ಬಂಟ್ವಾಳ: ಬೂತ್ ಲೆವೆಲ್ ಆಫೀಸರ್ (BLO)ಕೆಲಸದಿಂದ ಮುಕ್ತ ಗೊಳಿಸಿ. ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಸಂಘದ ಮನವಿ.

Coastal Bulletin
ಬಂಟ್ವಾಳ: ಬೂತ್ ಲೆವೆಲ್ ಆಫೀಸರ್ (BLO)ಕೆಲಸದಿಂದ ಮುಕ್ತ ಗೊಳಿಸಿ. ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಸಂಘದ ಮನವಿ.

ಬಂಟ್ವಾಳ :ಅಂಗನವಾಡಿ ಕಾರ್ಯಕರ್ತೆಯರನ್ನು ಬೂತ್ ಲೆವೆಲ್ ಆಫೀಸರ್ (BLO)ಕೆಲಸದಿಂದ ಮುಕ್ತ ಗೊಳಿಸಬೇಕೆಂದು ಬಂಟ್ವಾಳ ತಾಲೂಕಿನ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಸಂಘವು ತಹಸೀಲ್ದಾ‌ರ್ ಹಾಗೂ ಚುನಾವಣಾ ಆಯೋಗದ ಅಧಿಕಾರಿಗಳನ್ನು ಒತ್ತಾಯಿಸಿ ಮನವಿ ನೀಡಿದ್ದಾರೆ.

ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಸಂಘದ ತಾಲೂಕು ಅಧ್ಯಕ್ಷೆ ವಿಜಯವಾಣಿ ಶೆಟ್ಟಿ ಜೂ. 2ರಂದು ಬುಧವಾರ ಸಂಜೆ ಬಿ ಸಿ ರೋಡ್ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯದ ಬಗ್ಗೆ ಮಾತನಾಡಿ, ನಮಗೆ ತುಂಬಾ ಕೆಲಸದ ಒತ್ತಡವಿದ್ದು ಬೇರೆ ಇಲಾಖೆಯ ಕೆಲಸ ಮಾಡಲು ಕಷ್ಟ ಸಾಧ್ಯ ವಾಗಿದೆ , ಇದರೊಂದಿಗೆ ನಮ್ಮ ಗಮನಕ್ಕೆ ಬಾರದೆ ಬಿಎಲ್ ಒ ಗಳನ್ನಾಗಿಸುತ್ತಿದ್ದಾರೆ. ಆದರೆ ಚುನಾವನಾ ಆಯೋಗದ ಸೂಚನೆಯಂತೆ ಸಿ ದರ್ಜೆ ನೌಕರರನ್ನು ಬಿ.ಎಲ್.ಒಗಳನ್ನಾಗಿ ನೇಮಿಸಬೇಕು ಎಂದಿದೆ. ಆದರೆ ನಾವು ಗೌರವಧನ ಪಡೆಯುವವರೇ ಹೊರತು ಸರಕಾರಿ ನೌಕರರಲ್ಲ. ಸಿ ದರ್ಜೆಯವರೂ ಅಲ್ಲ. ಆದ್ದರಿಂದ ಬಿ.ಎಲ್.ಒ. ಕೆಲಸದಿಂದ ಎಲ್ಲ ಅಂಗನವಾಡಿ ಕಾರ್ಯಕರ್ತೆಯರನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು. 

ಸಿ ದರ್ಜೆ ನೌಕರರಿಗೆ

ಒಂದು ನ್ಯಾಯ, ನಮಗೆ ಒಂದು ನ್ಯಾಯ ಬೇಡ. ನಮ್ಮನ್ನು ಸಿ ದರ್ಜೆ ನೌಕರರು ಎಂದು ಪರಿಗಣಿಸುವಿರಾ ಎಂದು ಪ್ರಶ್ನಿಸಿದ ಅವರು, ಈಗಾಗಲೇ ನಮಗೆ ಪೋಷಣ್ ಟ್ರ್ಯಾಕರ್ ನಲ್ಲಿ ಕೆಲದ ಒತ್ತಡವಿದೆ. ಬೇರೆ ಇಲಾಖೆ ಕೆಲಸ ಮಾಡಲು ಕಷ್ಟವಾಗುತ್ತದೆ ಎಂದರು.ಪ್ರತಿ ತಿಂಗಳೂ ಕೆವೈಸಿ ಪಡೆದುಕೊಳ್ಳುವ ಕಾರ್ಯದ ವೇಳೆ ಮೊಬೈಲ್ ನಲ್ಲಿ ಅಪ್ಲೋಡ್ ಮಾಡುವ ಸಂದರ್ಭವೂ ಸಮಸ್ಯೆಗಳು ಇರುತ್ತವೆ. ಅಂಗನವಾಡಿ ಕಾರ್ಯಕರ್ತೆಯರಿಗೆ ತಿಂಗಳ ಗೌರವಧನವೇ ಕಡಿಮೆ. ಡೆಪ್ಯೂಟೇಶನ್ ಗೆ ಹೋದರೆ ಕೇವಲ 50 ರೂ ತಿಂಗಳಿಗೆ ನೀಡುತ್ತಾರೆ. ಇಂಥ ಸಮಸ್ಯೆಗಳನ್ನೆಲ್ಲಾ ಹೊತ್ತುಕೊಂಡು, ಬಿ.ಎಲ್.ಒ. ಹೆಚ್ಚುವರಿ ಕೆಲಸ ಮಾಡುವುದು ಕಷ್ಟ ಎಂದು ಸಮಸ್ಯೆಗಳ ಕುರಿತು ವಿಜಯವಾಣಿ ಶೆಟ್ಟಿ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಪದಾಧಿಕಾರಿಗಳಾದ ರೇಣುಕಾ, ಗುಲಾಬಿ, ಜಯಶ್ರೀ, ಯಮುನಾ, ಶ್ರೀವಾಣಿ ಉಪಸ್ಥಿತರಿದ್ದರು.

Leave a Comment