ಕರಿಯಂಗಳ: ಗ್ರಾ ಪಂ ಸದಸ್ಯರಿಗೆ ಗೌರವ ಸಮರ್ಪಣೆ ಹಾಗೂ "ಪಂಚ ಯಾನ" ಪುಸ್ತಕ ಬಿಡುಗಡೆ.

Coastal Bulletin
ಕರಿಯಂಗಳ: ಗ್ರಾ ಪಂ ಸದಸ್ಯರಿಗೆ ಗೌರವ ಸಮರ್ಪಣೆ ಹಾಗೂ "ಪಂಚ ಯಾನ" ಪುಸ್ತಕ ಬಿಡುಗಡೆ.

ಬಂಟ್ವಾಳ: ಕರಿಯಂಗಳ ಗ್ರಾಮ ಪಂಚಾಯತ್ ನಲ್ಲಿ ಗ್ರಾಮ ಪಂಚಾಯತ್ ಚುನಾಯಿತ ಸದಸ್ಯರ ಗೌರವ ಸಮರ್ಪಣೆ ಮತ್ತು ಸತತ ಐದು ವರ್ಷಗಳ ಅವಧಿಯ ಸಾಧನೆಗಳ "ಪಂಚ ಯಾನ" ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆಯಿತು.


ಕಾರ್ಯಕ್ರಮದಲ್ಲಿ ರಾಮಕೃಷ್ಣ ತಪೋವನದ ಶ್ರೀ ವಿವೇಕ ಚೈತನ್ಯಾನಂದ ಸ್ವಾಮೀಜಿ ಪೊಳಲಿ, ಬಾಬಾ ಫಕ್ರುದ್ದೀನ್ ಜುಮ್ಮಾ ಮಸೀದಿಯ ಗುರುಗಳು, ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ಸಚಿನ್ ಕುಮಾರ್, ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವ ಸದಸ್ಯರು, ಗ್ರಾಮದ ಪ್ರಮುಖ ಗಣ್ಯರುಗಳು, ಕರ್ನಾಟಕ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರ

ಆಪ್ತ ಸಹಾಯಕ ಚಂದ್ರಶೇಖರ್ ಪಾತೂರ್, ನಿಕಟ ಪೂರ್ವ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಬಿ.ವಿ . ಮಾಲಿನಿ, ಅಭಿವೃದ್ಧಿ ಅಧಿಕಾರಿ ವಸಂತಿ ಜಯಪ್ರಕಾಶ್, ಮಾಜಿ ಜನ ಪ್ರತಿನಿಧಿಗಳು, ದ್ವಿ. ದ. ಲೆ.ಸಹಾಯಕರು ಕು.ಭಾರತಿ, ಸಿಬ್ಬಂದಿ ವರ್ಗ, ಗ್ರಂಥಾಲಯ ಮೇಲ್ವಿಚಾರಕಿ, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಮಾನಸ ಸಂಜೀವಿನಿ ಒಕ್ಕೂಟದ ಸದಸ್ಯರು, ಗ್ರಾಮಸ್ಥರು ಭಾಗವಹಿಸಿದ್ದರು.

Leave a Comment