ಬಂಟ್ವಾಳ :ಬಿ.ಸಿ ರೋಡ್ ನಲ್ಲಿರುವ ಶ್ರೀ ಸಾಯಿ ಕಿಡ್ಸ್ ಝೋನ್ ವಿದ್ಯಾಸಂಸ್ಥೆ ಗಳ ಪೋಷಕರ ಕ್ರೀಡಾಕೂಟವು ಜ.5ರಂದು ಆದಿತ್ಯವಾರ ಎಸ್ ವಿ ಎಸ್ ದೇವಳ ಆಂಗ್ಲ ಮಾದ್ಯಮ ಶಾಲಾ ಕ್ರೀಡಾಂಗಣ ಬಂಟ್ವಾಳ ದಲ್ಲಿ ಆಯೋಜಿಸಲಾಯಿತು.
ಕ್ರೀಡಾಕೂಟದ ಉದ್ಘಾಟನೆಯನ್ನು ರಕ್ಷಕ ಶಿಕ್ಷಕ ಸಂಘ ದ ಅಧ್ಯಕ್ಷ ಜ್ಞಾನೇಶ್ ರಾವ್ ದೀಪ ಬೆಳಗಿಸಿ ಶುಭ ಹಾರೈಸಿದರು. ವೇದಿಕೆಯಲ್ಲಿ ಉಪಾಧ್ಯಕ್ಷೆ ಸುಪ್ರೀತಾ ಕೋಶಾದ್ಯಕ್ಷ ದೇವೇಂದ್ರಪ್ಪ , ಆಡಳಿತ ಮಂಡಳಿಯ ಸದಸ್ಯೆ ಆರತಿ ಅಮೀನ್ ಶಾಲಾ ಮುಖ್ಯೋಪಾಧ್ಯಾಯಿನಿ ದೀಕ್ಷಿತ, ಕಾರ್ಯಕಾರಿ ಮಂಡಳಿಯ ಸದಸ್ಯರು ಭಾಗವಹಿಸಿದ್ದರು.
ಶಾಲಾ
ಸಂಚಾಲಕ ಐತಪ್ಪ ಪೂಜಾರಿ ಸ್ವಾಗತಿಸಿದರು.ನಂತರ ಪೋಷಕರಿಗೆ ವಿವಿಧ ಕ್ರೀಡಾ ಸ್ಪರ್ಧೆಗಳು ನಡೆಯಿತು. ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.ದೈಹಿಕ ಶಿಕ್ಷಣ ಶಿಕ್ಷಕ ಚಿನ್ನಪ್ಪ . ದೈಹಿಕ ಶಿಕ್ಷಣ ಶಿಕ್ಷಕಿಯರಾದ ಆಶಾಲತಾ ,ಜಯಶ್ರೀ ಹಾಗೂ ಸಂಸ್ಥೆಯ ಶಿಕ್ಷಕಿಯರು ಶಿಕ್ಷಕ ತರಭೇತಿ ಕೇಂದ್ರದ ವಿದ್ಯಾರ್ಥಿಗಳು,,ಸಿಬ್ಬಂದಿ ವರ್ಗದವರು ಸಹಕರಿಸಿದರು.












