ಕುಕ್ಕೆ ಸುಬ್ರಹ್ಮಣ್ಯ :ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ಸಮೀಪ ಹೊಸಳಿಕೆ ಕುಸುಮಾಧರ ಎಂಬವರ ಮನೆಯ ಬರೆ ಜರಿದು ಇಬ್ಬರು ಮಕ್ಕಳು ಮಣ್ಣಿನಡಿಗೆ ಸಿಲುಕಿ ಮೃತ ಪಟ್ಟಿದ್ದಾರೆ ಎಂಬ ಆಘಾತಕಾರಿ ಸುದ್ದಿ ವರದಿಯಾಗಿದೆ.
ಇಂದು ಸುರಿದ ಭಾರೀ ಪ್ರಮಾಣದ ಮಳೆಗೆ ಕುಮಾರಧಾರ ನದಿ ಉಕ್ಕಿ ಹರಿಯುತ್ತಿದ್ದು ಸ್ಥಳೀಯರು ಬಹಳ
ಆತಂಕಕ್ಕೀಡಾಗಿದ್ದಾರೆ.ಮಣ್ಣಿನಡಿಗೆ ಸಿಲುಕಿರುವ ಮಕ್ಕಳನ್ನು ಹೊರತೆಗೆಯಲು ಸ್ಥಳೀಯರು ಹರ ಸಾಹಸ ಪಡುತ್ತಿದ್ದಾರೆ ಎಂಬುದು ಇದೀಗ ಲಭ್ಯವಿರುವ ಮಾಹಿತಿ.
















