ಆನ್‌ಲೈನ್ ಗೇಮ್‌ನಲ್ಲಿ 40 ಸಾವಿರ ರೂಪಾಯಿ ಕಳೆದುಕೊಂಡ 13 ವರ್ಷದ ಬಾಲಕ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಛತಾರಪುರ ಜಿಲ್ಲೆಯ ಶಾಂತಿನಗರದ ನಿವಾಸಿಯಾಗಿದ್ದ ಬಾಲಕ ನೇಣಿಗೆ ಶರಣಾಗಿದ್ದಾನೆ.ತಾಯಿ ಕೆಲಸ ಹೋಗುತ್ತಿದ್ದಾಗ ಬಾಲಕ ಹಾಗೂ ಆತನ ಸೋದರಿ ಮಾತ್ರ ಮನೆಯಲ್ಲಿ ಇರುತ್ತಿದ್ದರು. ಆ ಸಂದರ್ಭದಲ್ಲಿ ಬಾಲಕ ಆನ್‌ಲೈನ್ ಗೇಮ್ ಆಡುತ್ತಿದ್ದ.ಒಂದು ದಿನ ತಾಯಿಯ ಬ್ಯಾಂಕ್ ಖಾತೆಯಿಂದ 1,500 ಡೆಬಿಟ್ ಆಗಿದೆ. ಮನೆಗೆ ಬಂದ ತಾಯಿ ಮಗನ ಕರೆದು ಪ್ರಶ್ನಿಸಿದ್ದಾಳೆ. ಆನ್ ಲೈನ್ ಗೇಮ್‌ಗೆ ಹಣ ಖರ್ಚು ಮಾಡಿದ್ದಾಗಿ ಬಾಲಕ ತಾಯಿ
ಬಳಿ ತಪ್ಪೋಪ್ಪಿಕೊಡಿದ್ದಾನೆ. ಆದರೂ ತಾಯಿ ಆತನಿಗೆ ಬಾಯಿಗೆ ಬಂದಹಾಗೆ ಬೈದಿದ್ದಾರೆ. ಇದ್ರಿಂದ ನೊಂದ ಬಾಲಕ ರೂಂಗೆ ಹೋಗಿ ಸೂಸೈಡ್ ನೋಟ್ ಬರೆದಿಟ್ಟು ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತಾಯಿಯ ಬ್ಯಾಂಕ್ ಖಾತೆಯಿಂದ 40 ಸಾವಿರ ವಿತ್ ಡ್ರಾ ಮಾಡಿ ಫ್ರೀ ಫೈರ್ ಆನ್ ಲೈನ್ ಆಟದಲ್ಲಿ ಸೋತಿದ್ದೇ ಎಂದು ಡೆತ್ ನೋಟ್‌ನಲ್ಲಿ ಬಾಲಕ ಉಲ್ಲೇಖಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.















