ಬಂಟ್ವಾಳ: 'ಧಾರ್ಮಿಕ-ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅಡ್ಡಿ ಸಲ್ಲದು' ಸಂಸ್ಕಾರ ಭಾರತಿ ಘಟಕ ಆಗ್ರಹ

Coastal Bulletin
ಬಂಟ್ವಾಳ: 'ಧಾರ್ಮಿಕ-ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅಡ್ಡಿ ಸಲ್ಲದು' ಸಂಸ್ಕಾರ ಭಾರತಿ ಘಟಕ ಆಗ್ರಹ

ಬಂಟ್ವಾಳ: ಜಿಲ್ಲೆಯಲ್ಲಿ ಅನಾದಿ ಕಾಲದಿಂದ ನಡೆಯುತ್ತಿರುವ ಯಕ್ಷಗಾನ ಸೇರಿದಂತೆ ನೇಮೋತ್ಸವ ಮತ್ತು ನಾಟಕ, ಭಜನೆ ಮತ್ತಿತರ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಧ್ವನಿವರ್ಧಕ ನೆಪದಲ್ಲಿ ಪೊಲೀಸರು ಅಡ್ಡಿಪಡಿಸುವುದು ಮತ್ತು ಅನುಮತಿ ನಿರಾಕರಣೆ ಮತ್ತಿತರ ಕಿರುಕುಳ ಸ್ಥಗಿತಗೊಳಿಸಬೇಕು ಎಂದು ಜಿಲ್ಲಾ ಸಂಸ್ಕಾರ ಭಾರತಿ ಘಟಕ ಗೌರವಾಧ್ಯಕ್ಷ ಸರಪಾಡಿ ಅಶೋಕ್ ಶೆಟ್ಟಿ ಆಗ್ರಹಿಸಿದ್ದಾರೆ.

ಬಿ.ಸಿ.ರೋಡಿನಲ್ಲಿ ಶುಕ್ರವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, 'ಜಿಲ್ಲೆಯಾದ್ಯಂತ ಸುಮಾರು 750ಕ್ಕೂ ಅಧಿಕ ವ್ಯಕ್ತಿಗಳು ಸಂಸ್ಕಾರ ಭಾರತಿ ಸಂಘಟನೆ ಮೂಲಕ ದೇಶ ಮತ್ತು ತುಳುನಾಡಿನ ಸಾಂಸ್ಕೃತಿಕ ಪರಂಪರೆ ಉಳಿಸುವ ಪ್ರಯತ್ನ ನಡೆಸುತ್ತಿದ್ದಾರೆ' ಎಂದರು.

ದೇಶದಲ್ಲಿ ಕಳೆದ 20 ವರ್ಷಗಳ ಹಿಂದೆ ಅನುಷ್ಠಾನಗೊಂಡ ಕಾಯ್ದೆಯಡಿ ಶಬ್ಧ ಮಾಲಿನ್ಯ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಹಿಂದೂ ಸಮಾಜದ ಧಾರ್ಮಿಕ ಆಚರಣೆ ಸಂದರ್ಭದಲ್ಲಿ ಮಾತ್ರ ಸರ್ಕಾರ ಏಕೆ ಎಚ್ಚೆತ್ತುಕೊಂಡು ಬಳಿಕ ರಾಜಕೀಯ ಮತ್ತಿತರ ಸಾರ್ವಜನಿಕ ಕಾರ್ಯಕ್ರಮಗಳ ವೇಳೆ ಮೌನವಾಗುತ್ತಿರುವುದು ಏಕೆ..? ಎಂದು ಅವರು ಪ್ರಶ್ನಿಸಿದರು. 

ದೇಶದ ಎಲ್ಲಿಯೂ ಇಲ್ಲದ ಕಾನೂನು ಈ ಜಿಲ್ಲೆಯಲ್ಲಿ ಮಾತ್ರ ಅನುಷ್ಠಾನಗೊಳಿಸುತ್ತಿರುವ ಹಿಂದೆ ರಾಜಕೀಯ ಷಡ್ಯಂತ್ರ

ಅಡಗಿದೆ ಎಂಬ ಶಂಕೆ ಸಾರ್ವಜನಿಕರಲ್ಲಿ ವ್ಯಕ್ತವಾಗುತ್ತಿದೆ. ಈಗಾಗಲೇ ಸಾರ್ವಜನಿಕ ಗಣೇಶೋತ್ಸವ ಸಂದರ್ಭದಲ್ಲಿ ಹಲವೆಡೆ ಯಕ್ಷಗಾನ ಮತ್ತಿತರ ಧಾರ್ಮಿಕ ನಂಟು ಹೊಂದಿರುವ ಸಾಂಸ್ಕೃತಿಕ ಚಟುವಟಿಕೆಗಳಿಗೆ ಅಡ್ಡಿಪಡಿಸಿದ್ದು, ಮುಂಬರುವ ದಸರಾ ಕಾರ್ಯಕ್ರಮದಲ್ಲಿ ಇದೇ ಪ್ರವೃತ್ತಿ ಮತ್ತೆ ಪುನರಾವರ್ತನೆಯಾಗದಂತೆ ಸರ್ಕಾರ ಮುನ್ನೆಚ್ಚರಿಕೆ ವಹಿಸಬೇಕು ಎಂದು ಅವರು ಜಿಲ್ಲಾ ಘಟಕ ಅಧ್ಯಕ್ಷ ಟಿ.ತಾರನಾಥ ಕೊಟ್ಟಾರಿ ಆಗ್ರಹಿಸಿದರು.

  ಸುದ್ದಿಗೋಷ್ಠಿಯಲ್ಲಿ ಪ್ರಾಂತ ಉಪಾಧ್ಯಕ್ಷ ರೂಪಲೇಖ ಪುತ್ತೂರು, ಜಿಲ್ಲಾ ಉಪಾಧ್ಯಕ್ಷ ಅನಿಲ್ ಪಂಡಿತ್ ಬ್ರಹ್ಮರಕೂಟ್ಲು, ಜಾನಪದ ವಿಭಾಗ ಪ್ರಮುಖ್ ಮನ್ಮಥ ಶೆಟ್ಟಿ ಪುತ್ತೂರು, ನಿವೃತ್ತ ಶಿಕ್ಷಕ ಸಂಕಪ್ಪ ಶೆಟ್ಟಿ ಇದ್ದರು.

ಬಳಿಕ ನಿಯೋಗವು ಬಂಟ್ವಾಳ ತಶೀಲ್ದಾರ್ ಮಂಜುನಾಥ್ ಅವರಿಗೆ ಮನವಿ ಸಲ್ಲಿಸಿತು.

Leave a Comment