ಬಂಟ್ವಾಳ :ಶ್ರೀ ಸಾಯಿ ಕಿಡ್ಸ್ ಝೋನ್ ವಿದ್ಯಾಸಂಸ್ಥೆ ಬಿ ಸಿ ರೋಡ್ ಇದರ ವಾರ್ಷಿಕೋತ್ಸವವು 25ನೇ ಶನಿವಾರ ಸಂಜೆ ಶಾಲಾ ವಠಾರದಲ್ಲಿ ನಡೆಯಿತು.
ಎಸ್ ವಿಜಯ ಪ್ರಸಾದ್ ಡೆಪ್ಯೂಟಿ ಸೂಪರಿಡೆಂಟೆಂಟ್ ಆಫ್ ಪೊಲೀಸ್ ಬಂಟ್ವಾಳ ಇವರು ದೀಪ ಬೆಳಗಿಸಿ ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಡಾ/ ಕ್ಯಾಪ್ಟನ್ ಕೆ ಜಿ ಶೆಣೈ ಮಕ್ಕಳ ತಜ್ಞರು ಪೃಥ್ವಿ ನರ್ಸಿಂಗ್ ಹೋಂ ಬಿ ಸಿ ರೋಡ್, ಮಾಸ್ಟರ್ ಭವಿಶ್ ಶಾಲಾ ಹಳೆe ವಿದ್ಯಾರ್ಥಿ, ಭುವನೇಂದ್ರ ಇಂದ್ರ ಪಾಣೆಮಂಗಳೂರು, ಜ್ಞಾನೇಶ ರಾವ್ ಅಧ್ಯಕ್ಷರು ಶಾಲಾ ರಕ್ಷಕ ಶಿಕ್ಷಕ ಸಂಘ,ರಾಮಚಂದ್ರ ಕರ್ಕೇರ ಅಧ್ಯಕ್ಷರು ಶಾಲಾ ಆಡಳಿತ ಮಂಡಳಿ, ಶಾಲಾ ಆಡಳಿತ ಮಂಡಳಿಯ ಸದಸ್ಯರಾದ ರಾಜೇಶ್ ಅಮೀನ್, ಶ್ರೀನಿವಾಸ್, ಆರತಿ ಅಮೀನ್,ಭಾಗವಹಿಸಿದ್ದರು.
ಮುಖ್ಯೋಪಾಧ್ಯಾಯಿನಿ
ದೀಕ್ಷಿತ ವರದಿ ವಾಚಿಸಿದರು, ಸಂಸ್ಥೆಗಳ ಸಂಚಾಲಕರಾದ ಐತಪ್ಪ ಪೂಜಾರಿ ಸ್ವಾಗತಿಸಿ ಅಶ್ರಿತ್ ಅಮೀನ್ ಕಾರ್ಯ ಕ್ರಮ ನಿರೂಪಿಸಿದರು , ಶಿಕ್ಷಕ /ಶಿಕ್ಷಕಿಯರಾದ ಅರುಣ್ ಪ್ರಸಾದ್, ರಂಜಿನಿ , ಗೀತಾ, ಪುಷ್ಪಲತ, ಚೈತ್ರ, ಕುಮಾರಿ ಯಕ್ಷಿಣಿ, ಶಿಕ್ಷಕೇತರ ಸಿಬ್ಬಂದಿ ಗಳು, ಶಿಕ್ಷಕ ತರಬೇತಿ ಕೇಂದ್ರದ ವಿದ್ಯಾರ್ಥಿಗಳು, ಪೋಷಕರು ಸಹಕರಿಸಿದರು,
ಬಳಿಕ ವಿದ್ಯಾರ್ಥಿಗಳಿಂದ,ಪೋಷಕರಿಂದ, ಮನರಂಜನಾ ಕಾರ್ಯಕ್ರಮ ನಡೆಯಿತು. ರಾಮಾಯಣದ ನೃತ್ಯ ರೂಪಕ ಮತ್ತು ಬೇರೆ ಬೇರೆ ರಾಜ್ಯಗಳ ನೃತ್ಯದೊಂದಿಗೆ ಶಾರದೆ ಯ ವೈಭವದ ಮೆರವಣಿಗೆ ಎಲ್ಲಾ ವಿದ್ಯಾಭಿಮಾನಿಗಳ ಪ್ರಶಂಸೆಗೆ ಪಾತ್ರವಾಯಿತು,














