ರಾಜ್ಯ ಮಟ್ಟದ ಗಣರಾಜ್ಯೋತ್ಸವ ಪಥಸಂಚಲನಕ್ಕೆ ಕು| ಹರ್ಷಿತಾ ಕುಲಾಲ್ ಆಯ್ಕೆ.

Coastal Bulletin
ರಾಜ್ಯ ಮಟ್ಟದ ಗಣರಾಜ್ಯೋತ್ಸವ ಪಥಸಂಚಲನಕ್ಕೆ ಕು| ಹರ್ಷಿತಾ ಕುಲಾಲ್ ಆಯ್ಕೆ.

ಬಂಟ್ವಾಳ :ಪಾದುವ ಪದವಿಪೂರ್ವ ಕಾಲೇಜು ನಂತೂರು ಮಂಗಳೂರು ಇದರ ಎನ್.ಎಸ್.ಎಸ್ ವಿದ್ಯಾರ್ಥಿನಿ ಕು| ಹರ್ಷಿತಾ ಕುಲಾಲ್ ಇವರು ಎಸ್.ಡಿ.ಎಂ. ಆಯುರ್ವೇದ ಕಾಲೇಜು ಹಾಸನ ಇಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಗಣರಾಜ್ಯೋತ್ಸವ ಪಥಸಂಚಲನ ತರಬೇತಿ ಕಾರ್ಯಕ್ರಮದಲ್ಲಿ ದ.ಕ. ಜಿಲ್ಲೆಯ ಪದವಿ ಪೂರ್ವ ವಿಭಾಗದಿಂದ ಅಯ್ಕೆಗೊಂಡಿದ್ದಾರೆ.

ಜನವರಿ೨೬ ರಂದು ಬೆಂಗಳೂರು ಮಾಣಿಕ್ ಷಾ ಮೈದಾನದಲ್ಲಿ ನಡೆಯುವ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಗಣ್ಯರ ಸಮ್ಮುಖದಲ್ಲಿ ನಡೆಯುವ ಪಥಸಂಚಲನದಲ್ಲಿ ದ.ಕ. ಜಿಲ್ಲೆಯನ್ನು ಪ್ರತಿನಿಧಿಸಲಿದ್ದಾರೆ. ಇವರು ಪಾದುವ

ಪದವಿ ಪೂರ್ವ ಕಾಲೇಜು ನಂತೂರು, ಮಂಗಳೂರು ಇಲ್ಲಿನ ಪ್ರಥಮ ಪಿಯುಸಿ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಹಾಗೂ ನೀರುಮಾರ್ಗ ಗ್ರಾಮದ ಶ್ರೀ ಪುರುಷೋತ್ತಮ್ ಕುಲಾಲ್ ಮತ್ತು ಶ್ರೀಮತಿ ಸುಲತಾ ಇವರ ಪುತ್ರಿ.

Leave a Comment