ಕೊರೊನಾ ಲಾಕ್ಡೌನ್ ನಿಂದ ಸಂಕಷ್ಟಕ್ಕೆ ಸಿಲುಕಿರುವ ಜನ ಸಾಮಾನ್ಯರಿಗೆ ಬ್ಯಾಂಕ್ಗಳು ಶಾಕ್ ನೀಡಿವೆ.ಇಂದಿನಿಂದ ಎಟಿಎಂ ವಹಿವಾಟು ದುಬಾರಿಯಾಗಿದೆ.
ವಹಿವಾಟು ದರ ಏರಿಕೆಗೆ ಈಗಾಗಲೇ ಆರ್ಬಿಐ ಗ್ರೀನ್ ಸಿಗ್ನಲ್ ನೀಡಿದೆ. ಹಣಕಾಸು ವಹಿವಾಟು ವಿನಿಮಯ ಶುಲ್ಕವನ್ನು 15 ರೂಪಾಯಿಯಿಂದ 17 ರೂಪಾಯಿಗೆ ಏರಿಕೆ ಮಾಡಲಾಗಿದೆ. ಹಣಕಾಸು ವಹಿವಾಟುಯೇತರ ಶುಲ್ಕವನ್ನ 5 ರೂ ನಿಂದ 6ರೂ ಗೆ ಹೆಚ್ಚಳಮಾಡಲಾಗಿದೆ.ಗ್ರಾಹಕರು
ಕ್ರೆಡಿಟ್/ಡೆಬಿಟ್ ಕಾರ್ಡ್ ಬಳಸಿದಾಗಲೆಲ್ಲಾ ಗ್ರಾಹಕನ ಬ್ಯಾಂಕ್ ಖಾತೆಯಿಂದ ಹಣ ಕಡಿತವಾಗಲಿದೆ. ಬ್ಯಾಂಕ್ಗಳು ಎಟಿಎಂ ಆಪರೇಟರ್ಗಳಿಗೆ ವಿನಿಮಯ ಶುಲ್ಕವನ್ನು ನೀಡಬೇಕಾಗುತ್ತದೆ. ಬ್ಯಾಂಕ್ಗಳು ಎಟಿಎಂ ನಿಯೋಜನೆ ಹಾಗೂ ನಿರ್ವಹಣೆ ವೆಚ್ಚ ಹೆಚ್ಚಾಗುತ್ತಿರುವ ದೃಷ್ಟಿಯಿಂದಾಗಿ ವಿನಿಮಯ ಶುಲ್ಕ ಅನಿವಾರ್ಯ ಎಂದು ಹೇಳಲಾಗುತ್ತಿದೆ.















