ಗೋವಿನತೋಟ :ಶ್ರೀ ರಾಧ ಸುರಭಿ ಗೋಮಂದಿರದಲ್ಲಿ ಚಪ್ಪರ ಮಹೂರ್ತ ಕಾರ್ಯಕ್ರಮ.

Coastal Bulletin
ಗೋವಿನತೋಟ :ಶ್ರೀ ರಾಧ ಸುರಭಿ ಗೋಮಂದಿರದಲ್ಲಿ ಚಪ್ಪರ ಮಹೂರ್ತ ಕಾರ್ಯಕ್ರಮ.

ಬಂಟ್ವಾಳ :ಶ್ರೀ ರಾಧ ಸುರಭಿ ಗೋಮಂದಿರ ರಾಷ್ಟ್ರೀಯ ಗೋಸೇವಾ ಟ್ರಸ್ಟ್ ಬ್ರಹ್ಮಗಿರಿ, ಗೋವಿನತೋಟ ಪುದು ಗ್ರಾಮ ಹಾಗೂ ಗೋಸೇವಾ ಗತಿವಿಧಿ ,ಕರ್ನಾಟಕ ಇದರ ಸಂಯುಕ್ತ ಆಶ್ರಯದಲ್ಲಿ ಶ್ರೀ ಭಕ್ತಿ ಭೂಷಣ್ ಪ್ರಭುಜಿ ನೇತೃತ್ವದಲ್ಲಿ ನಡೆಯುವ ಅಷ್ಟೋತ್ತರ ಶತ (108) ಶ್ರೀ ಮದ್ಭಾಗವತ ಕಥಾ ಪಾರಾಯಣ ಸಪ್ತಾಹ, ಮಹಾಯಜ್ಞ ಮತ್ತು ಗೋ ನವರಾತ್ರಿ ಉತ್ಸವದ ಪ್ರಯುಕ್ತ ಚಪ್ಪರ ಮಹೂರ್ತ ಕಾರ್ಯಕ್ರಮವು ನ 7ರಂದು ಮಂಗಳವಾರ ಬೆಳಿಗ್ಗೆ :ಶ್ರೀ ರಾಧ ಸುರಭಿ ಗೋಮಂದಿರದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಉದ್ಯಮಿ ಯಶ್ ಶೆಟ್ಟಿ ದುಬೈ,,ರಾಧಾ ಸುರಭಿ ಗೋ ಮಂದಿರದ ಭಕ್ತಿ ಭೂಷಣ್ ಪ್ರಭು, ಕಾರ್ಯಧ್ಯಕ್ಷ ತಾರಾನಾಥ ಕೊಟ್ಟಾರಿ ತೇವು,,ವೇದಿಕೆ ಸಮಿತಿ ಸಂಚಾಲಕ ನವೀನ್ ರಾಮಲ್ ಕಟ್ಟೆ, ಕೋಶಾಧಿಕಾರಿ ಪದ್ಮನಾಭ ಶೆಟ್ಟಿ ಪುಂಚಮೆ

ಪ್ರಮುಖರಾದ ಶ್ರೀ ದುರ್ಗಾ ಅರೆಂಜರ್ಸ್ ಮಾಲಕ ಶಿವಪ್ರಸಾದ್ ಶೆಟ್ಟಿ, ಭಾಸ್ಕರ್ ಚೌಟ, ಅನಿಲ್ ಪಂಡಿತ್, ಜಯಶ್ರೀ ಕರ್ಕೇರ, ನವೀನ್ ಚಾಪೆ, , ಸುಭದ್ರಾ ಮಯ್ಯ, ಉಮಾ ಚಂದ್ರಶೇಖರ್, ರಾಮಚಂದ್ರ ಬಂಗೇರ ದೇವಸ್ಯ, ವಿನಯ್ ಮತ್ತಿತರರು ಉಪಸ್ಥಿತರಿದ್ದರು

Leave a Comment