ಬಂಟ್ವಾಳ :ತಾಲೂಕಿನ ತುಂಬೆ ಗ್ರಾಮ ಪಂಚಾಯತ್ ನ ನೂತನ ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಧ್ಯಕ್ಷರಾಗಿ ಶ್ರೀಮತಿ ಜಯಂತಿ ಕೇಶವ ಹಾಗೂ ಉಪಾಧ್ಯಕ್ಷರಾಗಿ ಶ್ರಿ ಗಣೇಶ ಸಾಲಿಯಾನ್ ರವರು ಆಯ್ಕೆಯಾಗಿರುತ್ತಾರೆ.
ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ ಮಾಜಿ ಅಧ್ಯಕ್ಷರಾದ ಮಹಮ್ಮದ್ ವಳವೂರು, ನಿಕಟಪೂರ್ವ ಅಧ್ಯಕ್ಷರಾದ ಪ್ರವೀಣ್ ಬಿ ತುಂಬೆ, ಹಿರಿಯರಾದ ಮೋನಪ್ಪ ಮಜಿ, ಪ್ರಮುಖರಾದ ಇಮ್ತಿಯಾಜ್, ಅಲ್ಪ, ವಲಯ ಕಾಂಗ್ರೆಸ್ ಅಧ್ಯಕ್ಷರಾದ
ಜಗದೀಶ್ ಗಟ್ಟಿ, ಪಂಚಾಯತ್ ಸದಸ್ಯರಾದ ಇಬ್ರಾಹಿಂ ವಳವೂರು, ಶಶಿಕಲಾ ಮನೋಹರಾ ಕೊಟ್ಟಾರಿ, ಜಯಂತಿ ನಾಗೇಶ, ಹಾಗೂ ಮನೋಹರ ಕೊಟ್ಟಾರಿ, ಕೇಶವ ದೋಟ, ಅಶೋಕ ಕೊಂಡಾಣ, ಸಂಜೀತ್, ರಂಜಿತ್ , ಅಝೀಝ್ ವಳವೂರು, ಲತೀಫ್ ಅರಫ ಉಪಸ್ಥಿತರಿದ್ದರು.















