ರಾಯಿ: ಆರೋಗ್ಯ ತಪಾಸಣೆ, ರಕ್ತದಾನ ಶಿಬಿರ ಅನಾರೋಗ್ಯ ಪೀಡಿತರಿಗೆ ಆರ್ಥಿಕ ನೆರವು ವಿತರಣೆ.

Coastal Bulletin
ರಾಯಿ: ಆರೋಗ್ಯ ತಪಾಸಣೆ, ರಕ್ತದಾನ ಶಿಬಿರ ಅನಾರೋಗ್ಯ ಪೀಡಿತರಿಗೆ ಆರ್ಥಿಕ ನೆರವು ವಿತರಣೆ.

ಬಂಟ್ವಾಳ:ಯುವಜನತೆ ಒಟ್ಟಾಗಿ ವಿವಿಧ ಸಾಮಾಜಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಸುವುದರ ಜೊತೆಗೆ ಅನಾರೋಗ್ಯಪೀಡಿತ ಕುಟುಂಬಗಳಿಗೆ ಆರ್ಥಿಕ ನೆರವು ನೀಡುವಂತಹ ಮಾನವೀಯ ಕಾರ್ಯಕ್ರಮಗಳಿಗೆ ಎಲ್ಲರ ಸಹಕಾರ ಲಭಿಸುತ್ತದೆ ಎಂದು ಮಂಗಳೂರು ಕಂಬಳ ಸಮಿತಿ ಅಧ್ಯಕ್ಷ ಬ್ರಿಜೇಶ್ ಚೌಟ ಹೇಳಿದ್ದಾರೆ.

ಇಲ್ಲಿನ ರಾಯಿ ನಮ್ಮ ಜವನೆರ್ ಸೇವಾ ಟ್ರಸ್ಟ್ ವತಿಯಿಂದ ಭಾನುವಾರ ಸಂಜೆ ಸಮಾರೋಪಗೊಂಡ ಆರೋಗ್ಯ ಶಿಬಿರ ಮತ್ತು ರಕ್ತದಾನ ಶಿಬಿರ ಕಾರ್ಯಕ್ರಮದಲ್ಲಿ ಅನಾರೋಗ್ಯ ಪೀಡಿತ ಕುಟುಂಬಗಳಿಗೆ ಆಥರ್ಿಕ ನೆರವು ಹಸ್ತಾಂತರಿಸಿ ಅವರು ಮಾತನಾಡಿದರು.

ಉದ್ಯಮಿ ಸಂದೇಶ ಶೆಟ್ಟಿ ಮಂಗಳೂರು, ವಕೀಲ ರಂಜಿತ್ ಪೂಜಾರಿ ಮೈರ, ಹಿಂದೂ ಧಮರ್ೋತ್ಥಾನ ವೇದಿಕೆ ಟ್ರಸ್ಟ್ ಅಧ್ಯಕ್ಷ ಎಂ.ದುಗರ್ಾದಾಸ್ ಶೆಟ್ಟಿ ಮಾವಂತೂರು ಶುಭ ಹಾರೈಸಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಸಂತೋಷ್ ಕುಮಾರ್ ಬೆಟ್ಟು, ಕಲಾವಿದ ಸ್ವರಾಜ್ ಶೆೆಟ್ಟಿ, ಉದ್ಯಮಿ ನಾಗೇಶ ಸಾಲಿಯಾನ್, ಪ್ರಮುಖರಾದ ರಶ್ಮಿತ್ ಶೆಟ್ಟಿ ಕೈತ್ರೋಡಿ, ಡೊಂಬಯ ಅರಳ, ಕಿಸೋರ್ ಪಲ್ಲಿಪಾಡಿ, ಶೇಖರ್ ಅಂಚನ್ ಪಿಲ್ಕಾಜೆಗುತ್ತು, ಲೋಕೇಶ ಕೈತ್ರೋಡಿ, ಸುರೇಶ ಎಂ.ಮಂಗಳೂರು, ಟ್ರಸ್ಟ್ ಅಧ್ಯಕ್ಷ ಪ್ರದೀಪ್ ಮೀಯಾಲು

ಮತ್ತಿತರರು ಇದ್ದರು.

ಸಮಿತ್ ರಾಯಿ ಸ್ವಾಗತಿಸಿ, ದಿನೇಶ್ ಸುವರ್ಣ ರಾಯಿ ವಂದಿಸಿ ಕಾರ್ಯಕ್ರಮ ನಿರೂಪಿಸಿದರು.

ಬೆಳಿಗ್ಗೆ ನಡೆದ ಆರೋಗ್ಯ ತಪಾಸಣೆ ಮತ್ತು ರಕ್ತದಾನ ಶಿಬಿರ ಕಾರ್ಯಕ್ರಮಕ್ಕೆ ರಾಯಿ ಶ್ರೀ ಮಹಾಲಿಂಗೇಶ್ವರ ದೇವಳದ ಪ್ರಧಾನ ಅರ್ಚಕ ಡಿ.ರಾಮಚಂದ್ರ ಭಟ್ ಚಾಲನೆ ನೀಡಿದರು. ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು ಶುಭ ಹಾರೈಸಿದರು. ಉದ್ಯಮಿ ಭುವನೇಶ್ ಪಚ್ಚಿನಡ್ಕ, ರಾಯಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ.ಮನೋನ್ಮಣಿ, ಸಿದ್ಧಕಟ್ಟೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು, ರೋಟರಿ ಕ್ಲಬ್ ಅಧ್ಯಕ್ಷ ರಾಮಚಂದ್ರ ಅಣ್ಣಳಿಕೆ, ಪ್ಮುಖರಾದ ಡಾ.ಸುದೀಪ್ ಕುಮಾರ್ ಜೈನ್, ಸದಾನಂದ ಗೌಡ ಮತ್ತಾವು, ದಿನೇಶ ಭಟ್, ಸುಂದರ ಭಂಡಾರಿ, ಅಶ್ವಥ್ ಅರಳ ಮತ್ತಿತರರು ಪಾಲ್ಗೊಂಡಿದ್ದರು.

Leave a Comment