ಲೊರೆಟ್ಟೋ ಹಿಲ್ಸ್: ರೋಟರಿ ಕ್ಲಬ್ ಪದಗ್ರಹಣ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ ಗೌರವ. ಕನಿಷ್ಠ ಅವಧಿಯಲ್ಲಿ ಗರಿಷ್ಟ ಸಮಾಜಮುಖಿ ಚಟುವಟಿಕೆ: ಕೇಶವ ಎಚ್. ಆರ್.

Coastal Bulletin
ಲೊರೆಟ್ಟೋ ಹಿಲ್ಸ್: ರೋಟರಿ ಕ್ಲಬ್ ಪದಗ್ರಹಣ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ ಗೌರವ. ಕನಿಷ್ಠ ಅವಧಿಯಲ್ಲಿ ಗರಿಷ್ಟ ಸಮಾಜಮುಖಿ ಚಟುವಟಿಕೆ: ಕೇಶವ ಎಚ್. ಆರ್.

ಬಂಟ್ವಾಳ: ಕಳೆದ 8 ವರ್ಷಗಳ ಕನಿಷ್ಠ ಅವಧಿಯಲ್ಲಿ ಗರಿಷ್ಟ ಸಮಾಜಮುಖಿ ಚಟುವಟಿಕೆ ಮತ್ತು ರೋಟರಿ ಸಂಸ್ಥೆಗೆ ದೇಣಿಗೆ ನೀಡುವ ಮೂಲಕ ಇತರರಿಗೆ ಮಾದರಿಯಾಗಿ ಲೋರೆಟ್ಟೋ ಹಿಲ್ಸ್ ರೋಟರಿ ಕ್ಲಬ್ ಬೆಳೆದು ನಿಂತಿದೆ ಎಂದು ರೋಟರಿ ಮಾಜಿ ಜಿಲ್ಲಾ ಗವರ್ನರ್ ಕೇಶವ ಎಚ್. ಆರ್. ಹೇಳಿದ್ದಾರೆ.

ಇಲ್ಲಿನ ಲೊರೆಟ್ಟೋ ಹಿಲ್ಸ್ ರೋಟರಿ ಕ್ಲಬ್ ವತಿಯಿಂದ ಭಾನುವಾರ ಸಂಜೆ ನಡೆದ ಪದಗ್ರಹಣ ಮತ್ತು ಸಾಧಕ ವಿದ್ಯಾರ್ಥಿ ಗಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಇದೇ ವೇಳೆ ನೂತನ ಪದಾಧಿಕಾರಿಗಳಿಗೆ ಅವರು ಪ್ರತಿಜ್ಞಾವಿಧಿ ಬೋಧಿಸಿದರು. ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆಯಲ್ಲಿ 625 ಅಂಕ ಗಳಿಸಿದ ವಿದ್ಯಾರ್ಥಿನಿ ಸಾನಿಧ್ಯ ರಾವ್ ಸಹಿತ ವಿವಿಧ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ, ವಿವಿಧ ಶಾಲೆಗಳಿಗೆ ಆರ್ಥಿಕ ನೆರವು ಹಸ್ತಾಂತರಿಸಲಾಯಿತು. 

ಸಹಾಯಕ ಗರ್ವನರ್ ಸಿಎ ಉಮೇಶ್ ರಾವ್ ಮಿಜಾರು ಮಾತನಾಡಿ, 'ಕಳೆದ ಸಾಲಿನಲ್ಲಿ ಈ ಕ್ಲಬ್ಬಿಗೆ ಜಿಲ್ಲೆಯ ಅತ್ಯುನ್ನತ ಡೈಮಂಡ್ ಪ್ಲಸ್ ಪ್ರಶಸ್ತಿ ದೊರೆತಿರುವುದು ಕ್ಲಬ್ಬಿನ

ಸಾಧನೆಗೆ ಹಿಡಿದ ಕೈಗನ್ನಡಿಯಾಗಿದೆ ' ಎಂದರು.

ವಲಯ ಸೇನಾನಿ ರಾಮಚಂದ್ರ ಶೆಟ್ಟಿಗಾರ್, ಕ್ಲಬ್ಬಿನ ಸ್ಥಾಪಕಾಧ್ಯಕ್ಷ ಅವಿಲ್ ಮಿನೇಜಸ್, ನೂತನ ಅಧ್ಯಕ್ಷ ವಿಜಯ ಫೆನಾರ್ಂಡಿಸ್ ಮಾತನಾಡಿದರು. 

ಕ್ಲಬ್ಬಿನ ನಿಕಟ ಪೂರ್ವ ಕಾರ್ಯದರ್ಶಿ ರಾಜೇಶ್ ಶೆಟ್ಟಿ ಸೀತಾಳ, ನೂತನ ಕೋಶಾಧಿಕಾರಿ ಅರುಣ್ ಮಾಡ್ತ, ಮಾಜಿ ಸಹಾಯಕ ಗವರ್ನರ್ ರಾಘವೇಂದ್ರ ಭಟ್, ಮಾಜಿ ಅಧ್ಯಕ್ಷರಾದ ಶ್ರುತಿ ಮಾಡ್ತ, ಎಂ. ಪದ್ಮರಾಜ್ ಬಲ್ಲಾಳ್ ಮತ್ತಿತರರು ಇದ್ದರು.

ನಿಕಟ ಪೂರ್ವ ಅಧ್ಯಕ್ಷ ಸುರೇಶ್ ಶೆಟ್ಟಿ ಸಿದ್ದಕಟ್ಟೆ, ಸ್ವಾಗತಿಸಿ, ನೂತನ ಕಾರ್ಯದರ್ಶಿ ಮೋಹನ್ ಕೆ. ಶ್ರೀಯಾನ್ ರಾಯಿ ವಂದಿಸಿದರು. ಸದಸ್ಯರಾದ ನೆಲ್ಸನ್ ಮೋನಿಸ್ ಮತ್ತು ಕೆ.ರಮೇಶ್ ನಾಯಕ್ ರಾಯಿ ಕಾರ್ಯಕ್ರಮ ನಿರೂಪಿಸಿದರು.

Leave a Comment