Coastal Bulletin

ಭಾರತದ ಮೊಟ್ಟ ಮೊದಲ ಬಾರಿಗೆ ಕೊರೋನಾ ಸೋಂಕಿಗೆ ಒಳಗಾಗಿದ್ದ ಮೆಡಿಕಲ್​ ವಿದ್ಯಾರ್ಥಿನಿಗೆ ಇದೀಗ ಮತ್ತೊಮ್ಮೆ ಕೊರೋನಾ ಸೋಂಕು ದೃಢಪಟ್ಟಿದೆ ಎಂದು ಕೇರಳದ ತ್ರಿಶೂರ್​​ನ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಆಕೆಯ ಆರ್​ ಟಿ ಪಿ ಸಿ ಆರ್​ ವರದಿ ಪಾಸಿಟಿವ್​ ಬಂದಿದ್ದರೆ ಆಂಟಿಜನ್​ ವರದಿಯಲ್ಲಿ ನೆಗೆಟಿವ್​ ಎಂದು ಬಂದಿದೆ. ಈಕೆ ಲಕ್ಷಣ ರಹಿತ ಕೊರೋನಾ ಸೋಂಕನ್ನ ಹೊಂದಿದ್ದಾಳೆ ಎಂದು ತ್ರಿಶೂರ್​ನ ಡಿಎಂಓ ಡಾ. ಕೆ. ಜೆ. ರೀನಾ ಮಾಹಿತಿ ನೀಡಿದರು.

ವಿದ್ಯಾಭ್ಯಾಸಕ್ಕಾಗಿ ಈಕೆ ದೆಹಲಿಗೆ ಪ್ರಯಾಣ ಬೆಳೆಸಬೇಕಾದ ಹಿನ್ನೆಲೆ ಕೊರೋನಾ ಪರೀಕ್ಷೆಗೆ ಒಳಗಾಗಿದ್ದಳು. ಆದರೆ ಆರ್​ ಟಿ ಪಿ ಸಿ ಆರ್​ ಪರೀಕ್ಷೆಯಲ್ಲಿ ಈಕೆಗೆ ಸೋಂಕಿರೋದು ದೃಢವಾಗಿದೆ. ಪ್ರಸ್ತುತ ಸೋಂಕಿತ

ವಿದ್ಯಾರ್ಥಿನಿ ಮನೆಯಲ್ಲೇ ಇದ್ದು ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದಾಳೆ. ಕಳೆದ ವರ್ಷ ಜನವರಿ 30ರಂದು ವುಹಾನ್​​ ವಿಶ್ವವಿದ್ಯಾಲಯದಲ್ಲಿ ಮೂರನೇ ವರ್ಷದ ಮೆಡಿಕಲ್​ ವಿದ್ಯಾರ್ಥಿನಿಯಾಗಿದ್ದ ಈಕೆ ಕೊರೋನಾ ಸೋಂಕಿಗೆ ಒಳಗಾಗಿದ್ದಳು. ಸೆಮಿಸ್ಟರ್​​ ರಜೆಯ ಹಿನ್ನೆಲೆ ಭಾರತಕ್ಕೆ ಮರಳಿದ್ದ ಈಕೆ ದೇಶದ ಮೊದಲ ಕೊರೋನಾ ಸೋಂಕಿತೆ ಎನಿಸಿಕೊಂಡಿದ್ದಳು.

ತ್ರಿಶೂರ್​ ಮೆಡಿಕಲ್​ ಕಾಲೇಜು ಆಸ್ಪತ್ರೆಯಲ್ಲಿ ವಾರಗಟ್ಟಲೇ ಚಿಕಿತ್ಸೆ ಪಡೆದ ಬಳಿಕ ಈಕೆ ಸೋಂಕಿನಿಂದ ಗುಣಮುಖಳಾಗಿದ್ದಳು. ಕಳೆದ ವರ್ಷ ಫೆಬ್ರವರಿ 20ರಂದು ಈಕೆಯನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿತ್ತು.

Leave a Comment