ಬಿ.ಸಿ.ರೋಡ್: ಚಂಡಿಕಾಪರಮೇಶ್ವರಿ ದೇವಿ ದೇವಸ್ಥಾನ. ಮೇ 14ರಂದು ಸಾರ್ವಜನಿಕ ಸತ್ಯನಾರಾಯಣ ಪೂಜೆ. ಮೇ 19ರಂದು ಅಶ್ವತ್ಥ ಉಪನಯನ ಹಾಗೂ ವಿವಾಹ ಸಂಸ್ಕಾರ.

Coastal Bulletin
ಬಿ.ಸಿ.ರೋಡ್: ಚಂಡಿಕಾಪರಮೇಶ್ವರಿ ದೇವಿ ದೇವಸ್ಥಾನ. ಮೇ 14ರಂದು ಸಾರ್ವಜನಿಕ ಸತ್ಯನಾರಾಯಣ ಪೂಜೆ. ಮೇ 19ರಂದು ಅಶ್ವತ್ಥ ಉಪನಯನ ಹಾಗೂ ವಿವಾಹ ಸಂಸ್ಕಾರ.

ಬಂಟ್ವಾಳ : ಬಿ.ಸಿ.ರೋಡ್ ಹೃದಯಭಾಗದಲ್ಲಿರುವ ಶ್ರೀ ಚಂಡಿಕಾಪರಮೇಶ್ವರಿ ದೇವಿ ದೇವಸ್ಥಾನದಲ್ಲಿ ಮೇ ೧೪ರಂದು ಬುಧವಾರ ೨೨ನೇ ಪ್ರತಿಷ್ಠಾವರ್ಧಂತ್ಯುತ್ಸವದ ಪ್ರಯುಕ್ತ ಸಾರ್ವಜನಿಕ ಸತ್ಯನಾರಾಯಣ ಪೂಜೆ ನಡೆಯಲಿದೆ. ಬೆಳಿಗ್ಗೆ ಗಣಹೋಮ, ಶ್ರೀ ಗಣಪತಿ ಶ್ರೀ ಶಾಸ್ತಾರ ಮತ್ತು ದೇವಿಗೆ ಪಂಚಾಮೃತ ಅಭಿಷೇಕ, ನಾಗತಂಬಿಲ ನಂತರ ಸಾರ್ವಜನಿಕ ಸತ್ಯನಾರಾಯಣ ಪೂಜೆ ನಡೆಯಲಿರುವುದು.

ಮೇ ೧೮ ಮತ್ತು ೧೯ರಂದು ಶ್ರೀ ಕ್ಷೇತ್ರದಲ್ಲಿರುವ ಅಶ್ವತ್ಥ ಸಾನಿಧ್ಯದಲ್ಲಿ ಅಶ್ವತ್ಥ ಉಪನಯನ ಹಾಗೂ ವಿವಾಹ ಸಂಸ್ಕಾರ ನಡೆಯಲಿರುವುದು. ಮೇ ೧೮ರಂದು ಸಂಜೆ ಗಂಟೆ ೬ಕ್ಕೆ ಪ್ರಾರ್ಥನೆ, ಆರೂಢ ಪರಿಗ್ರಹ, ಪುಣ್ಯಾಹ, ಆರೂಢ ಶುದ್ಧಿ, ವಾಸ್ತು ರಕ್ಷೆಘ್ನ ಹೋಮ,

ವಾಸ್ತು ಬಲಿ ಮೇ ೧೯ರಂದು ಸೋಮವಾರ ಬೆಳಿಗ್ಗೆ ಗಂಟೆ ೭ರಿಂದ ಗಣಪತಿ ಹೋಮ ೯.೦೮ಕ್ಕೆ ಮಿಥುನ ಲಗ್ನಕ್ಕೆ ಅಶ್ವತ್ಥ ಉಪನಯನ ಹಾಗೂ ವಿವಾಹ ಸಂಸ್ಕಾರ ನಡೆಯಲಿರುವುದು ಚಂಡಿಕಾಪರಮೇಶ್ವರಿ ಸೇವಾ ಟ್ರಸ್ಟ್‌ನ ಅಧ್ಯಕ್ಷ ಲೋಕನಾಥ ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Comment