Coastal Bulletin

ಬೆಂಗಳೂರು: ಆಟೋ ಬಾಡಿಗೆ ನಂಬಿ ಜೀವನ ಸಾಗಿಸುತ್ತಿದ್ದ ಅಟೋ ಚಾಲಕರಿಗೆ ಕೊರೊನಾ ಮಹಾ ಕಂಟಕವಾಗಿ ಪರಿಣಮಿಸಿತ್ತು. ಲಾಕ್​ಡೌನ್ ಸಮಯದಲ್ಲಿ ಆಟೋಗಳು ಓಡಾಡದೇ ಮನೆಯಲ್ಲೇ ನಿಂತಿದ್ದವು. ಲಾಕ್​ಡೌನ್​ನ ತೆರವು ನಂತರ ನಿಟ್ಟಿಸಿರು ಬಿಟ್ಟಿದ್ದ ಆಟೋ ಚಾಲಕರಿಗೆ ಇದೀಗ ಮತ್ತೊಂದು ಶಾಕ್ ಎದುರಾಗಿದೆ.ಆಟೋ ಎಲ್​ಪಿಜಿ ಗ್ಯಾಸ್ ದರ ದಿಡೀರ್ ಏರಿಕೆಯಾಗಿದ್ದು, ಆಟೋ ಚಾಲಕರಿಗೆ ಮತ್ತೆ ಬರೆ ಬಿದ್ದಿದೆ.

ಇಂದಿನಿಂದ 1 ಲೀಟರ್​ಗೆ ಗ್ಯಾಸ್ ಗೆ 5 ರೂಪಾಯಿ 41 ಪೈಸೆ ರೂ.ಹೆಚ್ಚಾಗಿದೆ.50 ರೂಪಾಯಿ 47 ಪೈಸೆ ಇದ್ದ ಆಟೋ ಗ್ಯಾಸ್ ಬೆಲೆ,55 ರೂಪಾಯಿ 88 ಪೈಸೆ ಗೆ ಏರಿಕೆಯಾಗಿದೆ.

ಗ್ಯಾಸ್ ಬರ್ತಿ ಮಾಡಲು ಬಂಕ್ ಗೆ ತೆರಳಿದ ಚಾಲಕರು ದರ

ಏರಿಕೆ ಸುದ್ದಿ ಕೇಳಿ ಅಸಮಧಾನ ವ್ಯಕ್ತಪಡಿಸಿದ್ದಾರ.'ಈಗಾಗಲೇ ನಮ್ಮ ಲೈಫ್ ಬರ್ಬಾದ್ ಆಗಿ ಹೋಗಿದೆ.ಹೀಗೆ ದರ ಏರಿಕೆ ಆಗ್ತಾನೇ ಹೋದ್ರೆ ಆಟೋ ಚಾಲಕರು ಬದುಕುವುದಾದರೂ ಹೇಗೆ? ಮನೆ ಬಾಡಿಗೆ, ಮಕ್ಕಳ ಸ್ಕೂಲ್ ಫೀಸ್ ಕಟ್ಟಿ ಜೀವನ ಮಾಡೋದು ಹೇಗೆ? ಎಂದು ಪ್ರಶ್ನಿಸಿದ್ದಾರೆ.

Leave a Comment