ಬಂಟ್ವಾಳ :ಬಿ.ಸಿ ರೋಡ್ ನಲ್ಲಿರುವ ಶ್ರೀ ಸಾಯಿ ಕಿಡ್ಸ್ ಝೋನ್ ವಿದ್ಯಾಸಂಸ್ಥೆ ಗಳ ವಾರ್ಷಿಕ ಕ್ರೀಡಾಕೂಟವು ಜ.07ರಂದು ಮಂಗಳವಾರ ಶಾಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಯಿತು.
ಕ್ರೀಡಾಕೂಟದ ಉದ್ಘಾಟನೆಯನ್ನು ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಜ್ಞಾನೇಶ್ ರಾವ್ ದೀಪ ಬೆಳಗಿಸಿ ಶುಭ ಹಾರೈಸಿದರು. ಸಭಾದ್ಯಕ್ಷತೆಯನ್ನು ಶಾಲಾ ಸಂಚಾಲಕರಾದ ಐತಪ್ಪ ಪೂಜಾರಿ ವಹಿಸಿ ಮಕ್ಕಳಿಗೆ ಶುಭ ಹಾರೈಸಿದರು.ಮುಖ್ಯ ಅತಿಥಿಗಳಾಗಿ ರಕ್ಷಕ ಶಿಕ್ಷಕ ಸಂಘ ದ ಉಪಾಧ್ಯಕ್ಷರಾದ ಸುಪ್ರೀತಾ ಕೋಶಾದ್ಯಕ್ಷ
ದೇವೇಂದ್ರಪ್ಪ ,ಕಾರ್ಯಕಾರಿ ಸಮಿತಿಯ ಸದಸ್ಯರಾದ ತೇಜಸ್ವಿನಿ,ಜಯಶ್ರೀ , ಸುಂದರ್, ಮಹೇಶ್,ಮತ್ತು ಶಾಲಾ ಮುಖ್ಯೋಪಾಧ್ಯಾಯಿನಿ ದೀಕ್ಷಿತ ಭಾಗವಹಿಸಿದ್ದರು.ನಂತರ ವಿದ್ಯಾರ್ಥಿಗಳಿಗೆ ವಿವಿಧ ಕ್ರೀಡಾ ಸ್ಪರ್ಧೆಗಳು ನಡೆಯಿತು.
ಶಾಲಾ ಶಿಕ್ಷಕಿಯರಾದ ಕುಮಾರಿ ಗೀತ, ರಂಜನಿ, ಪುಷ್ಪಲತ,ಚೈತ್ರ,ಕುಮಾರಿ ಯಕ್ಷಿಣಿ, ಮತ್ತು , ಶಿಕ್ಷಣ ಶಿಕ್ಷಕ ತರಭೇತಿ ಕೇಂದ್ರದ ವಿದ್ಯಾರ್ಥಿಗಳು, ಸಿಬ್ಬಂದಿ ವರ್ಗದವರು ಸಹಕರಿಸಿದರು.














