ಕುಲಶೇಖರ:ಶ್ರೀ ವೀರನಾರಾಯಣ ದೇವಸ್ಥಾನ, "ಆಟಿಡೊಂಜಿ ದಿನೊಟು ಆಟಿದ ನೆಂಪು" ಕಾರ್ಯಕ್ರಮ.

Coastal Bulletin
ಕುಲಶೇಖರ:ಶ್ರೀ ವೀರನಾರಾಯಣ ದೇವಸ್ಥಾನ, "ಆಟಿಡೊಂಜಿ ದಿನೊಟು ಆಟಿದ ನೆಂಪು" ಕಾರ್ಯಕ್ರಮ.

ಮಂಗಳೂರು :ದಕ್ಷಿಣ ಕನ್ನಡ ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘ ಮಂಗಳೂರು,ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ವಿಭಾಗ, ಶ್ರೀ ವೀರನಾರಾಯಣ ಮಾತೃ ಮಂಡಳಿ, ಶ್ರೀ ದೇವಿ ಮಾತೃ ಮಂಡಳಿ ಇವರ ಜಂಟಿ ಆಶ್ರಯದಲ್ಲಿ ದಿನಾಂಕ 06.08.2022 ರಂದು ಬೆಳಿಗ್ಗೆ 10.15ಕ್ಕೆ ಶ್ರೀ ವೀರನಾರಾಯಣ ದೇವಸ್ಥಾನ ಕುಲಶೇಖರದಲ್ಲಿ ಕುಲಾಲ ಸಮುದಾಯದ ಆಟಿಡೊಂಜಿ ದಿನೊಟು ಕುಲಶೇಖರದಲ್ಲಿ ಆಟಿದ ನೆಂಪು ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.

ಕಾರ್ಯಕ್ರಮದ ಪ್ರಾರಂಭದಲ್ಲಿ ಜನಪದ ನೃತ್ಯ ಸ್ಪರ್ಧೆ ನಡೆಯಿತು. ನಂತರ ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘದ ಅಧ್ಯಕ್ಷರಾದ ಶ್ರೀ ಮಯೂರು ಉಳ್ಳಾಲ ಇವರ ಘನ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ಈ ಸಭಾ ಕಾರ್ಯಕ್ರಮದಲ್ಲಿ ಆಟಿಯ ಬಗ್ಗೆ ಉಪನ್ಯಾಸವನ್ನು ಮಂಗಳೂರು ವಿಶ್ವವಿದ್ಯಾನಿಲಯದ ಕಾಲೇಜಿನ ಉಪನ್ಯಸಕರಾದ ಶ್ರೀಮತಿ ಆಶಾ ಇವರು ನೀಡಿದರು. ಮುಖ್ಯ ಅಥಿತಿಗಳಾಗಿ ಮಾತೃ ಸಂಘದ ಪ್ರದಾನ ಕಾರ್ಯದರ್ಶಿ ಶ್ರೀ ಸದಾಶಿವ ಕುಲಾಲ್ ಶ್ರೀ ವೀರನಾರಾಯಣ ದೇವಸ್ಥಾನದ ಮೊಕ್ತೇಸ್ಥರರು ಶ್ರೀ ಪುರುಷೋತ್ತಮ ಕುಲಾಲ್ ಕಲ್ಬಾವಿ,ಶ್ರೀ ದೇವಿ ದೇವಸ್ಥಾನದ ಅದ್ಯಕ್ಷರಾದ ಶ್ರೀ ಪ್ರಸಾದ್ ಕುಲಾಲ್ ,ಶ್ರೀ ವೀರನಾರಾಯಣ ದೇವಸ್ಥಾನದ ಸೇವಾ ಸಮಿತಿಯ ಅಧ್ಯಕ್ಷರಾದ ಶ್ರೀ ಸುಂದರ ಕುಲಾಲ್ ಶಕ್ತಿನಗರ,ಸೇವಾದಳಪತಿ ಶ್ರೀ ಕಿರಣ್ ಅಟ್ಲೂರು,ಮಾತೃ ಸಂಘದ ಸಮಿತಿಯ ಸದಸ್ಯರಾದ ಶ್ರೀಮತಿ ರೇಖಾ ಸಂಜೀವ,ಶ್ರೀಮತಿ ಉಮಾ ಚಂದ್ರಶೇಖರ್,ಶ್ರೀ ದೇವಿ ಮಾತೃ ಮಂಡಳಿಯ ಅದ್ಯಕ್ಷರಾದ ಶ್ರೀಮತಿ ರೂಪ.ಕೆ.ಎಸ್ ಉಪಸ್ಥಿತಿ ಇದ್ದರು.ಮಹಿಳಾ ವಿಭಾಗದ ಹಿರಿಯ ಸದಸ್ಯರಿಗೆ ಹಾಗೂ ಸಾಧಕರಿಗೆ ವೇದಿಕೆಯಲ್ಲಿ ಗೌರವಾರ್ಪಣೆ ನಡೆಯಿತು.

ಕುಮಾರಿ ರಕ್ಷಾ ಪ್ರಾರ್ಥನೆ ಮಾಡಿದರು. ಬಂದ

ಅಥಿತಿಗಳನ್ನು ಜಿಲ್ಲಾ ಮಹಿಳಾ ವಿಭಾಗದ ಅದ್ಯಕ್ಷರಾದ ಶ್ರೀಮತಿ ಜಲಾಜಕ್ಷಿ.ಪಿ.ಕುಲಾಲ್ ಎಲ್ಲರನ್ನೂ ಸ್ವಾಗತಿಸಿದರು.ಜಿಲ್ಲಾ ಮಹಿಳಾ ವಿಭಾಗದ ಕಾರ್ಯದರ್ಶಿ ಯಾದ ಶ್ರೀಮತಿ ಪ್ರಭಾ. ಎಸ್. ಕುಲಾಲ್ ಇವರು ಪ್ರಸ್ತಾವನೆ ಮಾಡಿದರು.ಶ್ರೀ ವೀರನಾರಾಯಣ ಮಾತೃ ಮಂಡಳಿಯ ಅದ್ಯಕ್ಷರಾದ ಶ್ರೀಮತಿ ಗೀತಾ ಮನೋಜ್ ಧನ್ಯವಾದ ನೀಡಿದರು. ಪ್ರವೀಣ್ ಬಸ್ತಿ ಮತ್ತು ನವೀನ್ ಕುಲಾಲ್ ಕಾರ್ಯಕ್ರಮ ನಿರೂಪಿಸಿದರು. ವೀರನಾರಾಯಣ ದೇವಸ್ಥಾನದ ಟ್ರಸ್ಟಿ ಅದ್ಯಕ್ಷರಾದ ಪ್ರೇಮನಂದ ಕುಲಾಲ್,ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ದಾಮೋದರ ಬಂಗೇರ,ಕೋಶಾಧಿಕಾರಿ ಶ್ರೀ ಕುಶಲಪ್ಪ ಕುಲಾಲ್,ಸುರೇಶ್ ಕುಲಾಲ್ ಚಾ ಪರ್ಕ ತಂಡದ ಕಲಾವಿದ ಶ್ರೀ ತಿಮ್ಮಪ್ಪ ಕುಲಾಲ್ ಮಾಧ್ಯಮ ಪ್ರತಿನಿಧಿ ಶ್ರೀ ಸತೀಶ್ ಸಂಪಾಜೆ ಸಭೆಯಲ್ಲಿ ಉಪಸ್ಥಿತಿ ಇದ್ದರು.ಮಧ್ಯಾಹ್ನ ಮಹಿಳಾ ವಿಭಾಗದ ಸದಸ್ಯರು ಮನೆಯಲ್ಲಿ ಮಾಡಿದ ಆಟಿಯ ತಿನಸುಗಳೊಂದಿಗೆ ಸಹಾ ಬೋಜನ ನಡೆಸಿದರು. ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಪ್ರಸಿದ್ಧ ಹಾಡುಗಾರಿಕೆಯ ಶ್ರೀ ಚೇತನ್ ಖುಷಿ ಇವರು ಹಾಡುಗಳ ಮೂಲಕ ಮನರಂಜಿಸಿದರು. ಸದಸ್ಯರ ಮಕ್ಕಳ ನೃತ್ಯದ ಮುಖಂತರ ಆಟಿದ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಿದರು.ಶ್ರೀ ಶುಭಂ ಕುಲಾಲ್ ಸಾಂಸ್ಕೃತಿಕ ಕಾರ್ಯಕ್ರಮದ ನಿರೂಪಣೆ ಮಾಡಿದರು.

Leave a Comment