Coastal Bulletin

ಮುಂಬಯಿ : "ಕುಲಾಲ ಸಂಘ ಮುಂಬಯಿಯ ಮಹಿಳಾ ಸದಸ್ಯರು ಎಲ್ಲರೂ ಒಂದಾಗಿ ಸಂಘಟನೆಯನ್ನು ಬಲಪಡಿಸುತ್ತಿದ್ದಾರೆ ಎಂದು ನಾನು ಕೇಳಿದ್ದೇನೆ. ಅಧ್ಯಕ್ಷರು ಅದಕ್ಕೆ ಪೂರಕವಾಗಿ ಇದ್ದಾರೆ. ಎಲ್ಲರೂ ಸೇರಿದಲ್ಲಿ ಈ ಸಂಘವು ಇನ್ನೂ ಬಲಶಾಲಿಯಾಗುವುದರಲ್ಲಿ ಸಂದೇಹವಿಲ್ಲ. ನಮ್ಮ ಮಾತೃಭಾಷೆ ತುಳುವಿನ ಬಗ್ಗೆ ನನಗೂ ತುಂಬಾ ಅಭಿಮಾನವಿದೆ. ಅದರ ಉಳಿಯುವಿಗೆ ನಾವು ಆದಷ್ಟು ಪ್ರಯತ್ನವನ್ನು ಮಾಡಬೇಕು. ತುಳುಭಾಷೆಗೆ ಸರಕಾರದಿಂದ ಮಾನ್ಯತೆ ಸಿಗುವಂತಾಗಲಿ. ಈಗಾಗಲೇ ತುಳುನಾಡಿನಿಂದ ಡಾ.ವೀರೇಂದ್ರ ಹೆಗ್ಗಡೆಯವರು ರಾಜ್ಯಸಭೆಗೆ ಆಯ್ಕೆಯಾಗಿದ್ದು ಅದಕ್ಕೆ ಹೆಚ್ಚಿನ ಬಲ ತುಂಬಿಸುವ ಸಾಧ್ಯತೆಯಿದೆ. ಕಾರ್ಯಕ್ರಮದಲ್ಲಿ ಯಾರೂ ಮೂಲ್ಯರನ್ನು ಕಾಣುವುದಿಲ್ಲ ಎಲ್ಲರೂ ಅಮೂಲ್ಯರೇ ಆಗಿದ್ದಾರೆ. ಪ್ರೀತಿ, ವಿಶ್ವಾಸ ಎಂಬುದಿದ್ದರೆ ಅದು ಈ ಸಮಾಜದಲ್ಲಿ. ಒಂದು ರೀತಿಯಲ್ಲಿ ಮಣ್ಣಿನ ಗುಣದ ಸಂಬಂಧ ಈ ಸಮಾಜಕ್ಕಿದೆ" ಎಂದು ಒಡಿಯೂರು ಕ್ಷೇತ್ರದ ಶ್ರೀ ಗುರುದೇವಾನಂದ ಸ್ವಾಮೀಜಿಯವರು ನುಡಿದರು. ಕುಲಾಲ ಸಂಘ ಮುಂಬಯಿ ಇದರ ಮಹಿಳಾ ವಿಭಾಗದ ವತಿಯಿಂದ ಜುಲೈ 24ರಂದು ಆಟಿದ ಒಂಜಿ ದಿನ ಕಾರ್ಯಕ್ರಮವು ಕುರ್ಲಾ ಪೂರ್ವ ಬಂಟರ ಭವನದ ಎನೆಕ್ಸ್ ಹಾಲ್ ನಲ್ಲಿ ಕುಲಾಲ ಸಂಘ ಮುಂಬಯಿ ಅಧ್ಯಕ್ಷರಾದ ದೇವದಾಸ್ ಕುಲಾಲ್ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಕಾರ್ಯಕ್ರಮವನ್ನು ಪರಮ ಪೂಜ್ಯ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಅವರು ದೀಪ ಬೆಳಗಿಸಿ ಉದ್ಘಾಟಿಸಿ ಆಶೀರ್ವಚನ ಮಾಡಿದರು.

ಕುಲಾಲ ಸಂಘ ಮುಂಬಯಿಯ ಕುಲಾಲ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷರಾದ ಮಮತಾ ಎಸ್. ಗುಜರನ್ ಇವರ ನೇತೃತ್ವದಲ್ಲಿ ನಡೆದ ಈ ಸಮಾರಂಭಕ್ಕೆ ವಕ್ತಾರರಾಗಿ ಉಡುಪಿಯ ನ್ಯಾ. ಸಹನಾ ಕುಂದರ್ ಸೂಡ, ಇವರು ಆಗಮಿಸಿದ್ದರು. 

ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕುಲಾಲ ಸಂಘ ಮುಂಬಯಿ ಅಧ್ಯಕ್ಷರಾದ ದೇವದಾಸ್ ಕುಲಾಲ್ ಅವರು ಸಂಘದ ಸೇವಾ ಕಾರ್ಯಗಳಲ್ಲಿ ಮಹಿಳಾ ಸದಸ್ಯರು ಅಪಾರವಾದ ಕೊಡುಗೆಯನ್ನು ನೀಡಿದ್ದಾರೆ . ಮಹಿಳೆಯರ ಒಗ್ಗಟ್ಟಿಗಾಗಿ ಮತ್ತು ಅವರ ಪ್ರತಿಭೆ ಅನಾವರಣಕ್ಕೆ ಮಹಿಳಾ ವಿಭಾಗ ಉತ್ತಮ ವೇದಿಕೆಯನ್ನು ನಿರ್ಮಾಣ ಮಾಡಿದೆ. ಸಮಾಜ ಬಾಂಧವರ ಸಹಕಾರದಿಂದ ಸಂಘದ ಎಲ್ಲಾ ಯೋಜನೆಗಳು ಯಶಸ್ವಿಯಾಗಿ ನಡೆಯುತ್ತಿದೆ ದಾನಿಗಳು ಸಮಾಜಲ್ಲಿ ಹೆಚ್ಚೆಚ್ಚು ಬೆಳೆಯುತ್ತಿದ್ದಾರೆ ಇದರಿಂದ ಸಂಘದ ಎಲ್ಲಾ ಕೆಲಸಗಳು ಸುಲಲಿತವಾಗಿ ನಡೆಯಲು ಸಾಧ್ಯವಾಗಿದೆ .ಯುವ ಸಮುದಾಯ ಸಂಘದ ಎಲ್ಲಾ ಚಟುವಟಿಕೆಗಳಲ್ಲಿ ಸಕ್ರಿಯರಾಗಬೇಕು ಎಂದು ನುಡಿದರು

ವೇದಿಕೆಯಲ್ಲಿ ಕುಲಾಲ ಮಹಿಳಾ ವಿಭಾಗದ ಉಪ ಕಾರ್ಯಾಧ್ಯಕ್ಷೆ ಸುಚಿತ ಡಿ. ಬಂಜನ್, ಕಾರ್ಯದರ್ಶಿ ಮಾಲತಿ ಜೆ. ಅಂಚನ್, ಕೋಶಾಧಿಕಾರಿ ಲತಾ ಎಸ್. ಮೂಲ್ಯ ಹಾಗೂ ವಿವಿಧ ಸ್ಥಳೀಯ ಸಮಿತಿಯ ಮಹಿಳಾ ಕಾರ್ಯಾಧ್ಯಕ್ಷೆ ರಾದ ಉಮಾ ಎಸ್ ಸಾಲ್ಯಾನ್ . ಪ್ರೇಮ ಎಲ್ ಮೂಲ್ಯ .ಮಮತಾ ಜಿ ಸಾಲಿಯಾನ್ .ಆಶಾಲತಾ ಮೂಲ್ಯ. ಗೀತಾ ಬಂಗೇರ ಉಪಸ್ತರಿದ್ದರು

ಈ ಸಂದರ್ಭದಲ್ಲಿ ಸಂಘದ ಹಿರಿಯ ಕಾರ್ಯಕರ್ತೆ ಜಯಂತಿ ವಿಶ್ವನಾಥ್ ಬಂಗೇರ (ಕಲಿನ)

ರಜನಿ ಗಂಗಾಧರ್ ಮೂಲ್ಯ (ಮುಲುಂದು) ರವರನ್ನು ಸನ್ಮಾನಿಸಲಾಯಿತು ಹಾಗೂ ದಾನಿಗಳನ್ನು ಗೌರವಿಸಲಾಯಿತು. ಅಲ್ಲದೆ ಸಂಘದ ಸ್ಥಳೀಯ ಸಮಿತಿಗಳ ಸದಸ್ಯರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು. *ನೃತ್ಯ *ಆಟಿ ಕಳಂಜೆ* ರೂಪಕ .ಮತ್ತು *ನೀರೆಲ್* ಕಿರು ನಾಟಕ ನೃತ್ಯ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಯಶಸ್ವಿಗೆ ಮಹಿಳಾ ವಿಭಾಗದ ಜೊತೆ ಕಾರ್ಯದರ್ಶಿ ಕವಿತಾ ಸಿ ಹಂಡ. ಜೊತೆ ಕೋಶಾದಿಕಾರಿ ರೇಣುಕಾ ಸಾಲ್ಯಾನ್. ಸಂಘದ ಉಪಾಧ್ಯಕ್ಷರಾದ ರಘು ಎ. ಮೂಲ್ಯ ಪಾದಬೆಟ್ಟು. ಗೌರವ ಪ್ರಧಾನ ಕಾರ್ಯದರ್ಶಿ ಕರುಣಾಕರ್ ಬಿ. ಸಾಲಿಯಾನ್, ಗೌರವ ಕೋಶಾಧಿಕಾರಿ ಜಯ ಎಸ್. ಅಂಚನ್, . ಜ್ಯೋತಿ ಕಾರ್ಪೊರೇಟಿವ್ ಕ್ರೆಡಿಟ್ ಸೊಸೈಟಿಯ ಕಾರ್ಯ ಧ್ಯಕ್ಷ ಗಿರೀಶ್ ಸಾಲ್ಯಾನ್. ಕಾರ್ಯದರ್ಶಿ ಶೇಖರ್ ಮೂಲ್ಯ ಪಿ . ಅಮೂಲ್ಯ ಪತ್ರಿಕೆಯ ಸಂಪಾದಕ ಶಂಕರ್ ವೈ ಮೂಲ್ಯ .ಹಾಗೂ ಸ್ಥಳೀಯ ಸಮಿತಿಗಳ ಮಹಿಳಾ ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

ಕಾರ್ಯಕ್ರಮವನ್ನು ಮಹಿಳಾ ವಿಭಾಗದ ಕಾರ್ಯದರ್ಶಿ ಮಾಲತಿ ಅಂಚನ್ ನಿರೂಪಿಸಿದರು ಸ್ವಾಮೀಜಿಯ ಬಗ್ಗೆ ಸುಚಿತ ಬಂಜನ್ ಸನ್ಮಾನಿತರ ಪರಿಚಯವನ್ನು ಹರಿಣಾಕ್ಷಿ ಎ ಸಾಲಿಯಾನ್, ರಸಿಕ ಸಿ ಮೂಲ್ಯ ವಾಚಿಸಿದರು ಆಟಿ ತಿಂಗಳಿನ ಬಗ್ಗೆ ಜಯಂತಿ ಉಮೇಶ್ ಬಂಗೇರ ತಿಳಿಸಿದರು ಅತಿಥಿಗಳನ್ನು ಕುಶಲ ಜಿ ಬಂಗೇರ ಪರಿಚಯಿಸಿದರು

Leave a Comment