ಬಿ ಸಿ ರೋಡ್ :ಗುರುವಂದನಾ ಪ್ರಯುಕ್ತ ವಿಮಾ ಸಲಹೆಗಾರ ನವೀನ್ ಕೊಡ್ಮಾಣ್ ರಿಗೆ ಸನ್ಮಾನ.

Coastal Bulletin
ಬಿ ಸಿ ರೋಡ್ :ಗುರುವಂದನಾ ಪ್ರಯುಕ್ತ ವಿಮಾ ಸಲಹೆಗಾರ ನವೀನ್ ಕೊಡ್ಮಾಣ್ ರಿಗೆ ಸನ್ಮಾನ.

ಬಂಟ್ವಾಳ :ಭಾರತೀಯ ಜೀವ ವಿಮಾ ನಿಗಮ ಬಂಟ್ವಾಳ ಶಾಖೆಯಲ್ಲಿ 69ನೇ ವಿಮಾ ಸಪ್ತಾಹದ ಅಂಗವಾಗಿ ನಡೆದ ಗುರುವಂದನಾ ಕಾರ್ಯಕ್ರಮದಲ್ಲಿ ಸುಮಾರು 23 ವರುಷಗಳಿಂದ ಜೀವ ವಿಮಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ,ತನ್ನ ಪ್ರತಿನಿಧಿ ಬಳಗದಿಂದ ಉಡುಪಿ ವಿಭಾಗ ಮಟ್ಟದಲ್ಲಿ ಐತಿಹಾಸಿಕ ಟಿ ಓ ಟಿ (TOT)ಸಾಧನೆ ಮಾಡಿದ ಮುಖ್ಯ ಜೀವವಿಮಾ ಸಲಹೆಗಾರ, ಝೋನಲ್ ಮ್ಯಾನೆಜರ್ ಕ್ಲಬ್ ಸದಸ್ಯ ನವೀನ್ ಕೊಡ್ಮಾಣ್ ಚಾಪೆ, ಇವರನ್ನು ಗೌರವಿಸಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಬಂಟ್ವಾಳ ಶಾಖೆಯ ಸೀನಿಯರ್ ಬ್ರಾಂಚ್ ಮ್ಯಾನೇಜರ್ ಗುರುದತ್ ನಾಯಕ್, ಅಸಿಸ್ಟೆಂಟ್ ಬ್ರಾಂಚ್ ಮ್ಯಾನೇಜರ್

ಮುತ್ತಯ್ಯ ಮರಾಠಿ, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಬಂಟ್ವಾಳದ ಯೋಜನಾಧಿಕಾರಿ ದಿನೇಶ್, ವಿಮಾ ಪ್ರತಿನಿಧಿ ಗಿರೀಶ್ ಹೆಗ್ಡೆ,ಮತ್ತಿತರರು ಉಪಸ್ಥಿತರಿದ್ದರು.

Leave a Comment