ನೆತ್ತರಕೆರೆ :ಗ್ರಾಮ ಸಮಾವೇಶ ಹಾಗೂ ಶ್ರೀ ಶನೈಶ್ಚರ ಪೂಜಾ ಸೇವಾ ಸಮಿತಿ ರಚನಾ ಸಭೆ.

Coastal Bulletin
ನೆತ್ತರಕೆರೆ :ಗ್ರಾಮ ಸಮಾವೇಶ ಹಾಗೂ ಶ್ರೀ ಶನೈಶ್ಚರ ಪೂಜಾ ಸೇವಾ ಸಮಿತಿ ರಚನಾ ಸಭೆ.

ಬಂಟ್ವಾಳ : ಗ್ರಾಮ ವಿಕಾಸ ಪ್ರತಿಷ್ಠಾನ ನೆತ್ತರಕೆರೆ ಇದರ ಅಶ್ರಯದಲ್ಲಿ ಪ್ರತಿ ಮೂರು ವರ್ಷಕ್ಕೊಮ್ಮೆ ನಡೆಯುವ ಸಾಮೂಹಿಕ ಶ್ರೀ ಶನೈಶ್ಚರ ಪೂಜಾ ಕಾರ್ಯಕ್ರಮದ ಅಂಗವಾಗಿ ಗ್ರಾಮ ಸಮಾವೇಶ ಹಾಗೂ ಶ್ರೀ ಶನೈಶ್ಚರ ಪೂಜಾ ಸೇವಾ ಸಮಿತಿ ರಚನಾ ಸಭೆಯು ಸೆ. 29ರಂದು ಆದಿತ್ಯವಾರ ಮುಂಡಾಜೆಗುತ್ತು ವಿಠ್ಠಲ ಶೆಟ್ಟಿ ಸಭಾ ಭವನ ನೆತ್ತರಕೆರೆಯಲ್ಲಿ ನಡೆಯಿತು.

ಗ್ರಾಮ ಸಮಾವೇಶ ಕಾರ್ಯಕ್ರಮವನ್ನು ಭಾರತ ಮಾತೆಗೆ ದೀಪ ಬೆಳಗಿಸುವುದರ ಮೂಲಕ ರಾಷ್ಟ್ರೀಯ ಸ್ವಯಂಸೇವಕ ಸಂಘ ಕೇರಳ ರಾಜ್ಯ ಕಣ್ಣೂರು ವಿಭಾಗದ ಕುಟುಂಬ ಪ್ರಬೋಧನ್ ಪ್ರಮುಖರಾದ ಪುಂಡರಿಕಾಕ್ಷ ಉದ್ಘಾಟಿಸಿ ಮಾತನಾಡಿ ಗ್ರಾಮದ ಜನರು ಉತ್ತಮ ಸಂಸ್ಕಾರ, ಶಿಕ್ಷಣಗಳಿಂದ ಸದ್ಗುಣ ಸದಾಚಾರಗಳನ್ನು ಬೆಳೆಸಿಕೊಂಡು ಗ್ರಾಮದ ಅಭಿವೃದ್ಧಿಯೊಂದಿಗೆ ಸುಸಂಸ್ಕೃತ ಸಮಾಜ ನಿರ್ಮಾಣ ಸಾಧ್ಯ ಎಂದು ಹೇಳಿದರು.

ವೇದಿಕೆಯಲ್ಲಿ ಶನೈಶ್ಚರ ಪೂಜಾ ಸೇವಾ ಸಮಿತಿಯ ನಿಕಟ ಪೂರ್ವ ಅಧ್ಯಕ್ಷರುಗಳಾ ಹೊನ್ನಪ್ಪ ಸುವರ್ಣ ನೆತ್ತರಕೆರೆ, ರಾಮಚಂದ್ರ ನೆತ್ತರಕೆರೆ, ಪದ್ಮನಾಭ ಶೆಟ್ಟಿ ಪುಂಚಮೆ, ನವೋದಯ ಮಿತ್ರ ಕಲಾ ವೃಂದದ ಗೌರವಾಧ್ಯಕ್ಷ ಪಿ ಸುಬ್ರಮಣ್ಯ ರಾವ್ ನೇತ್ರಾವತಿ ಮಾತೃ ಮಂಡಳಿಯ ಸಂಚಾಲಕಿ ಲಲಿತಾ ಸುಂದರ್ ಉಪಸ್ಥಿತರಿದ್ದರು 

ನವೋದಯ ಮಿತ್ರ ಕಲಾ ವೃಂದದ ಸಂಚಾಲಕ

ದಾಮೋದರ ನೆತ್ತರಕೆರೆ ಪ್ರಸ್ತಾವನೆಗೈದರು. ಗ್ರಾಮವಿಕಾಸ ಪ್ರತಿಷ್ಠಾನದ ಸಂಚಾಲಕ ಸಂತೋಷ್ ಕುಮಾರ್ ಸ್ವಾಗತಿಸಿ ಕಾರ್ಯದರ್ಶಿ ಶ್ರೀಧರ್ ಕಾರ್ಯಕ್ರಮ ನಿರೂಪಿಸಿದರು.


ಈ ಸಂದರ್ಭದಲ್ಲಿ ಶ್ರೀ ಶನೈಶ್ಚರ ಪೂಜಾ ಸೇವಾ ಸಮಿತಿಯನ್ನು ರಚಿಸಲಾಯಿತು 

ಅಧ್ಯಕ್ಷರಾಗಿ ರಘುನಾಥ ಸಪಲ್ಯ,ಕಾರ್ಯದರ್ಶಿ. ವಿದ್ಯಾ ರಾಜ್ ಕಾಪಿಕಾಡ್, ಕೋಶಾಧಿಕಾರಿ ರವೀಂದ್ರ ಯು ಜಿ. ಉಪಾಧ್ಯಕ್ಷರಾಗಿ ಗೋಪಾಲ್ ಕುಲಾಲ್ ಗೋವಿಂತೋಟ, ಶೇಖರ ಮುಂಡಾಜೆ, ಶ್ರೀಜಿತ್ ಗೋವಿಂತೋಟ, ವೀಣಾ ಗೋವಿಂತೋಟ, ಸುನಿತಾ ಬೆರ್ವ, ಜೊತೆ ಕಾರ್ಯದರ್ಶಿಗಳಾಗಿ ವಜ್ರೇಶ್ ಬದ್ಯಾರ್, ಆನಂದ ಪಕೋಲಿಮಾರ್, ಶರತ್ ಮಜಿ, ಲಿಖಿತಾ ನೆತ್ತರಕೆರೆ, ಯಶವಂತಿ ಪ್ರಕಾಶ್ ನೆತ್ತರಕೆರೆ ಹಾಗೂ ಗೌರವ ಸಲಹೆಗಾರರಾಗಿ ಸುರೇಶ್ ಭಂಡಾರಿ ಅರ್ಬಿ, ವೆಂಕಟ್ ರಾವ್, ಸುಬ್ರಾಯ ರಾವ್,ಸುರೇಶ್ ನಡುಬೈಲು, ಪುರುಷೋತ್ತಮ ಹೊಲ್ಲರ ಬೈಲು ಆಯ್ಕೆಯಾದರು.

Leave a Comment