ ಮಹೋತ್ಸವ ಪ್ರಯುಕ್ತ ಕ್ಲಬ್ಬಿನ 'ಸ್ಮರಣ ಸಂಚಿಕೆ' ಬಿಡುಗಡೆಗೊಳ್ಳಲಿದೆ ಎಂದರು.

ಕಳೆದ ಹಲವಾರು ವರ್ಷಗಳಿಂದ 30 ಮಂದಿ ವಿಶೇಷ ಚೇತನ ಮಕ್ಕಳಿಗೆ ತಜ್ಞರಿಂದ ಉಚಿತ ಚಿಕಿತ್ಸೆ ಮತ್ತಿತರ ಥೆರಪಿ ನೀಡಲಾಗುತ್ತಿದ್ದು, ಸಭಾಂಗಣದಲ್ಲಿ ಬರುವ ಆದಾಯ ಸದ್ವಿನಿಯೋಗವಾಗುತ್ತಿದೆ ಎಂದು ಕ್ಲಬ್ಬಿನ ಕೋಶಾಧಿಕಾರಿ ಸುನಿಲ್ ಬಿ. ಅಪೂರ್ವ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಕ್ಲಬ್ಬಿನ ಕಾರ್ಯದರ್ಶಿ ಬಿ.ಶಿವಾನಂದ ಬಾಳಿಗ, ಪ್ರಮುಖರಾದ ಜಯಂತ್ ಶೆಟ್ಟಿ, ಲಕ್ಷ್ಮಣ ಕುಲಾಲ್ ಅಗ್ರಬೈಲ್ ಇದ್ದರು.

Leave a Comment