ಮಂಗಳೂರು :ಮೇಪಲ್ ಶೋರೂಂಗೆ ಕಳ್ಳರು ನುಗ್ಗಿ 50 ಲಕ್ಷಕ್ಕೂ ಹೆಚ್ಚು ಮೌಲ್ಯದ ಐಫೋನ್, ಏಪಲ್ ಫೋನ್ ಗಳನ್ನು ಕಳವು ಮಾಡಿದ ಘಟನೆ ಮಂಗಳೂರಿನ ಬಲ್ಮಠದಲ್ಲಿ ನಡೆದಿದೆಶನಿವಾರ ಮತ್ತು ಭಾನುವಾರ ವೀಕೆಂಡ್ ಲಾಕ್ ಡೌನ್ ಇದ್ದ ಕಾರಣ ಇಂದು ಬೆಳಗ್ಗೆ ಶೋರೂಂ ಓಪನ್ ಮಾಡಿದಾಗ ಕೃತ್ಯ ಬೆಳಕಿಗೆ ಬಂದಿದೆ.
ಮಂಗಳೂರಿನಲ್ಲಿ ಇರುವ ಏಕೈಕ ಏಪಲ್, ಐಫೋನ್ ಶೋರೂಂ ಇದಾಗಿದ್ದು ಅತ್ಯಧಿಕ ಬೆಲೆಯ ಮೊಬೈಲ್ ಗಳು ಮಾತ್ರ ಇಲ್ಲಿರುತ್ತವೆ.ಕಳ್ಳರು ಶೋ ರೂಂ ನ ಹಿಂಭಾಗದ ಕಿಟಕಿಯನ್ನು ಒಡೆದು ನುಗ್ಗಿ ಒಳಗಿರುವ ಲಕ್ಷಕ್ಕೂ ಹೆಚ್ಚು ಬೆಲೆಬಾಳುವ ಮೊಬೈಲ್ ಗಳನ್ನು ಕಳವುಗೈದಿದ್ದಾರೆ.ಕಳವಾದ ಮೊಬೈಲ್ ಗಳ ಒಟ್ಟು
ಬೆಲೆ ಐವತ್ತು ಲಕ್ಷಕ್ಕೂ ಅಧಿಕ ಎಂದು ಅಂದಾಜಿಸಲಾಗಿದೆ.
ಕಳ್ಳರು ಕೃತ್ಯದ ಬಳಿಕ ಶೋರೂಂ ಒಳಗಿದ್ದ ಸಿಸಿಟಿವಿಯ ಡಿವಿಆರ್ ಎತ್ತಿಕೊಂಡು ಹೋಗಿದ್ದಾರೆ.ಹೀಗಾಗಿ ಕಳ್ಳರು ಶೋರೂಂ ಬಗ್ಗೆ ಸಾಕಷ್ಟು ಗೊತ್ತಿರುವ ಮಂದಿಯೇ ಆಗಿರಬೇಕು ಎಂಬ ಸಂಶಯ ವ್ಯಕ್ತವಾದ್ದು ಕದ್ರಿ ಪೋಲಿಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ















