ಪುತ್ತೂರು : ಕಾಣಿಯೂರು ಹೊಳೆಯಲ್ಲಿ ಒಂದು ಮೃತದೇಹ ಇಂದು ಬೆಳಿಗ್ಗೆ ಪತ್ತೆಯಾಗಿದ್ದರೆ , ಅದರ ಅರ್ಧ ಗಂಟೆಯ ಬಳಿಕ ಎರಡನೇ ಮೃತದೇಹವೂ ಪತ್ತೆಯಾಗಿದೆ.
ಇಂದು ಬೆಳಿಗ್ಗೆ 8 ಗಂಟೆ ಸಮೀಪ ಬೈತಡ್ಕ ಸೇತುವೆಯಿಂದ 400 ಮೀಟರ್ ದೂರದ ಮರಕ್ಕಡ ಜೇಡರಕೇರಿ ಮಂಜಯ್ಯ ಆಚಾರ್ಯರ ಮನೆಯ ಬಳಿ ಹೊಳೆಯಲ್ಲಿ ಒಂದು
ಮೃತದೇಹ ಪತ್ತೆಯಾಗಿತ್ತು, ಇದೀಗ ಅದರಿಂದ 50 ಮೀಟರ್ ಹಿಂದೆಯೇ ಎರಡನೇ ಮೃತದೇಹವೂ ಪತ್ತೆಯಾಗಿದೆ. ಎರಡೂ ಮೃತದೇಹಗಳು ಊರಿನವರಿಗೆ ಸಿಕ್ಕಿದ್ದು. ಘಟನೆ ನಡೆದು ಮೂರನೇಯ ದಿನ ಪತ್ತೆಯಾಗಿದೆ.
















