ಮಂಗಳೂರು :ಲಿಮ್ಕಾ ಬುಕ್‌ ಆಫ್ ರೆಕಾರ್ಡ್‌ ಪಡೆದಿದ್ದ ಬಾಲಕಿ ಪೂರ್ವಿ ನಿಧನ

Coastal Bulletin
ಮಂಗಳೂರು :ಲಿಮ್ಕಾ ಬುಕ್‌ ಆಫ್ ರೆಕಾರ್ಡ್‌ ಪಡೆದಿದ್ದ ಬಾಲಕಿ ಪೂರ್ವಿ ನಿಧನ

ಪಣಂಬೂರು: ಮಂಗಳೂರು ದ್ವಾರಕ ನಗರ ಕೊಟ್ಟಾರ ನಿವಾಸಿಗಳಾದ ಪುಷ್ಪರಾಜ್‌ ಎಸ್‌. ಕುಂದರ್‌ ವೈಶಾಲಿ ಎಲ್‌. ಬೆಂಗ್ರೆ ಅವರ ಪುತ್ರಿ, ಲಿಮ್ಕಾ ಬುಕ್‌ ದಾಖಲೆಯ ಪೂರ್ವಿ (7) ಅನಾರೋಗ್ಯದಿಂದ ಮಂಗಳೂರಿನಲ್ಲಿ ನಿಧನ ಹೊಂದಿದಳು.

2019ರಲ್ಲಿ 1 ನಿಮಿಷದಲ್ಲಿ ದಾಖಲೆಯ ರೈಮ್ಸ್‌ ಆಟವಾಡಿ ಇಂಡಿಯನ್‌ ಬುಕ್‌ ಆಫ್‌ ರೆಕಾಡ್ಸ್‌ನಲ್ಲಿ ಹೆಸರು ಮಾಡಿದ್ದಳು. ಸಣ್ಣ ಪ್ರಾಯದಲ್ಲೇ ಚುರುಕಿನಿಂದ

ಕೂಡಿದ್ದ ಪೂರ್ವಿ ಫುಟ್‌ಬಾಲ್‌, ಭರತನಾಟ್ಯದಲ್ಲಿ ತನ್ನ ಸಾಮರ್ಥ್ಯ ಪ್ರದರ್ಶಿಸಿ ಜನರ ಪ್ರೀತಿಗೆ ಪಾತ್ರವಾಗಿದ್ದಳು. ವಿವಿಧ ಸಂಘ ಸಂಸ್ಥೆಯಿಂದ ಸಮ್ಮಾನ ಪಡೆದುಕೊಂಡಿದ್ದಳು.

Leave a Comment