ಫರಂಗಿಪೇಟೆ: ಶ್ರೀ ರಾಮ ಶಾಲೆಯಲ್ಲಿ ನೂತನ ತರಗತಿ ಕೊಠಡಿಗಳ ಉದ್ಘಾಟನಾ ಸಮಾರಂಭ.

Coastal Bulletin
ಫರಂಗಿಪೇಟೆ: ಶ್ರೀ ರಾಮ ಶಾಲೆಯಲ್ಲಿ ನೂತನ ತರಗತಿ ಕೊಠಡಿಗಳ ಉದ್ಘಾಟನಾ ಸಮಾರಂಭ.

ಬಂಟ್ವಾಳ 'ಅನುದಾನಿತ ಶ್ರೀ ರಾಮ ಹಿರಿಯ ಪ್ರಾಥಮಿಕ ಶಾಲೆ ಅರ್ಕುಳ ಫರಂಗಿಪೇಟೆ ಇಲ್ಲಿ ಎಂ ಆರ್ ಪಿ ಎಲ್ ನ ಸಿ ಎಸ್ ಆರ್ ಫಂಡ್ ನೆರವಿನಿಂದ ೨೫ ಲಕ್ಷ ರೂಪಾಯಿಗಳ ಅನುದಾನದಲ್ಲಿ ನಿರ್ಮಾಣಗೊಂಡ ೨ ತರಗತಿ ಕೊಠಡಿಗಳ ಉದ್ಘಾಟನಾ ಸಮಾರಂಭವು ಜು. 9ರಂದು ಶ್ರೀ ರಾಮ ಶಾಲೆಯಲ್ಲಿ ನಡೆಯಿತು.

ಎಂ ಆರ್ ಪಿ ಎಲ್ ನ ಸಿ ಎಸ್ ಆರ್ ಫಂಡ್ ನ ಸೀನಿಯರ್ ಇಂಜಿನಿಯರ್ ನಾಗರಾಜ್ ರಾವ್ ರವರು ತರಗತಿ ಕೊಠಡಿಗಳನ್ನು ಉದ್ಘಾಟಿಸಿ ಮಾತನಾಡಿ ಎಂ ಆರ್ ಪಿ ಎಲ್ ನ ಸಿ ಎಸ್ ಆರ್ ಫಂಡ್ ನಿಂದ ಕರ್ನಾಟಕದ ರಾಯಚೂರು ನಿಂದ ಕೇರಳದ ಕಾಸರಗೋಡು ವರೆಗೆ ವಿವಿಧ ಸಮಾಜಮುಖಿ ಕಾರ್ಯಗಳಿಗೆ ನೂರಾರು ಕೋಟಿ ರೂಪಾಯಿಗಳನ್ನು ವ್ಯಯಿಸುತ್ತಿದೆ ಎಂದರು.


ಅನುದಾನಿತ ಶಾಲೆಗಳು ಅನುದಾನ ವಿಲ್ಲದೆ ಸೊರಗುತ್ತಿರುವ ಈ ಕಾಲಘಟ್ಟ ದಲ್ಲಿ ಶ್ರೀ ರಾಮ ಶಾಲೆಯು ಆಡಳಿತ ಮಂಡಳಿಯ ಆಸಕ್ತಿ ಮತ್ತು ಶ್ರಮದಿಂದಾಗಿ ಜಿಲ್ಲೆಯಲ್ಲಿ ಉತ್ತಮ ಶಾಲೆಯಾಗಿ ಬೆಳಗುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ರವರು ಶ್ಲಾಘಿಸಿದರು ಅವರು ಕಂಪ್ಯೂಟರ್ ಲ್ಯಾಬ್ ನ್ನು ಉದ್ಘಾಟಿಸಿ ಮಾತನಾಡಿದರು.


ಶಾಲೆಯ ಅಭಿವೃದ್ಧಿಗಾಗಿ ಶಾಸಕನಾಗಿ ಶ್ರಮಿಸುತ್ತೇನೆ , ಉತ್ತಮ ಗುಣ ಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ

ಸಿಗುವಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ಮುಖ್ಯ ಎಂದು ಶಾಸಕರಾದ ಡಾ ವೈ ಭರತ್ ಶೆಟ್ಟಿ ಯವರು ವಾಚನಾಲಯ ವನ್ನು ಉದ್ಘಾಟಿಸಿ ಮಾತನಾಡಿದರು.

ಅರ್ಕುಳ ಬೀಡು ವಜ್ರನಾಭ ಶೆಟ್ಟಿಯವರ ಅದ್ಯಕ್ಷತೆಯಲ್ಲಿ ನಡೆದ ಸಮಾರಂಭ ದ ವೇದಿಕೆಯಲ್ಲಿ ಶಾಲಾಭಿವೃದ್ಧಿ ಮಂಡಳಿ ಅಧ್ಯಕ್ಷರಾದ ಎ ಕೆ ಜಯರಾಮ ಶೇಕ , ಶಾಲಾ ಸಂಚಾಲಕರಾದ ಎ ಗೋವಿಂದ ಶೆಣೈ , ಅಡ್ಯಾರ್ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಅಬ್ದುಲ್ ಜಲೀಲ್ , ಅಡ್ಯಾರ್ ಗ್ರಾಮ ಪಂಚಾಯತ್ ಸದಸ್ಯೆ ಸುಚಿತ್ರ ಪದ್ಮನಾಭ , ಆಡಳಿತ ಮಂಡಳಿ ಸದಸ್ಯರುಗಳಾದ ಝಫ್ರುಲ್ಲಾ ಒಡೆಯರ್ , ಕೃಷ್ಣ ಕುಮಾರ್ ಪೂಂಜಾ , ದಾಮೋದರ ಶೆಣೈ , ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಶೈಲಾ ಯು , ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಜಯಕುಮಾರ್ ಉಪಸ್ಥಿತರಿದ್ದರು.

ಶಾಲೆಯ ಮುಖ್ಯಸ್ಥರಾದ ಕೆ ಆರ್ ದೇವದಾಸ್ ರವರು ಸ್ವಾಗತಿಸಿ ಪ್ರಸ್ತಾವಿಸಿದರು ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಶೈಲಾ ಯು ವಂದಿಸಿದರು ಸಹ ಶಿಕ್ಷಕಿ ಭುವನೇಶ್ವರಿ ಶೆಟ್ಟಿ ನಿರೂಪಿಸಿದರು

Leave a Comment