ಬಂಟ್ವಾಳ :ಫೆ.8ರಂದು ಕುಲಾಲ್ಸ್ ಟ್ರೋಫಿ 2026 ಅಂಡರಮ್ ಕ್ರಿಕೆಟ್ ಪಂದ್ಯಾಟ.

Coastal Bulletin
ಬಂಟ್ವಾಳ :ಫೆ.8ರಂದು ಕುಲಾಲ್ಸ್ ಟ್ರೋಫಿ 2026 ಅಂಡರಮ್ ಕ್ರಿಕೆಟ್ ಪಂದ್ಯಾಟ.

ಬಿ.ಸಿ.ರೋಡ್ : ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘದ ವತಿಯಿಂದ ಕುಲಾಲ ಸೇವಾದಳ ಮತ್ತು ಮಹಿಳಾ ಘಟಕದ ಸಹಕಾರದೊಂದಿಗೆ ಮೇಲಂತಸ್ತಿನ ಕಟ್ಟಡ ನಿರ್ಮಾಣಕ್ಕೆ ನಿಧಿ ಸಂಗ್ರಹಕ್ಕಾಗಿ ದಕ್ಷಿಣ ಕನ್ನಡ, ಕಾಸರಗೋಡು ಮತ್ತು ಕೊಡಗು ಜಿಲ್ಲೆಯ ಆಯ್ದ ೩೨ ತಂಡಗಳಿಗೆ ‘ಕುಲಾಲ್ಸ್ ಟ್ರೋಫಿ - ೨೦೨೬’ ನಿಗದಿತ ಓವರಿನ ಅಂಡರ್ ಕ್ರಿಕೆಟ್ ಪಂದ್ಯಾಟ ಫೆಬ್ರವರಿ ೮ರಂದು ಬಂಟ್ವಾಳ ಭಂಡಾರಿಬೆಟ್ಟುವಿನಲ್ಲಿರುವ ಎಸ್‌ವಿಎಸ್ ಶಾಲಾ ಮೈದಾನದಲ್ಲಿ ನಡೆಯಲಿದೆ.

ಪಂದ್ಯಾಟದ ಉದ್ಯಾಟನೆಯನ್ನು ಮುಂಬಯಿ ಉದ್ಯಮಿ ದಿನಕರ ಬಂಜನ್ ಮತ್ತು ಸುಚಿತ್ರಾ ದಂಪತಿಗಳು ಮತ್ತು ಬೆಂಗಳೂರು ಪ್ರಧಾನ ಮಹಾಲೇಖಪಾಲರ ಕಚೇರಿಯ ಸೀನಿಯರ್ ಎಕೌಂಟೆಂಟ್ ಶ್ರೀಮತಿ ರಶ್ಮಿತಾ ಲೋಕೇಶ್ ನಡೆಸಲಿದ್ದಾರೆ. ಇದೇ ಸಂದರ್ಭ ದ.ಕ. ಜಿಲ್ಲಾ ಕುಲಾಲರ ಯಾನೆ ಮೂಲ್ಯರ ಮಾತೃ ಸಂಘದ ಅಧ್ಯಕ್ಷ ಮಯೂರ್ ಉಳ್ಳಾಲ್, ಮುಂಬಯಿ ಕರ್ನಾಟಕ ಮಲ್ಲ ಪತ್ರಿಕೆಯ ಉಪಸಂಪಾದಕ ಬಿ. ದಿನೇಶ್ ಕುಲಾಲ್ ಮತ್ತು ಕರ್ನಾಟಕ ರಾಜ್ಯ ಕುಲಾಲ ಕುಂಬಾರರ ಯುವವೇದಿಕೆ ಮಹಿಳಾ ಸಂಘಟನೆಗಳ ಒಕ್ಕೂಟದ

ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಲ| ಅನಿಲ್‌ದಾಸ್ ಭಾಗವಹಿಸಲಿದ್ದಾರೆ. ಸಭಾಧ್ಯಕ್ಷತೆಯನ್ನು ಬಂಟ್ವಾಳ ಕುಲಾಲ ಸಂಘದ ಅಧ್ಯಕ್ಷ ಬಿ. ರಮೇಶ್ ಸಾಲ್ಯಾನ್ ಸಂಚಯಗಿರಿ ವಹಿಸಲಿದ್ದಾರೆ. ಕ್ರಿಕೆಟ್ ಪಂದ್ಯಾಟದಲ್ಲಿ ವಿಜಯಿಯಾದ ಪ್ರಥಮ ಮತ್ತು ದ್ವಿತೀಯ ತಂಡಗಳಿಗೆ ನಗದು ಮತ್ತು ಕುಲಾಲ ಟ್ರೋಫಿ ಹಾಗೂ ಉತ್ತಮ ಬ್ಯಾಟ್ಸ್‌ಮೆನ್, ಉತ್ತಮ ಬೌಲರ್, ಉತ್ತಮ ಸವ್ಯಸಾಚಿ ಮತ್ತು ಉತ್ತಮ ಸಂಘಟನಾ ತಂಡಗಳಿಗೆ ಬಹುಮಾನ ನೀಡಲಾಗುವುದು ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಯಾದವ ಕುಲಾಲ್ ಅಗ್ರಬೈಲು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Comment