ಬಂಟ್ವಾಳ :ಶ್ರೀರಾಮ ಪದವಿ ಮಹಾವಿದ್ಯಾಲಯ, ಕಲ್ಲಡ್ಕ ಆಯೋಜಿಸುತ್ತಿರುವ *ಆಸ್ವಾದನಮ್-2022* ಎಂಬ ಹೆಸರಿನ ಆಹಾರ ಮೇಳವು ಸಂಸ್ಥೆಯ ಆವರಣದಲ್ಲಿ 9 ಆಗಸ್ಟ್ 2022ರ ಮಂಗಳವಾರ* ಬೆಳಗ್ಗೆ 9.00 ರಿಂದ ಸಂಜೆಯವರೆಗೆ ನಡೆಯಲಿದೆ. ಇದು ವಿದ್ಯಾರ್ಥಿಗಳೇ ನಡೆಸುವ ಆಹಾರ ಮೇಳವಾಗಿದೆ.
ಈ ಆಹಾರ ಮೇಳದಲ್ಲಿ ಮಳಿಗೆಗಳನ್ನು ತೆರೆಯಲು ಸಾರ್ವಜನಿಕರಿಗೆ ಅವಕಾಶವಿದೆ.ಮಳಿಗೆಯನ್ನು ತೆರೆಯುವ ಆಸಕ್ತರು ದಿನಾಂಕ 8 ಆಗಸ್ಟ್ 22ರ ಸೋಮವಾರ ಬೆಳಗ್ಗೆ 11 ಗಂಟೆಯ ಒಳಗೆ ಈ ಕೆಳಗಿನ ದೂರವಾಣಿ ಸಂಖ್ಯೆಗೆ ತಿಳಿಸಿ.7760707575 ಹೆಸರು ದಾಖಲಿಸಬೇಕು. ಮೇಳದ ದಿನ ಬೆಳಗ್ಗೆ ನೇರವಾಗಿ ಬರುವ ಯಾರಿಗೂ ಸ್ಟಾಲ್ ಹಾಕಲು ಅವಕಾಶ ಇರುವುದಿಲ್ಲ.
ಹಪ್ಪಳ, ಸಂಡಿಗೆ, ಉಪ್ಪಿನಕಾಯಿ, ಪ್ಯಾಕೆಟ್ ಮಾಡಲಾದ ಸಾಂಬಾರ ಪುಡಿಗಳು, ಹಲಸಿನ ಉತ್ಪನ್ನಗಳು ಹಾಗೂ ಇನ್ನಿತರ ಯಾವುದೇ ಕುರುಕಲು ತಿಂಡಿ ಹಾಗೂ
ಅಡುಗೆ ಕೋಣೆ ಸಂಬಂಧಿ ಇನ್ನಿತರ ಪದಾರ್ಥಗಳ ಮಾರಾಟಕ್ಕೆ ಮಾತ್ರ ಅವಕಾಶ.
ಕಾಲೇಜು ಕಟ್ಟಡದ ಮೊದಲ ಅಂತಸ್ತಿನಲ್ಲಿ ಸ್ಟಾಲ್ ಗೆ ಅವಕಾಶ ನೀಡಿದೆ. ಬ್ಯಾಗ್, ಪುಸ್ತಕ, ಆಭರಣಗಳು ಇತ್ಯಾದಿ ಸ್ಟಾಲ್ ಗೆ ಅವಕಾಶವಿಲ್ಲ .
ಈ ಆಹಾರ ಮೇಳವನ್ನು ವಿದ್ಯಾರ್ಥಿಗಳ ಕಲಿಕಾ ಪೂರಕ ಚಟುವಟಿಕೆಯಾಗಿ ಆಯೋಜಿಸಿದ್ದು, ಅವರ ವ್ಯಾಪಾರ ವಹಿವಾಟಿಗೆ ಯಾವುದೇ ತೊಂದರೆಯಾಗದಂತೆ ಸಾರ್ವಜನಿಕರ ಸ್ಟಾಲ್ ಗೆ ಅವಕಾಶ ಕಲ್ಪಿಸಿದೆ.
ನೋಂದಣಿ ಶುಲ್ಕ ರೂ 250/-ಹೆಚ್ಚಿನ ಮಾಹಿತಿಗೆ ಈ ಕೆಳಗಿನ ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು.
8310200738
9844311742
















