ಪೊಳಲಿ: ಫೆ.14ರಂದು ಶತಚಂಡಿಕಾಯಾಗ ಹಾಗೂ ದೊಡ್ಡರಂಗಪೂಜೆ ಉತ್ಸವ ಪ್ರಯುಕ್ತ ಪೂರ್ವಭಾವಿ ಸಭೆ.

Coastal Bulletin
ಪೊಳಲಿ: ಫೆ.14ರಂದು ಶತಚಂಡಿಕಾಯಾಗ ಹಾಗೂ ದೊಡ್ಡರಂಗಪೂಜೆ ಉತ್ಸವ ಪ್ರಯುಕ್ತ ಪೂರ್ವಭಾವಿ ಸಭೆ.

ಬಂಟ್ವಾಳ :ಶ್ರೀ ರಾಜರಾಜೇಶ್ವರೀ ದೇವಸ್ಥಾನ ಪೊಳಲಿ ಇಲ್ಲಿ ಶ್ರೀ ದೇವಾಲಯದಲ್ಲಿ ಲೋಕಕಲ್ಯಾಣಾರ್ಥ ಹಾಗೂ ಸಾನಿಧ್ಯ ವೃದ್ಧಿಗಾಗಿ ಶತಚಂಡಿಕಾಯಾಗ ಹಾಗೂ ಸೇವಾರೂಪದಲ್ಲಿ ದೊಡ್ಡರಂಗಪೂಜೆ ಉತ್ಸವ ದಿನಾಂಕ 01-03-2025 ರಿಂದ 07-03-2025 ರವರೆಗೆ ನಡೆಯುವ ದೊಡ್ಡರಂಗಪೂಜೆ ಉತ್ಸವದ ಪೂರ್ವ ಸಿದ್ಧತೆ ಬಗ್ಗೆ ಭಕ್ತಾದಿಗಳ ಸಭೆಯನ್ನು ದಿನಾಂಕ 14-02-2025ನೇ ಶುಕ್ರವಾರದಂದು ಸಂಜೆ 05.00 ಗಂಟೆಗೆ ಸರಿಯಾಗಿ ಶ್ರೀ ರಾಜರಾಜೇಶ್ವರಿ ದೇವಸ್ಥಾನ ಪೊಳಲಿಯಲ್ಲಿ ಕರೆಯಲಾಗಿದೆ .

ಪೊಳಲಿಗೆ ಸಂಭಂಧಪಟ್ಟ ಗ್ರಾಮಗಳಾದ ಬಡಗ ಉಳಿಪ್ಪಾಡಿ,ತೆಂಕಉಳಿಪ್ಪಾಡಿ,ಅಮ್ಮುಂಜೆ,ಕರಿಯಂಗಳ,,ಮುತ್ತೂರು, ಕೊಳವೂರು, ಅಡ್ಡೂರು, ಮಲ್ಲೂರು, ಪೆರ್ಮಂಕಿ, ಮೇರಮಜಲು, ಕೊಡ್ಮಾಣ್, ಅಬ್ಬೆಟ್ಟು, ನೆತ್ತರಕೆರೆ, ಪುದು, ಸುಜೀರ್,ಅರ್ಕುಳ* ಗ್ರಾಮದ ಸರ್ವ ಸಂಘ ಸಂಸ್ಥೆಗಳ ಪದಾಧಿಕಾರಿಗಳು , ದೇವಸ್ಥಾನದ

ಆಡಳಿತ ಮಂಡಳಿ ಸಮಿತಿ ಪದಾಧಿಕಾರಿಗಳು , ಭಜನಾ ಮಂದಿರ ಸಮಿತಿ ಪದಾಧಿಕಾರಿಗಳು , ಎಲ್ಲಾ ಗ್ರಾಮಸ್ಥರು ಈ ಸಭೆಯಲ್ಲಿ ಭಾಗವಹಿಸಿ ತಮ್ಮ ಅಮೂಲ್ಯ ಸಲಹೆ ಸೂಚನೆಗಳನ್ನು ನೀಡಬೇಕೆಂದು ಪ್ರಕಟಣೆ ತಿಳಿಸಿದೆ.

Leave a Comment