ಬಂಟ್ವಾಳ :ಸಂಸ್ಕಾರ ಭಾರತಿ ವತಿಯಿಂದ ಶ್ರೀ ಆಂಜನೇಯ ದೇವಸ್ಥಾನ ಫರಂಗಿಪೇಟೆ ಆಶ್ರಯದಲ್ಲಿ ಉಚಿತ ಮಕ್ಕಳ ಬೇಸಿಗೆ ಶಿಬಿರ ಸಂಸ್ಕಾರ ಸೌರಭ ಶ್ರೀ ಆಂಜನೇಯ ದೇವಸ್ಥಾನದ ಸಭಾಂಗಣದಲ್ಲಿ ಉದ್ಘಾಟನೆ ಗೊಂಡಿತು .
ಉದ್ಘಾಟನೆಯನ್ನು ಸಂಸ್ಕಾರ ಭಾರತಿ ಜಿಲ್ಲಾ ಅಧ್ಯಕ್ಷರಾದ ತಾರಾನಾಥ ಕೊಟ್ಟಾರಿ ತೇವು ರವರು ನೆರವೇರಿಸಿ ಮಾತನಾಡಿದ ಅವರು ಶಾಲೆ ಕಾಲೇಜುಗಳಲ್ಲಿ ಸಿಗದಂತ ಪಾಠ ಸಂಸ್ಕಾರ ಗಳು ಈ ರೀತಿಯ ಶಿಭಿರದ ಮೂಲಕ ಸಿಗಲಿದೆ . ಇದು ಈ ಮಕ್ಕಳ ಜೀವನಕ್ಕೆ ಒಳ್ಳೆಯ ಅಡಿಪಾಯ ವಾಗಲಿದೆ . ನಿರಂತರ ಚಟುವಟಿಕೆ ಯಿಂದ ಸಾಧನೆ ಮಾಡಬಹುದಾಗಿದೆ ಎಂದರು.
ಸಂಸ್ಕಾರ ಭಾರತಿ ಬಂಟ್ವಾಳ ತಾಲೂಕು ಬಂಟ್ವಾಳ ತಾಲೂಕು ಸಂಯೋಜಕರಾದ ಅನಿಲ್ ಪಂಡಿತ್ , ಆಂಜನೇಯ ದೇವಸ್ಥಾನದ ಅಧ್ಯಕ್ಷರಾದ ಚಂದ್ರಶೇಖರ
ಗಾಂಭೀರ , ಉದ್ಯಮಿ ಧನರಾಜ್ ಶೆಟ್ಟಿ , ಸಾಮಾಜಿಕ ಕಾರ್ಯಕರ್ತ ದಿನೇಶ್ ಶೆಟ್ಟಿ ಕೊಟ್ಟಿಂಜ ಶಿಬಿರ ಸಂಯೋಜಕಿ ಭುವನೇಶ್ವರಿ ಶೆಟ್ಟಿ , ಬಾಲಗೋಕುಲ ಪ್ರಮುಖರಾದ ಉಮೇಶ್ ವೇದಿಕೆಯಲ್ಲಿದ್ದರು.
ಐದು ದಿನಗಳ ಬೇಸಿಗೆ ಶಿಬಿರದಲ್ಲಿ ಜಿಲ್ಲೆಯ ಉತ್ತಮ ಸಂಪನ್ಮೂಲ ವ್ಯಕ್ತಿ ಗಳಿಂದ ಯೋಗ , ಭಜನೆ ತರಬೇತಿ, ಮುಖವಾಡ ತಯಾರಿ , ಪರಿಸರ ಅಧ್ಯಯನ , ಕುಣಿತ ಭಜನೆ , ಪೇಪರ್ ಕ್ರಾಫ್ಟ್ , ಕ್ರಿಯಾತ್ಮಕ ಚಟುವಟಿಕೆ , ದಿನಚರಿ ಹವ್ಯಾಸ ಮತ್ತಿತರ ಚಟುವಟಿಕೆಗಳು ನಡೆಯಲಿದೆ.














