ಬಂಟ್ವಾಳ : ತಾಲೂಕಿನ ಪುದು ಗ್ರಾಮದ ಕುಮ್ದೇಲ್ ಶ್ರೀ ಕೊರ್ದಬ್ಬು ದೈವಸ್ಥಾನದ ಜೀರ್ಣೋದ್ಧಾರಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ 1 ಲಕ್ಷ ರೂಪಾಯಿ ಅನುದಾನ ಮಂಜುರಾಗಿದ್ದು , ಅದರ ಡಿ ಡಿ ಯನ್ನು ದೈವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳಿಗೆ ಹಸ್ತಾಂತರಿಸಲಾಯಿತು.
ಈ ಸಂದರ್ಭ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತುಂಬೆ ವಲಯದ ಮೇಲ್ವಿಚಾರಕರಾಕಿ ಮಮತಾ ಸಂತೋಷ್, ದೈವಸ್ಥಾನದ ಆಡಳಿತ ಮೊಕ್ತೇಸರರಾದ ಭಾಸ್ಕರ ಚೌಟ, ಸಮಿತಿಯ ಪದಾಧಿಕಾರಿಗಳಾದ ಉಮೇಶ್ ಶೆಟ್ಟಿ ಬರ್ಕೆ,
ಭರತ್ ಕುಮ್ದೇಲು, ಹರಿಕೃಷ್ಣ ಕಡೆಗೋಳಿ, ಪದ್ಮನಾಭ ಗೋವಿನತೋಟ, ಅಶೋಕ್,ಜಗದೀಶ್ ಕುಮ್ದೆಲು, ಸೇವಾ ಪ್ರತಿನಿಧಿ ಅಮಿತಾ, ಒಕ್ಕೂಟದ ಅಧ್ಯಕ್ಷ ಸುಕೇಶ್ ಶೆಟ್ಟಿ ತೇವುಕಾಡು ಪದಾಧಿಕಾರಿಗಳಾದ ವಿನುತ ಮತ್ತು ಮೋಹಿನಿ ಇವರು ಉಪಸ್ಥಿತರಿದ್ದರು.











