ಬಂಟ್ವಾಳ:ಇಲ್ಲಿನ ಮೊಡಂಕಾಪು ರೋಟರಿ ಕ್ಲಬ್ ನ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವು ಶನಿವಾರ ಕೈಕಂಬದ ಸೂರ್ಯವಂಶ ಕಟ್ಟಡದ ಕೆ ಎಲ್ ರಾವ್ ಮೆಮೋರಿಯಲ್ ಹಾಲ್ ನಲ್ಲಿ ನಡೆಯಿತು.
ಮುಖ್ಯ ಅತಿಥಿಯಾಗಿ ಆಗಮಿಸಿದ ರೋಟರಿ ಜಿಲ್ಲಾ ಸಲಹೆಗಾರರಾದ ರಂಗನಾಥ್ ಭಟ್ ಪದಗ್ರಹಣ ಕಾರ್ಯಕ್ರಮವನ್ನು ನಡೆಸಿಕೊಟ್ಟು ಶುಭ ಹಾರೈಸಿದರು.
ನೂತನ ಅಧ್ಯಕ್ಷರಾದ ಡಾ ಗೋವರ್ಧನ್ ರಾವ್ ರವರು ಪ್ರಸ್ತುತ ವರ್ಷದಲ್ಲಿ ಸೇವಾ ಯೋಜನೆಗಳನ್ನು ಕಾರ್ಯಗತಗೊಳಿಸಲು ಸದಸ್ಯರೆಲ್ಲರ ಸಹಕಾರವನ್ನು ಕೋರಿದರು.
ಎರಡನೇ ವರ್ಷವು ಮುಂದುವರಿದ ಕಾರ್ಯದರ್ಶಿ ಪಿ ಎ ರಹೀಮ್ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು ನಿಕಟಪೂರ್ವ ಅಧ್ಯಕ್ಷರಾದ ಇಲ್ಲ್ಯಾಸ್ ಸಂಕ್ಟಿಸ್ ಮಾತನಾಡಿ ಗತ ವರ್ಷದಲ್ಲಿ ಸಹಕರಿಸಿದ ಎಲ್ಲರಿಗೂ ಧನ್ಯವಾದ ಅರ್ಪಿಸಿ,
ನೂತನ ಸಮಿತಿಗೆ ಶುಭ ಹಾರೈಸಿದರು.
ವೇದಿಕೆಯಲ್ಲಿ ಕ್ಲಬ್ ಸಲಹೆಗಾರರಾದ ಸಂಜೀವ ಪೂಜಾರಿ, ರೋ.ಕೆ ಸತೀಶ್ ಕುಮಾರ್,ಉಮಾ ಗೋವರ್ಧನ್ ರಾವ್,ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ರೋಟರಿಯ ವಿವಿಧ ಗಣ್ಯರನ್ನು ನೂತನ ಅಧ್ಯಕ್ಷರಾದ ಡಾ ಗೋವರ್ಧನ್ ರಾವ್ ಶಾಲು ಹಾಕಿ ಗೌರವಿಸಿದರು ಹಾಗೂ ಮಾಧ್ಯಮ ಕ್ಷೇತ್ರದ ಸೇವೆಯನ್ನು ಗುರುತಿಸಿ ಪತ್ರಕರ್ತ ಸಂತೋಷ್ ಕುಲಾಲ್ ನೆತ್ತರಕೆರೆ ಯವರನ್ನು ಸನ್ಮಾನಿಸಲಾಯಿತು.
ಇಲ್ಲ್ಯಾಸ್ ಸಂಕ್ಟಿಸ್ ಸ್ವಾಗತಿಸಿ, ಕಾರ್ಯದರ್ಶಿ ಪಿ ಎ ರಹೀಮ್ ವಂದಿಸಿ, ಮುಸ್ತಫಾ ಗೊಳ್ತಾಮಜಲು ಕಾರ್ಯಕ್ರಮ ನಿರೂಪಿಸಿದರು.
















