ಬಂಟ್ವಾಳ :ಶ್ರೀ ವರಮಹಾಲಕ್ಷ್ಮಿ ಪೂಜಾ ಸೇವಾ ಸಮಿತಿ, ಕೊಡ್ಮಾಣ್ ಇದರ 14ನೇ ವರ್ಷದ ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ಪೂಜೆಯ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ಜು 7ರಂದು ದ ಕ ಜಿ ಪ ಹಿರಿಯ ಪ್ರಾಥಮಿಕ ಶಾಲೆ ಕೊಡ್ಮಾಣ್ ನಲ್ಲಿ ನಡೆಯಿತು.
ಶ್ರೀ ವರಮಹಾಲಕ್ಷ್ಮಿ ಪೂಜಾ ಸೇವಾ ಸಮಿತಿಯ ಅಧ್ಯಕ್ಷರಾದ ಪಾರ್ವತಿ ಎಂ ಶೆಟ್ಟಿ ಹಾಗೂ ಸುಲೋಚನಾ ಕೆ ಶೆಟ್ಟಿ ಕೊಡಮಣ್ಣು ಇವರು ದೀಪ ಬೆಳಗಿಸಿ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಮೇರಮಜಲು ಗ್ರಾ ಪಂ ಅಧ್ಯಕ್ಷ ಸತೀಶ್ ನಾಯ್ಗ
ಕೊಡ್ಮಾಣ್ ಕೊಡಿ, ಗ್ರಾ, ಪಂ ಸದಸ್ಯ ಪದ್ಮನಾಭ ಶೆಟ್ಟಿ,ಶ್ರೀ ಶಾರದಾ ಪೂಜಾ ಸೇವಾ ವೇದಿಕೆ ಸಂಯೋಜಕರಾದ ಗೋಪಾಲ್ ಕುಲಾಲ್, ಶ್ರೀ ವರಮಹಾಲಕ್ಷ್ಮಿ ಪೂಜಾ ಸೇವಾ ಸಮಿತಿಯ ಕಾರ್ಯದರ್ಶಿ ರೇಖಾ ರಾಜರಾಮ ಕೊಟ್ಟಿ0ಜ, ಮತ್ತು ಸರ್ವ ಸದಸ್ಯರು ಉಪಸ್ಥಿತರಿದ್ದರು.









