ಶ್ರೀಮದ್ಭಾಗವತ ಮಹಾಪುರಾಣದ ಅಷ್ಟೋತ್ತರ ಶತ 108 ಪಾರಾಯಣ ಮಹಾಯಜ್ಷ ಮತ್ತು ಗೋನವರಾತ್ರಿ ಉತ್ಸವದ ಮಹತ್ವ.

ದಿನೇಶ್ ಶೆಟ್ಟಿ ಕೊಟ್ಟಿಂಜ
ಶ್ರೀಮದ್ಭಾಗವತ ಮಹಾಪುರಾಣದ ಅಷ್ಟೋತ್ತರ ಶತ 108 ಪಾರಾಯಣ ಮಹಾಯಜ್ಷ ಮತ್ತು ಗೋನವರಾತ್ರಿ ಉತ್ಸವದ ಮಹತ್ವ.

ಅಧರ್ಮದ ನಾಶಕ್ಕಾಗಿ, ಸಜ್ಜನರ ರಕ್ಷಣೆಗಾಗಿ ಪರಮಾತ್ಮನು ಅವತಾರಗಳನ್ನು ಎತ್ತಿ ಮನುಷ್ಯ ಲೋಕದಲ್ಲಿ ವಿಶೇಷವಾಗಿ ಭಾರತದಲ್ಲಿ ಪ್ರತಿ ಯುಗದಲ್ಲಿಯೂ ದಿವ್ಯ ಜನ್ಮ ಕರ್ಮಗಳಿಂದ ಲೋಕಕಲ್ಯಾಣವನ್ನು ಸಾಧಿಸಿರುವ ಪರಿಯನ್ನು ಹದಿನೆಂಟು ಪುರಾಣಗಳು ಹದಿನೆಂಟು ಉಪಪುರಾಣಗಳು ಹಾಗೂ ಶ್ರೀ ಮನ್ಮಹಾಭಾರತ, ಶ್ರೀ ಮದ್ರಾಮಾಯಣ ಎಂಬ ಎರಡು ಇತಿಹಾಸಗಳು ಮತ್ತು ಅನೇಕ ತೀರ್ಥ ಕ್ಷೇತ್ರ ಸ್ಥಳ ಮಹಾತ್ಮೆಗಳು ಹಲವು ರೀತಿಯಲ್ಲಿ ವಿವರಿಸುತ್ತವೆ. ಇವುಗಳೆಲ್ಲವನ್ನೂ ಮೀರಿನಿಂತಿದೆ ಪರಮಾತ್ಮನ ಅನಂತ ಹಾಗೂ ಅವರ್ಣೀಯ ವಿಭೂತಿಗಳು, ಶಕ್ತಿಗಳು ಮತ್ತು ಮಹಿಮೆಗಳು, ಶ್ರೀ ಮದ್ಭಾಗವತವು ಇದಕ್ಕೆ ಕನ್ನಡಿಯಾಗಿದೆ.

ಶ್ರವಣಂ, ಕೀರ್ತನಂ ವಿಷ್ಣೋ: ಸ್ಮರಣಂ ಮುಂತಾದ ಒಂಭತ್ತು ವಿಧ ಭಕ್ತಿ ಸಾಧನೆಗಳಲ್ಲಿ ಮೊದಲನೆಯದು ವೈಷ್ಣವ ಕಥಾ ಶ್ರವಣಂ, ಮಹಿಮೆಗಳನ್ನರಿತು ಭಕ್ತಿ ಪೂರ್ವಕವಾಗಿ ಭಗವಂತನನ್ನು ಆರಾಧಿಸಿ ನಾವು ಕೃಪಾ ಪಾತ್ರರಾಗಲು ಏಳು ದಿನಗಳ ನಿರಂತರ ಸಾಧನೆಯ ಹೆಸರು ಸಪ್ತಾಹ ಪಾರಾಯಣ ಮಹಾಯಜ್ಞ: ವಿದ್ಯಮಾನ ಕಲಿಯುಗದಲ್ಲಿ ಜೀವನದಲ್ಲಿ ಅಸುರ ಪ್ರವೃತ್ತಿಯುಳ್ಳ ಮನುಷ್ಯರನ್ನು ಶುದ್ಧೀಕರಿಸಲು ಶ್ರೀಮದ್ಭಾಗವತದ ಹಾಗೆ ಬೇರೆ ಉಪಾಯವಿಲ್ಲ, : ಏಕೆಂದರೆ "ಭಗವದ್ರೂಪಂ ಶಾಸ್ತçಂ ಭಾಗವತಂ" ಎಂಬುದಾಗಿ ಸೂತ ಪೌರಾಣಿಕರು ತಿಳಿಸುತ್ತಾರೆ. ಇತರ ಶಾಸ್ತçಗಳು ಗ್ರಂಥರೂಪದಲ್ಲಿ ಇದೆಯಾದರೆ, ಶ್ರೀ ಮದ್ಭಾಗವತವು ಭಗವಂತನ ರೂಪಮೇಯವಾಗಿದೆ, ಈ ಕಲಿಯುಗದಲ್ಲಿ ಧರ್ಮವನ್ನು ಮೂರು ಕಾಲುಗಳನ್ನು ಕಳೆದುಕೊಂಡು ಕೇವಲ ಒಂದು ಕಾಲಲ್ಲಿ ಭೂಮಿಯಲ್ಲಿ ನಿಂತಿರುವುದಾಗಿ ಪರೀಕ್ಷಿತ ಮಹಾರಾಜನು ಕಾಣುತ್ತಾನೆ. ಧರ್ಮವೆಂಬ ಈ ಎತ್ತಿನ ದುಸ್ಥಿಗೆ ಕಾರಣ ನ್ಯಾಯಾಂಗ, ಶಾಸಕಂಗ, ಕಾರ್ಯಂಗ, ಜನಾಂಗ ಎಂಬ ಸಮಾಜದ ನಾಲ್ಕು ಪಾದಗಲಲ್ಲಿ ಮೊದಲನೆಯ ಮೂರನ್ನೂ ಭಾಧಿಸಿರುವ ಭ್ರಷ್ಟಾಚಾರ ಮಹಾರೋಗ. ಜನಾಂಗ ಎಚ್ಚರಗೊಂಡು ಮಹಾಶಕ್ತಿ ವಾಹನವಾದ ಸಿಂಹದ ಗುಣಗಳನ್ನು ಮೈಗೂಡಿಸಿ ಭಷ್ಟಾಚಾರದ ಆಸುರೀ ಶಕ್ತಿಯನ್ನು ಸಂಹರಿಸಬೇಕಾಗಿದೆ.

ಸಾಮ, ದಾನ, ಭೇದ, ದಂಡಗಳೆAಬ ನಾಲ್ಕು ಪಾದಗಳನ್ನು ಜನಾಂಗವು ಧೃಢವಾಗಿ ಭೂಮಿಯಲ್ಲಿ ನೆಲೆಗೊಳಿಸಿ ಧರ್ಮರಕ್ಷೆಯನ್ನು ಸಾಧಿಸಬೇಕು. ಇದಕ್ಕಾಗಿ ಗೋನವರಾತ್ರಿ ಉತ್ಸವವನ್ನು ಆಯೋಜಿಸಲಾಗಿದೆ.

ಫಮಚಗವ್ಯ ಗೋಮಾತೆಯ ಅಮೂಲ್ಯವಾದ ಕೊಡುಗೆಯಾಗಿದೆ.ಇದು ಮಾತ್ರವಲ್ಲದೆ ಭಾರತೀಯ ದೇಶೀ ಗೋವುಗಳಲ್ಲಿ ಮಾತ್ರ ಧನುರ್ವೇದದಲ್ಲಿ ವರ್ಣಿಸಲಾದ ದಿವ್ಯಾಯುಧಗಳ ಸಾನಿಧ್ಯ ಇರುವುದು. ವಿಧಿವಿಧಾನಗಳಿಂದ ಗೋಮಾತೆಯನ್ನು ಆರಾಧಿಸಿದರೆ ಸರ್ವರೋಗಹರ, ಸರ್ವರಕ್ಷಾಕರ, ಸರ್ವಸಂಪತ್ಕರ ದೇವತಾ ಶಕ್ತಿಗಳು ಸಂತುಷ್ಟರಾಗಿ, ಪ್ರಸನ್ನರಾಗಿ ನಮ್ಮನ್ನು ಹರಸುವುದರಲ್ಲಿ ಸಂದೇಹವೇ ಇಲ್ಲ.

 ಗೋಮೂತ್ರೇ ಜಾಹ್ನವಿ ಸ್ವಯಂ, ಹೃಷ್ಟಾ ಪುಷ್ಟಾಮಹಾಲಕ್ಷಿö ಗೋಮಯೇ ಸನ್ನಿಹಿತಾ ಸದಾ ಎಂಬ ಗೋ ಸಾವಿತ್ರೀ ಪ್ರಮಾಣದಂತೆ ಗೋಮೂತ್ರದಲ್ಲಿ ಗಂಗೆಯು ಗೋಮಯ (ಸಗಣಿ )ದಲ್ಲಿ ಮಹಾಲಕ್ಷಿö್ಮಯು ಸದಾ ವಾಸಮಾಡುವುದರಿಂದ ಗೋಮಾತೆಯ ಆರಾಧನೆಯನ್ನು ಬಾಲದ ಉದ್ಭವ ಸ್ಥಾನದಲ್ಲಿ ಮಾಡಬೇಕು. ಮುಖದಲ್ಲಿ ಆಲ್ಲ. ಗೋಪಾಲಕನಾದ ಶ್ರೀ ಕೃಷ್ಣನನ್ನೂ ಜೊತೆಗೆ ಪೂಜಿಸಬೇಕು.

 ಗೋಸಾವಿತ್ರಿ ಸ್ತೋತ್ರವನ್ನು ಪಠಿಸುವುದು ಗೋಮಾತೆಯ ವಿಶೇಷ ಅನುಗ್ರಹಕ್ಕೆ ಕಾರಣವಾಗುವುದು ಅಖಂಡ ಭಾರತದ ಜ್ಞಾನ ಪರಂಪರೆಗಳನ್ನು ಆಧರಿಸುವ ಮತ್ತು ಅನುಷ್ಠಾನಗೊಳಿಸುವ ಆಡಳಿತ ಪ್ರಾಚೀನ ಭಾರತದಲ್ಲಿ ಇತ್ತು. ಇಂದು ಅಂತಹ ಧರ್ಮದ ಪುನ: ಸ್ಥಾಪನೆ ಆಗಬೇಕಿದೆ. ರಾಷ್ಟ ರಕ್ಷಣೆಗಾಗಿ ಧರ್ಮ, ಧರ್ಮ ರಕ್ಷಣೆಗಾಗಿ ಜನಾಂಗ ಸ್ವಯಂ ಸ್ಪೂರ್ತಿಯಿಂದ ಧರ್ಮ ಸೇವಕರಾಗಬೇಕಾಗಿದೆ, ಇದರ ಜಾಗೃತಿ ಮೂಡಿಸುವ ಕಾರ್ಯಕ್ರಮ ಗೋರಥಯಾತ್ರೆ, ಗೋಸೆಗಾಗಿ ಧರ್ಮರಕ್ಷಣೆ.

ಭಾಗವತ ಗೋಸೇವೆ ರಾಷ್ಟç ಧರ್ಮದ ಎರಡು ಮುಖಗಳು, ಒಂದೇ ನಾಣ್ಯದ

ಶಿಪುಚ್ಛಗಳ ಹಾಗೆ. ಆಧ್ಯಾತ್ಮ ಹಾಗೂ ಭೌತಿಕ ಸಂಪತ್ತು ಪರಸ್ಪರ ಪೋಷಕ, ಪೂರಕವಾಗುವುದು ಭಾಗವತದ ಜೊತೆಗೆ ಗೋವು ಸೇರಿಕೊಂಡಾಗ ಮಾತ್ರ. ಭಾಗವತ ಸಾರುವ ಧರ್ಮ ಗೋವನ್ನು ಸಾಕಿದಾಗ ಪ್ರಕಟ ವಾಗುತ್ತ, ವೃದ್ಧಿಯಾಗುತ್ತ, ಪ್ರಕೃತಿ ಮಾತೆಯ ಸಂತುಲಿತಾವಸ್ಥೆಯನ್ನು ಸಂರಕ್ಷಿಸುವ ವಿಧಾನ ಗೋಸಾಕಣಿಕೆಯಲ್ಲಿ ಅಂತರ್ಗತವಾಗಿದೆ.

ಗಾವೋ ವಿಶ್ವಸ್ಯ ಮಾತರ: -ಗೋವುಗಳು ಜಗನ್ಮಾತೆಯ ಪ್ರಕಟರೂಪ. ಗೋ ಬ್ರಾಹ್ಮಣೇಭ್ಯ : ಶುಭಮಸ್ತುನಿತ್ಯಂ ಎಂಬ ಶ್ಲೋಕ ಪಾದದ ತಾತ್ಪರ್ಯ ಗೋವುಗಳಿಗೆ, ವೇದಮಾತೆಗೆ ರಕ್ಷಣೆ ನೀಡುವ ತಪೋಧನರಾದ ಬ್ರಾಹ್ಮಣರಿಗೆ ನಿತ್ಯವು ಶುಭವಾಗಲಿ ಎಂಬುದಾಗಿದೆ. ಗೋಭಾಗವತ ರಹಿತರಾದವರು ಮನುಷ್ಯರೇ ಅಲ್ಲ. ಮತ್ತೆ ಬ್ರಾಹ್ಮಣರು ಹೇಗೆ ಆಗಲು ಸಾಧ್ಯ? ಗೋ ಆಧರಿತ ವೇದ ರಕಣೆ, ಗೋ ಆಧರಿತ ಧನುರ್ವೇದ ರಕ್ಷಣೆ, ಗೋ ಆಧರಿತ ವ್ಯಾಪಾರ - ವಾಣಿಜ್ಯ ರಕ್ಷಣೆ, ಗೋ ಆಧಾರಿತ ರಾಷ್ಟç ಸೇವೆಯ ರಕ್ಷಣೆ ಹೀಗೆ ಗೋ ಆಧಾರಿತ ಚಾತುರ್ವಣ್ಯದ ಪಾಲನೆ ಪೋಷಣೆ, ರಕ್ಷಣೆ ಇಂದಿನ ಅನಿವರ‍್ಯತೆ ಎಂಬುದನ್ನು ನಾವು ಸಮಾರೋಪಾಧಿ ಯಿಂದ ಪ್ರಚಾರ ಮಾಡಬೇಕಾಗಿದೆ.

ಗೋ ಎಂಬುದಕ್ಕೆ ವೇದ ಮಂತ್ರಗಳು ಎಂಬ ಅರ್ಥವೂ ಇದೆ. ದೋಗ್ಧಾ ಗೋಪಾಲನಂದನ :, ಗೀತಾಮೃತವೆಂಬ ಹಾಲನ್ನು ಮನಕುಲಕ್ಕೆ ಅರ್ಜುನನ್ನು ನಿಮಿತ್ತವಾಗಿಟ್ಟುಕೊಂಡು ಮಹಾಯೋಗೇಶ್ವರನಾದ ಭಗವಾನ್ ಶ್ರೀ ಕೃಷ್ಣನು ಎಲ್ಲಾ ವೇದೋಪನಿಷತ್ ಮಂತ್ರಗಳ ಸಾರವನ್ನು ಅನುಗ್ರಹಿಸಿದ ಹೀಗೆ ಭಾರತವನ್ನು ಜಗದ್ಗರು ಸ್ಥಾನದಲ್ಲಿ ಭಗವಂತ ಪ್ರತಿಷ್ಟಾಪನೆ ಮಾಡಿದೆಯಾದರೂ ನಾವು ಭಾರತೀಯರು ಸಂಸ್ಕೃತ - ಸಂಸ್ಕೃತಿ ಭ್ರಷ್ಟರಾಗಿ ಪಾಶ್ಚಾತ್ಯ - ವಿದೇಶೀ ಮೋಜುಗಳಿಗೆ ಗುಲಾಮರಾಗಿ ಸ್ಥಾನ ಸಂಸ್ಕಾರ ವಂಚಿತರಾಗಿದ್ದೇವೆ. ಇದಕ್ಕೆ ಪರಿಹಾರವಾಗಿ ಗೋಭಾಗವತ ಸೇವೆಯನ್ನು ಗೋ ನವರಾತ್ರಿ ಮಹೋತ್ಸವದ ಮೂಲಕ ಸಮಾಜದಲ್ಲಿ ಪುನರ್ ಜಾಗೃತಿ ಮೂಡಿಸಲು ನಾವು ಆಚರಿಸೋಣ, ಈ ಆಚರಣೆಯನ್ನು ಮನೆ ಮನೆಗೆ ವಿಸ್ತರಿಸೋಣ.

ಪಾರಾಯಣ ಮಹಾಯಜ್ಞ ಮತ್ತು ಗೋನವರಾತ್ರಿ ಉತ್ಸವದ ಮಾಹಿತಿ ಹಾಗೂ ಕಾರ್ಯ ವೈಖರಿ ಕನ್ನಡ ಭಾಷಾ ವ್ಯಾಖ್ಯಾನ ಸಹಿತ ಮೂಲ ಸಂಸ್ಕೃತ ಭಾಗವತ ಕನ್ನಡ ಲಿಪಿಯ ಗ್ರಂಥ ಎರಡು ಭಾಗಗಳಲ್ಲಿ ಉಪಲಬ್ಧವಿದೆ.- ಮಂಗಳೂರು ಸಾಹಿತ್ಯ ಕೇಂದ್ರ ಗ್ರಂಥಾಲಯದಲ್ಲಿ ಮನೆಮನೆಯಲ್ಲಿ ವ್ಯಾಸ ಪೀಠದಲ್ಲಿ ಶ್ರೀ ರಾಮದ್ಭಾಗವತ ರೂಪಿ ಪರಮಾತ್ಮನ ಸಾನಿಧ್ಯವನ್ನು ಪ್ರತಿಷ್ಟಾಪನೆ ಮಾಡೋಣ. ಮನೆಮನೆಯಲ್ಲಿ ಗೋ ಪೂಜೆಯನ್ನು ಆಯೋಜಿಸೋಣ , ಒಂದು ಮುಷ್ಟಿ ಹುಲ್ಲು, ಮೊಳಕೆ ಬರಿಸಿದ ಧಾನ್ಯಗಳು, ಅರಳು ಬೆಲ್ಲದ ಗೋ ಗ್ರಾಸವನ್ನು ಗೋಮಾತೆಗೆ ನೈವೇದ್ಯ ಸಮರ್ಪಣೆ ಮಾಡೋಣ, ಶ್ರೀ ಸುರಭೀ ಸಮೇತ ಶ್ರೀಗೋಪಾಲಕೃಷ್ಣಾಯ ನಮ: || ವಂದೇ ಮಾತರಂ ವಂದೇ ಗೋಮಾತರಂ||

Leave a Comment