ಬಂಟ್ವಾಳ: ಜಿಲ್ಲೆಯ ಹಿಂದೂ ಮುಖಂಡ, ನಾರಾಯಣ ಗುರು ವಿಚಾರ ವೇದಿಕೆ ರಾಜ್ಯ ಘಟಕ ಅಧ್ಯಕ್ಷ ಸತ್ಯಜಿತ್ ಸುರತ್ಕಲ್ ಇವರಿಗೆ ನೀಡಿದ್ದ ಭದ್ರತಾ ಅಂಗರಕ್ಷಕ (ಗನ್ ಮೆನ್ ) ಸೌಲಭ್ಯವನ್ನು ಸರ್ಕಾರ ವಾಪಾಸು ಪಡೆದಿರುವುದು ಖಂಡನೀಯ. ರಾಜ್ಯಾದ್ಯಂತ ಸಂಘಟನೆ ಬಲಪಡಿಸುವ ನಿಟ್ಟಿನಲ್ಲಿ ಸಂಚರಿಸುತ್ತಿರುವ ಸತ್ಯಜಿತ್ ಸುರತ್ಕಲ್ ಇವರಿಗೆ ಕಳೆದ 16ವರ್ಷಗಳಿಂದ ಸರ್ಕಾರ ನೀಡಿದ್ದ ಅಂಗರಕ್ಷಕ (ಗನ್ ಮೆನ್) ಸೌಲಭ್ಯ ಏಕಾಯೇಕಿ ವಾಪಾಸು ಪಡೆದಿರುವುದು ಸರಿಯಲ್ಲ. ಈ ಆದೇಶ ಕೂಡಲೇ ರದ್ದುಗೊಳಿಸಬೇಕು ಎಂದು ಬಂಟ್ವಾಳ ನಾರಾಯಣ ಗುರು ವಿಚಾರ ವೇದಿಕೆ ಅಧ್ಯಕ್ಷ ನವೀನ್ ಕೋಟ್ಯಾನ್ ಆಗ್ರಹಿಸಿದ್ದಾರೆ.
ಜಿಲ್ಲೆಯಲ್ಲಿ ಕೆಲವೊಂದು ಮೂಲಭೂತವಾದಿಗಳಿಂದ ನನಗೆ ಜೀವ ಬೆದರಿಕೆ ಹಿನ್ನೆಲೆಯಲ್ಲಿ ನೀಡಿದ್ದ ಅಂಗರಕ್ಷಕ (ಗನ್ ಮೆನ್)
ಸೌಲಭ್ಯ ಮುಂದುವರಿಸಬೇಕು ಎಂದು ಸತ್ಯಜಿತ್ ಅವರು ಈಗಾಗಲೇ ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಿರುವುದಾಗಿ ಅವರು ತಿಳಿಸಿದ್ದಾರೆ.














