ಮಾಣಿ: ಲಯನ್ಸ್ ಕ್ಲಬ್ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ.

Coastal Bulletin
ಮಾಣಿ: ಲಯನ್ಸ್ ಕ್ಲಬ್ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ.

ಬಂಟ್ವಾಳ :ಲಯನ್ಸ್ ಕ್ಲಬ್ ಮಾಣಿ ಇದರ 2024-25 ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಜು. 9ರಂದು ಮಂಗಳವಾರ ಪದ್ಮ ಮಾಲ್ ಮಾಣಿಯಲ್ಲಿ ನಡೆಯಿತು.

ಪದಗ್ರಹಣ ಅಧಿಕಾರಿ ಲಯನ್ಸ್ ಜಿಲ್ಲಾ 2 ನೇ ಉಪ ರಾಜ್ಯಪಾಲರಾದ ಹೆಚ್ ಎನ್ ತಾರಾನಾಥ್ ಪಿಎಂಜೆಫ್ ರವರು ಪದಗ್ರಹಣ ಕಾರ್ಯಕ್ರಮವನ್ನು ನಡೆಸಿಕೊಟ್ಟರು.ಪಾಸ್ಟ್ ಎಂಸಿಸಿ ವಸಂತ್ ಕುಮಾರ್ ಶೆಟ್ಟಿಯವರು

ನೂತನ ಅಧ್ಯಕ್ಷರಾದ ಲಯನ್ ರಾಮ್ ಕಿಶನ್ ರೈ ಯವರಿಗೆ ಅಧಿಕಾರ ಹಸ್ತಾಂತರಿಸಿದರು, ಪ್ರಾಂತ್ಯ ಅಧ್ಯಕ್ಷರಾದ ಎಗಿನ್ ಲೋಬೊ ಮತ್ತು ವಲಯ ಅಧ್ಯಕ್ಷರಾದ ಉಮೇಶ್ ಪಿ ಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

Leave a Comment