ಬಂಟ್ವಾಳ : ಕೊರಗಜ್ಜ ಸನ್ನಿಧಿ ಬೆಂಜನಪದವು ಇಲ್ಲಿನ ರಕ್ಷಿತ್ ನಿಲಯದಲ್ಲಿ ಫೆ.10 ರಂದು ಶನಿವಾರ ಕೊರಗಜ್ಜ ದೈವದ ಗಗ್ಗರ ಸೇವೆ ಜರಗಲಿದೆ.
ಕಾರ್ಯಕ್ರಮದ ಅಂಗವಾಗಿ, ಬೆಳಗ್ಗೆ 8.30 ಕ್ಕೆ ಗಣಹೋಮ. ನಂತರ 4 ರಿಂದ 5.30 ರವರೆಗೆ ಶ್ರೀ ಭದ್ರಕಾಳಿ ಭಜನಾ ಮಂಡಳಿ ಶಿವಾಜಿನಗರ ಬೆಂಜನಪದವು ಇವರಿಂದ ಭಜನಾ ಕಾರ್ಯಕ್ರಮ ಇರಲಿದೆ. ರಾತ್ರಿ 8 ರಿಂದ
9 ರ ತನಕ ಅನ್ನಸಂತರ್ಪಣೆ ನಡೆಯಲಿದೆ. ನಂತರ 8.30 ರಿಂದ ಕೊರಗಜ್ಜ ದೈವದ ಗಗ್ಗರ ಸೇವೆ ಜರಗಲಿದೆ ಭಕ್ತಾದಿಗಳು eಈ ಪುಣ್ಯ ಕಾರ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಸನ್ನಿಧಿಯ ವಿಜಯ ಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.














