Coastal Bulletin

ಅಂತಾರಾಷ್ಟ್ರೀಯ ಮಹಿಳಾ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸುವ ಮೂಲಕ  ಭಾರತದ ಮಹಿಳಾ ತಂಡದ ನಾಯಕಿ ಮಿಥಾಲಿ ರಾಜ್ ಹೊಸ ದಾಖಲೆ ಬರೆದಿದ್ದಾರೆ.

ಇಂಗ್ಲೆಂಡ್ ವಿರುದ್ಧ ನಡೆದ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ಮಾಜಿ ಆಟಗಾರ್ತಿ ಚಾರ್ಲೋಟ್ ಎಡ್ವರ್ಡ್ಸ್ ರನ್ನು ದಾಖಲೆ ಹಿಂದಿಕ್ಕಿ ಮಿಥಾಲಿ ರಾಜ್  ವಿಶ್ವದಾಖಲೆ ಬರೆದಿದ್ದಾರೆ.

ಎಡ್ವರ್ಡ್ಸ್ ಎಲ್ಲಾ ಆವೃತ್ತಿ ಸೇರಿ

ಒಟ್ಟಾರೆ  10,273 ರನ್ ಗಳಿಸಿದ್ರು. ಇವರನ್ನು ಹಿಂದಿಕ್ಕಲು ಮಿಥಾಲಿ ಅವರಿಗೆ ಕೇವಲ 12 ರನ್ ಅಗತ್ಯವಿತ್ತು. ಅಂತಿಮ ಏಕದಿನ ಪಂದ್ಯದಲ್ಲಿ ಮಿಥಾಲಿ ರಾಜ್ ಅರ್ಧ ಶತಕ ಭಾರಿಸುವ ಮೂಲಕ ಎಡ್ವರ್ಡ್ಸ್ ದಾಖಲೆಯನ್ನು ಮುರಿದಿದ್ದಾರೆ.

Leave a Comment